ಹಂಪಿಯ ಆಟೋ ಚಾಲಕನಿಗೆ ಒಲಿದ ಬೆಲ್ಜಿಯಂ ಸುಂದರಿ, ಪ್ರಾಮಾಣಿಕತೆಗೆ ಮನಸೋತ ವಿದೇಶಿ ಪ್ರೀತಿ! 
ಕರ್ನಾಟಕ

ಹಂಪಿಯ ಆಟೋ ಚಾಲಕನಿಗೆ ಒಲಿದ ಬೆಲ್ಜಿಯಂ ಸುಂದರಿ, ಪ್ರಾಮಾಣಿಕತೆಗೆ ಮನಸೋತ ವಿದೇಶಿ ಪ್ರೀತಿ!

ದೇಶ ನೋಡಲು ಬಂದ ವಿದೇಶಿ ಚೆಲುವೆಯೊಬ್ಬಳು ಹಂಪಿಯ ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತಿದ್ದು, ನಾಲ್ಕು ವರ್ಷದ ಪ್ರೀತಿಗೆ ಮದುವೆ ಮುದ್ರೆ ಬಿದ್ದಿದೆ.

ದೇಶ ನೋಡಲು ಬಂದ ವಿದೇಶಿ ಚೆಲುವೆಯೊಬ್ಬಳು ಹಂಪಿಯ ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತಿದ್ದು, ನಾಲ್ಕು ವರ್ಷದ ಪ್ರೀತಿಗೆ ಶುಕ್ರವಾರ (ನವೆಂಬರ್‌ 25) ಮದುವೆಯ ಮುದ್ರೆ ಬಿದ್ದಿದೆ.
ಹಂಪಿಯ ಯುವಕ ಅನಂತರಾಜು ಮತ್ತು ವಿದೇಶಿ ಕನ್ಯೆ ಕೆಮಿಲ್ ರನ್ನು ವರಿಸಿದ್ದಾರೆ.
ಬೆಲ್ಜಿಯಂ ದೇಶದ ಕೆಮಿಲ್ ಯನ್ನು ಅನಂತರಾಜು ಎಂಬುವವರು ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಅದ್ಧೂರಿ ವಿವಾಹ ಮಾಡಿಕೊಂಡರು.
ಭಾರತೀಯ ಸಂಪ್ರದಾಯದಂತೆ ಶುಕ್ರವಾರ ಬೆಳಗಿನ 9.25ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ.
ಈ ದೇಶಿ-ವಿದೇಶಿ ಜೋಡಿಯ ಮದುವೆ 2 ವರ್ಷದ ಹಿಂದೆಯೇ ಆಗಬೇಕಿತ್ತಂತೆ. ಆದರೆ ಕೊರೊನಾದಿಂದಾಗಿ ಪ್ರೇಮ ವಿವಾಹವನ್ನು ಮುಂದೂಡಬೇಕಾಯಿತು.
ಕೆಮಿಲ್‌ ತಂದೆ ಜೀಪ್‌ ಫಿಲಿಪ್ಪೆಯವರು ಮಗಳ ಮದುವೆಯನ್ನು ಬೆಲ್ಜಿಯಂನಲ್ಲಿ ಅದ್ಧೂರಿಯಾಗಿ ಮಾಡಬೇಕೆಂದು ಅಂದುಕೊಂಡಿದ್ದರಂತೆ.
ಆದರೆ ಹಿಂದು ಸಂಪ್ರದಾಯದಂತೆ ಹಂಪಿಯಲ್ಲಿಯೇ ಮದುವೆಗೆ ನಿರ್ಧರಿಸಿ ಗುರುವಾರ ಸಂಜೆ ನಿಶ್ಚಿತಾರ್ಥ ನೆರವೇರಿಸಿಕೊಂಡು, ಶುಕ್ರವಾರ ಬೆಳಗ್ಗೆ ಅದ್ಧೂರಿ ಮದುವೆ ಮಾಡಿಸಿದ್ದಾರೆ.
ಅನಂತರಾಜು ಹಂಪಿ ಜನತಾ ಪ್ಲಾನ್‌ನ ರೇಣುಕಮ್ಮ ದಿ. ಅಂಜಿನಪ್ಪ ಅವರ ಸುಪುತ್ರನಾಗಿದ್ದು, ಆಟೋ ಚಾಲಕನಾಗಿ ಜತೆಗೆ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.
ನಾಲ್ಕೈದು ವರ್ಷಗಳ ಹಿಂದೆ ಹಂಪಿ ವೀಕ್ಷಣೆಗೆ ಬಂದಿದ್ದ ಕೆಮಿಲ್ ಕುಟುಂಬದವರು, ಅನಂತರಾಜು ಪ್ರಾಮಾಣಿಕತೆಗೆ ಮನ ಸೋತಿದ್ದರು.
ಈ ಮಧ್ಯೆ ಕೆಮಿಲ್‌, ಅನಂತರಾಜು ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅನಂತರಾಜು ವಿದೇಶಿ ಕನ್ಯೆ ಕೆಮಿಲ್ ಕೈ ಹಿಡಿದಿದ್ದಾರೆ.
ಹಿಂದು ಸಂಪ್ರದಾಯದಂತೆ ಮದುವೆಯಾದ ಈ ಜೋಡಿಯ ಕುಟುಂಬಸ್ಥರು ದೇಸಿ ಉಡುಪಿನಲ್ಲಿ ಗಮನ ಸೆಳೆದರು.
ಮಹಿಳೆಯರೆಲ್ಲ ಸೀರೆಯುಟ್ಟು, ಕೈತುಂಬ ಬಳೆ ತೊಟ್ಟು, ಹಣೆಗೆ ಕುಂಕುಮ ಇಟ್ಟು ಮಿರಮಿರ ಮಿಂಚಿದ್ದರೆ, ಗಂಡುಮಕ್ಕಳು ಪಂಚೆ ಶರ್ಟ್‌ ತೊಟ್ಟು ಸಂಭ್ರಮಿಸಿದರು.
ಈ ದೇಶ-ವಿದೇಶಿ ಪ್ರೀತಿಗೆ ಗುರು ಹಿರಿಯರು ಸೇರಿ ಆಶೀರ್ವದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕ್ ಭದ್ರತಾ ಪಡೆ ಪ್ರಧಾನ ಕಚೇರಿ ಹೊರಗೆ ಕಾರ್ ಬಾಂಬ್ ಸ್ಫೋಟ; ಕನಿಷ್ಠ 10 ಮಂದಿ ಸಾವು

ಉಚಿತ ಔಷಧ ಯೋಜನೆ: ಕೆಮ್ಮಿನ ಸಿರಪ್ ಸೇವಿಸಿದ್ದ 5 ವರ್ಷದ ಬಾಲಕ ಸಾವು, ಮತ್ತೊಂದು ಮಗು ಸ್ಥಿತಿ ಗಂಭೀರ!

ಲಡಾಖ್ ಜನರಿಗೆ ಮೋದಿ 'ದ್ರೋಹ'; ಪೊಲೀಸ್ ಗುಂಡಿನ ದಾಳಿ ಬಗ್ಗೆ ನ್ಯಾಯಾಂಗ ತನಿಖೆಗೆ ರಾಹುಲ್ ಆಗ್ರಹ

ಪ್ರವಾಹಕ್ಕೆ ಕಲ್ಯಾಣ ಕರ್ನಾಟಕ ತತ್ತರ: ವೈಮಾನಿಕ ಸಮೀಕ್ಷೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ

Dharmasthala Case: ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ SITಗೆ ನಿರ್ದೇಶನ: ಸಚಿವ ಜಿ ಪರಮೇಶ್ವರ

SCROLL FOR NEXT