ಕೊರೋನಾ ವೈರಸ್ ಹರಡದಂತೆ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಕೆಲ ಸೆಲೆಬ್ರಿಟಿಗಳು ಮನೆಯಲ್ಲೇ ಇರಿ ಎಂದು ಸಂದೇಶ ನೀಡುತ್ತಿದ್ದರೆ ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಮಾತ್ರ ಜಾಲಿ ರೈಡ್ ಮಾಡಿ ಅಪಘಾತ ಮಾಡಿದ್ದಾರೆ.
ಕಳೆದ ರಾತ್ರಿ 3 ಗಂಟೆ ಸುಮಾರಿಗೆ ಶರ್ಮಿಳಾ ಮಾಂಡ್ರೆ ಅವರು ಮದ್ಯಪಾನ ಮಾಡಿ ಜಾಲಿ ರೈಡ್ ಮಾಡಲು ಹೋಗಿ ಅಪಘಾತ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಸ್ನೇಹಿತರ ಜೊತೆ ಶರ್ಮಿಳಾ ಮಾಂಡ್ರೆ ಜಾಗ್ವರ್ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಈ ವೇಳೆ ವಸಂತನಗರ ಅಂಡರ್ ಪಾಸ್ ಪಿಲ್ಲರ್ ಗೆ ಕಾರು ಡಿಕ್ಕಿ ಹೊಡೆದಿದೆ.ಈ ವೇಳೆ ಶರ್ಮಿಳಾ ಮಾಂಡ್ರೆ ಅವರ ಮುಖಕ್ಕೆ ಗಾಯವಾಗಿದೆ. ಅಪಘಾತ ನಂತರ ಶರ್ಮಿಳಾ ಸೀನ್ ಕ್ರಿಕೆಯ್ ಮಾಡಿದ್ದು ಅಪಘಾತ ಆಗಿದ್ದು ಜಯನಗರ, ಜೆಪಿನಗರ ಎಂದು ಹೇಳಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಇದೀಗ ಕಾರು ಅಪಘಾತಕ್ಕೂ ಮುನ್ನ ಮಾಜಿ ಸಚಿವರ ಮಗನ ಮನೆಯಲ್ಲಿ ಬಿಂದಾಸ್ ಪಾರ್ಟಿ ಮಾಡಲಾಗಿದೆ ಎಂಬ ಆರೋಪ ಸಹ ಕೇಳಿಬಂದಿದೆ.ಮಾಜಿ ಸಚಿವರ ಪುತ್ರ ಯಾರು ಎಂಬುದು ಇನ್ನು ತನಿಖೆಯಿಂದ ಮಾತ್ರ ತಿಳಿಯಬೇಕಿದೆ.ಶರ್ಮಿಳಾ ಮಾಂಡ್ರೆಶರ್ಮಿಳಾ ಮಾಂಡ್ರೆಶರ್ಮಿಳಾ ಮಾಂಡ್ರೆಶರ್ಮಿಳಾ ಮಾಂಡ್ರೆಶರ್ಮಿಳಾ ಮಾಂಡ್ರೆಶರ್ಮಿಳಾ ಮಾಂಡ್ರೆ