ಜನವರಿ 15, 75ನೇ ರಾಷ್ಟ್ರೀಯ ಸೇನಾ ದಿನ. ಇದೇ ಮೊದಲ ಬಾರಿಗೆ ದೆಹಲಿಯ ಹೊರಗೆ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಸೇನಾ ದಿನ ಪರೇಡ್, ಕಾರ್ಯಕ್ರಮವನ್ನು ಆಚರಿಸಲಾಗಿತ್ತು. ಸೇನಾಪಡೆ ಕಾರ್ಯಕ್ರಮದ ಝಲಕ್ ನಿಮಗಾಗಿ... 
ಕರ್ನಾಟಕ

ಬೆಂಗಳೂರಿನಲ್ಲಿ ನಡೆದ ಸೇನಾ ದಿನ ಕಾರ್ಯಕ್ರಮದ ಫೋಟೋಗಳು

ಜನವರಿ 15, 75ನೇ ರಾಷ್ಟ್ರೀಯ ಸೇನಾ ದಿನ. ಇದೇ ಮೊದಲ ಬಾರಿಗೆ ದೆಹಲಿಯ ಹೊರಗೆ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಸೇನಾ ದಿನ ಪರೇಡ್, ಕಾರ್ಯಕ್ರಮವನ್ನು ಆಚರಿಸಲಾಗಿತ್ತು. ಸೇನಾಪಡೆ ಕಾರ್ಯಕ್ರಮದ ಝಲಕ್ ನಿಮಗಾಗಿ...

ಬೆಂಗಳೂರಿನ ಮದ್ರಾಸ್ ಎಂಜಿನಿಯರಿಂಗ್ ಗ್ರೌಂಡ್ ಮತ್ತು ಸೆಂಟರ್(MEG centre) ಪರೇಡ್ ಮೈದಾನದಲ್ಲಿ ನಡೆದ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಶೌರ್ಯ, ಸಾಧನೆಗಳನ್ನು ಪ್ರದರ್ಶಿಸಲಾಗಿತ್ತು.
ಭಾರತದಲ್ಲಿ ಸೇನಾ ದಿನಾಚರಣೆ ಆರಂಭವಾಗಿದ್ದು 1949ರಲ್ಲಿ. 75 ವರ್ಷಗಳಾಗಿದೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೆಹಲಿಯ ಹೊರಗೆ ಕಾರ್ಯಕ್ರಮ ನಡೆದಿದೆ.
ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು 1949ರ ಜನವರಿ 15ರಂದು ಸೇನಾ ದಿನ ಆಚರಣೆಗೆ ಆರಂಭಿಸಿದರು.
ಅತ್ಯಾಧುನಿಕ ಲಘು ಹೆಲಿಕಾಪ್ಟರ್-ಡಬ್ಲ್ಯುಎಸ್‌ಐ, ಸೇನಾ ವೈಮಾನಿಕ ಹೆಲಿಕಾಪ್ಟರ್‌ಗಳು ಮತ್ತು ಸೇನೆಯ ಸಾಹಸ ವಿಭಾಗದ ಮೈಕ್ರೊಲೈಟ್ ಏರ್‌ಕ್ರಾಫ್ಟ್‌ಗಳ ಆಕರ್ಷಕ ಹಾರಾಟ ನಡೆಯಿತು. ಟೆಂಟ್ ಪೆಗ್ಗಿಂಗ್ ಮತ್ತು ಸಿಕ್ಸ್ ಬಾರ್ ಜಂಪಿಂಗ್ (ಆರು ಅಡೆತಡೆಗಳನ್ನು ಜಂಪ್ ಮಾಡುವುದು) ಸಾಹಸ ಚಟುವಟಿಕೆಗಳ ಪ್ರದರ್ಶನವು ನಡೆಯಿತು.
ಸ್ವಾತಂತ್ರ‍್ಯಾನಂತರ ಮೊದಲ ಭಾರತೀಯ ಕಮಾಂಡರ್ ಇನ್- ಚೀಫ್ ಕನ್ನಡದ ಕೆಎಂ ಕಾರ್ಯಪ್ಪ ಅವರು ಅಧಿಕೃತವಾಗಿ ಭಾರತೀಯ ಸೇನೆಯ ಮುಖ್ಯಸ್ಥರ ಸ್ಥಾನ ಅಲಂಕರಿಸಿದ್ದರ ನೆನಪಿನಾರ್ಥವಾಗಿ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಇಲ್ಲಿಯವರೆಗೆ ಈ ಕಾರ್ಯಕ್ರಮ ದೆಹಲಿಯಲ್ಲಿ ನಡೆಯುತ್ತಿತ್ತು. ಆದರೆ ಮೊದಲ ಬಾರಿಗೆ ದೆಹಲಿ ಹೊರ
ಸಾಹಸ ಪ್ರದರ್ಶನ ಚಟುವಟಿಕೆಗಳಲ್ಲಿ, ಸೇನಾ ವಾಯುಯಾನ ಯುದ್ಧ ಪ್ರದರ್ಶನ ಮತ್ತು ಮಿಲಿಟರಿಯ ಕೆಚ್ಚೆದೆಯ ಯೋಧರ ವಿಶೇಷ ತಂಡಗಳ ಕಾರ್ಯಾಚರಣೆಗಳು ಸೇರಿದ್ದವು. ‘ನಾರ್ತ್ ಈಸ್ಟ್ ವಾರಿಯರ್ಸ್’ ಸಮರ ಕಲೆಗಳ ವಿಸ್ಮಯ-ಸ್ಫೂರ್ತಿದಾಯಕ ಪ್ರದರ್ಶನ ನೀಡಿದರೆ, ಡೇರ್‌ಡೆವಿಲ್ ಪ್ಯಾರಾ ತಂಡಗಳು ಸ್ಕೈ ಡೈವಿಂಗ್‌ನೊಂದಿಗೆ ನೆರೆದಿದ್ದವ
ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಸುರಕ್ಷತೆಯ ಸವಾಲು ನಮಗೆ ಸಾಕಷ್ಟಿತ್ತು. ಅದನ್ನು ಸಮೃದ್ಧವಾಗಿಸಿದ್ದೇವೆ. ಇವತ್ತು ಪ್ರಪಂಚದಲ್ಲಿ ಅಂಡರ್ ವಾಟರ್ ಡ್ರೋನ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಲಗೊಂಡಿದೆ. ನಮ್ಮ ರಕ್ಷಣಾ ವ್ಯವಸ್ಥೆ ಬಲಿಷ್ಠವಾಗಿದೆ.
ನಮ್ಮ ಸೇನೆ ಶೌರ್ಯದಿಂದ ಶತ್ರುಗಳ ಎದೆ ನಡುಗಿದೆ. ನಮ್ಮ ಸೇನೆ ಸಾಹಸ ಪ್ರದರ್ಶನ ಕಾರ್ಗಿಲ್ ಯುದ್ಧದಲ್ಲಿ ಸಬಲತೆ ತೋರಿಸಿದೆ. ನಮ್ಮ ಸುರಕ್ಷತಾ ಹಾಗೂ ರಾಷ್ಟ್ರ ಪ್ರಗತಿಯಲ್ಲಿ ಸೇನೆ ಮುಂದಿದೆ. ರಕ್ಷಣಾ ವ್ಯವಸ್ಥೆಯಲ್ಲಿ ಭದ್ರತೆ, ಸುರಕ್ಷತೆಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ ಎಂದು ರಕ್ಷಣಾ ಸಚಿವರು ಹೇಳಿದರು.
ಭಾರತೀಯ ಸೇನಾಪಡೆ ಮುಖ್ಯಸ್ಥ
ಸೇನಾ ಕಸರತ್ತು
ಸೇನಾಪಡೆ ಮುಖ್ಯಸ್ಥರಿಗೆ ಗೌರವ ವಂದನೆ
ಸೇನಾಪಡೆ ಪ್ರದರ್ಶನ
ವಾಯುಸೇನೆ ಕಸರತ್ತು
ಭಾರತೀಯ ಸೇನೆಯ ಸಹಾಸ, ಯುದ್ಧದ ಸಂದರ್ಭದಲ್ಲಿನ ಕಾರ್ಯಚರಣೆಯನ್ನು ಅಣುಕು ಪ್ರದರ್ಶನದಂತೆ ಪ್ರದರ್ಶಿಸಲಾಯಿತು.
ಮುಖ್ಯ ಅತಿಥಿಯಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಆಗಮಿಸಿದ್ದರು. ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಮತ್ತಿತರ ಭಾರತೀಯ ಸೇನೆಯ ಹಿರಿಯ ಶ್ರೇಣಿಯ ಅಧಿಕಾರಿಗಳ
ಸೇನೆಯ ಪ್ರದರ್ಶನ
ಪ್ರಶಸ್ತಿ, ಗೌರವ ಪ್ರದಾನ ಮಾಡಿದ ರಕ್ಷಣಾ ಸಚಿವರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

SCROLL FOR NEXT