ಕರ್ನಾಟಕ

ಬೆಂಗಳೂರಿನ ಇಸ್ರೊ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ; ಚಂದ್ರಯಾನ-3 ಯಶಸ್ಸಿಗೆ ಅಭಿನಂದನೆ- Photos

Sumana Upadhyaya
ಚಂದ್ರಯಾನ-3 ಯಶಸ್ವಿ ಹಿನ್ನಲೆಯಲ್ಲಿ ನರೇಂದ್ರ ಮೋದಿಯವರು ಇಸ್ರೋಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಕ್ರಂ ಲ್ಯಾಂಡರ್‌ ಮಾದರಿ ಉಡುಗೊರೆ ನೀಡಿದ ಇಸ್ರೋ ಅಧ್ಯಕ್ಷ ಸೋಮನಾಥ್.
ಚಂದ್ರಯಾನ-3 ಯಶಸ್ವಿ ಹಿನ್ನಲೆಯಲ್ಲಿ ನರೇಂದ್ರ ಮೋದಿಯವರು ಇಸ್ರೋಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಕ್ರಂ ಲ್ಯಾಂಡರ್‌ ಮಾದರಿ ಉಡುಗೊರೆ ನೀಡಿದ ಇಸ್ರೋ ಅಧ್ಯಕ್ಷ ಸೋಮನಾಥ್.
ಪ್ರಧಾನಿ ಮೋದಿಯವರಿಗೆ ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೋ ಉಡುಗೊರೆ ನೀಡಿದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್
ಪ್ರಧಾನಿ ಮೋದಿಗೆ ಹಸ್ತಲಾಘವ
ಇಂದು ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಮೂರು ಮಹತ್ವದ ಘೋಷಣೆಗಳನ್ನು ಮಾಡಿದರು.
ಚಂದ್ರಯಾನ-3 ಲ್ಯಾಂಡ್ ಆದ ದಿನದ ನೆನಪಿಗಾಗಿ ಆಗಸ್ಟ್​ 23 ನ್ನು ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಣೆ ಮಾಡೋಣ ಎಂದು ಹೇಳಿದರು.
ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡ್ ಆಗಿರುವ ಸ್ಥಳವನ್ನು ಶಿವಶಕ್ತಿ ಎಂದು ನಾಮಕರಣ ಮಾಡಲು ಭಾರತ ನಿರ್ಧಾರ ಮಾಡಿದೆ ಎಂದು ಪ್ರಧಾನಿ ಘೋಷಣೆ ಮಾಡಿದರು.
2019ರಲ್ಲಿ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡ್ ಆಗಲು ವಿಫಲವಾಗಿದ್ದ ಚಂದ್ರಯಾನ-2 ಇಳಿದ ಸ್ಥಳವನ್ನು ಕೂಡ ಮೋದಿ ನಾಮಕರಣ ಮಾಡಿದ್ದಾರೆ. ಅದಕ್ಕೆ ತಿರಂಗ ಪಾಯಿಂಟ್ ಎಂದು ಹೆಸರಿಟ್ಟರು
ಪ್ರಧಾನಿಯವರ ಭಾಷಣ ಆಲಿಸುತ್ತಿರುವ ಇಸ್ರೊ ವಿಜ್ಞಾನಿಗಳು
ಇದಕ್ಕೂ ಮುನ್ನ ಇಸ್ರೊಗೆ ಆಗಮಿಸಿದ ಮೋದಿಯವರನ್ನು ಸ್ವಾಗತಿಸಿದ ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್
ಇಸ್ರೊ ವಿಜ್ಞಾನಿಗಳ ತಂಡದೊಂದಿಗೆ ಗ್ರೂಪ್ ಫೋಟೋ
ಇಸ್ರೊ ಮುಖ್ಯಸ್ಥರಿಂದ ಚಂದ್ರಯಾನ-3 ಬಗ್ಗೆ ಪ್ರಧಾನಿಯವರಿಗೆ ವಿವರಣೆ
ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯವರನ್ನು ಸ್ವಾಗತಿಸಿದ ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ
ಸರ್ಕಾರದ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಂದ ಪ್ರಧಾನಿ ಮೋದಿಗೆ ಸ್ವಾಗತ
ಹೆಚ್ ಎಎಲ್ ನಿಂದ ಇಸ್ರೊ ಕೇಂದ್ರ ಪೀಣ್ಯಕ್ಕೆ ಸಂಚರಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನಸ್ತೋಮ ಕಡೆ ಪ್ರಧಾನಿ ಮೋದಿಯವರು ಕೈಬೀಸುತ್ತಿರುವುದು
ಪ್ರಧಾನಿಯವರನ್ನು ಸ್ವಾಗತಿಸಲು ಬೆಳ್ಳಂಬೆಳಗ್ಗೆ ಸೇರಿದ್ದ ಮಹಿಳಾ ಕಾರ್ಯಕರ್ತರು
ಪ್ರಧಾನಿಯವರಿಗೆ ಕಲಾವಿದರಿಂದ ಸ್ವಾಗತ
SCROLL FOR NEXT