ಸಿನಿಮಾ

2022 ರ ಭಾರತದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿ

Srinivasamurthy VN
2021 ರಲ್ಲಿ ಅಕ್ಷಯ್ ಕುಮಾರ್ ಅವರನ್ನು ಕೆಳಗಿಳಿಸಿ ಎರಡನೇ ಮೌಲ್ಯಯುತ ಶ್ರೀಮಂತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ರಣವೀರ್ ಸಿಂಗ್, 2022 ರಲ್ಲಿ ಹೆಚ್ಚು ಮೌಲ್ಯಯುತ ಭಾರತೀಯ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. 2022 ರಲ್ಲಿ 181.7 ಮಿಲಿಯನ್ USD ಮೌಲ್ಯದೊಂದಿಗೆ ಕೊಹ್ಲಿಗಿಂತ ರಣವೀರ್ ಸಿಂಗ್ ಮುಂದಿದ್ದಾರೆ.
2021 ರಲ್ಲಿ  ಅಕ್ಷಯ್ ಕುಮಾರ್ ಅವರನ್ನು ಕೆಳಗಿಳಿಸಿ ಎರಡನೇ ಮೌಲ್ಯಯುತ ಶ್ರೀಮಂತ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ರಣವೀರ್ ಸಿಂಗ್, 2022 ರಲ್ಲಿ ಹೆಚ್ಚು ಮೌಲ್ಯಯುತ ಭಾರತೀಯ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. 2022 ರಲ್ಲಿ 181.7 ಮಿಲಿಯನ್ USD ಮೌಲ್ಯದೊಂದಿಗೆ ಕೊಹ್ಲಿಗಿಂತ ರಣವೀರ್ ಸಿಂಗ್ ಮುಂದಿದ್ದಾರೆ.
2022 ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ 2022 ರಲ್ಲಿ ಅವರ ಬ್ರಾಂಡ್ ಮೌಲ್ಯದಲ್ಲಿ ಕೊಂಚ ಕುಸಿತಗೊಂಡಿದ್ದು, ಒಟ್ಟಾರೆ ಅವರ ಬ್ರ್ಯಾಂಡ್ ಮೌಲ್ಯವು 2021 ರಲ್ಲಿ USD 185.7 ಮಿಲಿಯನ್ ನಿಂದ USD 176.9 ಮಿಲಿಯನ್‌ಗೆ ಕುಸಿತ ಕಂಡಿದೆ. ಸಲಹಾ ಸಂಸ್ಥೆ ಕ್ರೋಲ್‌ನ ವರದಿಯ ಪ್ರಕಾರ ಇದೇ ಕೊಹ್ಲಿ 2020 ರಲ್ಲಿ 237.7 ಮಿಲಿ
ಇನ್ನು ಒಟ್ಟಾರೆ 153.6 ಮಿಲಿಯನ್ ಡಾಲರ ಮೌಲ್ಯದೊಂದಿಗೆ ನಟ ಅಕ್ಷಯ್ ಕುಮಾರ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
2021 ರಲ್ಲಿ USD 68.1 ಮಿಲಿಯನ್‌ ಬ್ರಾಂಡ್ ಮೌಲ್ಯ ಹೊಂದಿದ್ದ ಆಲಿಯಾ ಭಟ್, 2022 ರಲ್ಲಿ USD 102.9 ಮಿಲಿಯನ್‌ಗೆ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆಯೊಂದಿಗೆ ಪಟ್ಟಿಯಲ್ಲಿ 4 ನೇ ಸ್ಥಾನಕ್ಕೇರಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಅವರು ಬ್ರಾಂಡ್ ಮೌಲ್ಯ USD 82.9 ಮಿಲಿಯನ್ ನಷ್ಟಿದೆ.
ಮಾಜಿ ಕ್ರಿಕೆಟಿಗ ಎಂ ಎಸ್ ಧೋನಿ 80.3 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.
ನಟ ಅಮಿತಾಬ್ ಬಚ್ಚನ್ USD 79 ಮಿಲಿಯನ್ ಮೌಲ್ಯದೊಂದಿಗೆ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದಾರೆ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 73.6 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.
ನಟ ಹೃತಿಕ್ ರೋಷನ್ USD 71.6 ಮಿಲಿಯನ್ ಮೌಲ್ಯದೊಂದಿಗೆ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ.
2023 ರಲ್ಲಿ ಪಠಾಣ್‌ನೊಂದಿಗೆ ಯಶಸ್ಸಿನಲ್ಲಿ ತೇಲುತ್ತಿರುವ ಶಾರುಖ್ ಖಾನ್, ಒಟ್ಟಾರೆಯಾಗಿ USD 55.7 ಮಿಲಿಯನ್ ಬ್ರ್ಯಾಂಡ್ ಮೌಲ್ಯವನ್ನು ಹೊಂದಿದ್ದು, ಹತ್ತನೇ ಸ್ಥಾನದಲ್ಲಿದ್ದಾರೆ.
ಶಾರುಖ್ ಖಾನ್ ಅವರ ನಂತರದ ಸ್ಥಾನದಲ್ಲಿ ನಟ ಸಲ್ಮಾನ್ ಖಾನ್ USD 54.5 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ 11ನೇ ಸ್ಥಾನದಲ್ಲಿದ್ದಾರೆ.
SCROLL FOR NEXT