ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದ ಮತದಾರರನ್ನು ಸೆಳೆಯಲು ಬಿಜೆಪಿ ಇಂದು ಪ್ರಧಾನಿ ಮೋದಿಯವರ ಮೆಗಾ ರೋಡ್ ಶೋ ನಡೆಸಿತು 
ಕರ್ನಾಟಕ

ಬೆಂಗಳೂರಿನಲ್ಲಿ ಮೋದಿ 'ಮೇನಿಯಾ': ಭರ್ಜರಿ ರೋಡ್ ಶೋ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ 26 ಕಿ.ಮೀ ರೋಡ್ ಶೋ ನಡೆಸಿದ್ದು ಈ ಸಂದರ್ಭದ ಹಲವಾರು ಚಿತ್ರಗಳು ಇಲ್ಲಿವೆ.

ಮೋದಿಯವರ ಭಾವಚಿತ್ರ ಹಿಡಿದು ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನಸ್ತೋಮ
ಮೋದಿಯವರನ್ನು ಕಂಡಾಗ ಅಚ್ಚರಿ ವ್ಯಕ್ತಪಡಿಸಿದ ಯುವತಿ
ತಂದೆಯ ಹೆಗಲ ಮೇಲೆ ಕುಳಿತು ಬಾಲಕಿಯೊಬ್ಬಳ ಖುಷಿ
ಪ್ರಧಾನ ಮಂತ್ರಿಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನತೆ
ಮೋದಿಯವರಿಗೆ ತುಂಬು ಪ್ರೀತಿಯನ್ನು ಬೆಂಗಳೂರಿಗರು ವ್ಯಕ್ತಪಡಿಸಿದ್ದು ಹೀಗೆ
ನಾಗರಿಕರು ಪ್ರಧಾನಿಯನ್ನು ನೋಡಿ ಖುಷಿಪಟ್ಟಿದ್ದು ಹೀಗೆ. ಇದರಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸೇರಿದ್ದರು ಎಂಬುದು ವಿಶೇಷ
ಸುಮಾರು ಎರಡೂವರೆ ಗಂಟೆ ಕಾಲ ನಡೆದ ರೋಡ್​​ ಶೋದಲ್ಲಿ ಮೋದಿ ಅವರು 13 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ. ಮೊದಲ ದಿನದ ರೋಡ್​ ಶೋದಲ್ಲಿ ಮೋದಿ 26 ಕಿಲೋಮೀರ್​ಗೂ ಹೆಚ್ಚು ಸಂಚರಿಸಿದ್ದಾರೆ.
ಜೆಪಿ ನಗರದ ಬ್ರಿಗೇಡ್‌ ಮಿಲೇನಿಯಂನ ಬಳಿ ಆರಂಭವಾದ ರೋಡ್‌ ಶೋ ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ಅಂತ್ಯವಾಯಿತು. ರೋಡ್​ ಶೋ ಕೊನೆಯಲ್ಲಿ ಮೋದಿ ಅವರು ಕಾಡುಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಬೆಂಗಳೂರಿನ ರೋಡ್​ ಶೋಕ್ಕೆ ಜನರಿಂದ ವ್ಯಕ್ತವಾದ ಅಭೂತಪೂರ್ವ ಸ್ಪಂದನೆಗೆ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮರದ ಮೇಲೆ ಹತ್ತಿ, ಸಿಕ್ಕ ಸಿಕ್ಕ ಕಡೆಗಳಲ್ಲಿ ಯುವಕರು, ಮಕ್ಕಳು, ವಯಸ್ಕರು ಪ್ರಧಾನಿ ಮೋದಿಯನ್ನು ನೋಡಲು ಹಾತೊರೆದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕ್ ಭದ್ರತಾ ಪಡೆ ಪ್ರಧಾನ ಕಚೇರಿ ಹೊರಗೆ ಕಾರ್ ಬಾಂಬ್ ಸ್ಫೋಟ; ಕನಿಷ್ಠ 10 ಮಂದಿ ಸಾವು

ಉಚಿತ ಔಷಧ ಯೋಜನೆ: ಕೆಮ್ಮಿನ ಸಿರಪ್ ಸೇವಿಸಿದ್ದ 5 ವರ್ಷದ ಬಾಲಕ ಸಾವು, ಮತ್ತೊಂದು ಮಗು ಸ್ಥಿತಿ ಗಂಭೀರ!

ಪ್ರವಾಹಕ್ಕೆ ಕಲ್ಯಾಣ ಕರ್ನಾಟಕ ತತ್ತರ: ವೈಮಾನಿಕ ಸಮೀಕ್ಷೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ

Dharmasthala Case: ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ SITಗೆ ನಿರ್ದೇಶನ: ಸಚಿವ ಜಿ ಪರಮೇಶ್ವರ

ಜಿಲ್ಲಾ ಉಸ್ತುವಾರಿ ಸಚಿವರನ್ನು ಎಸಿ ಕೋಣೆಯಿಂದ ಹೊರ ಹಾಕಿ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವಂತೆ ಮಾಡಿ: ಸಿಎಂಗೆ ವಿಜಯೇಂದ್ರ ಆಗ್ರಹ

SCROLL FOR NEXT