ಮುಹಮ್ಮದ್ ಅಲಿ

ಬಾಕ್ಸಿಂಗ್ ದಂತಕತೆ ಎಂದೇ ವಿಶ್ವದಾದ್ಯಂತ ಗುರ್ತಿಸಿಕೊಂಡಿದ್ದ ಮುಹಮ್ಮದ್ ಅಲಿ ಅವರು ಪಾರ್ಕಿನ್ಸನ್ ಕಾಯಿಲೆ ತುತ್ತಾಗಿ ಜೂನ್.3 ರಂದು ಸಾವನ್ನಪ್ಪಿದ್ದರು. ಮುಹಮ್ಮದ್ ಅಲಿ ಅವರಿಗೆ 74 ವರ್ಷ ವಯಸ್ಸಾಗಿತ್ತು.
 
ಹಿನ್ನೋಟ 2016

ಹಿನ್ನೋಟ 2016: ನಮ್ಮನ್ನಗಲಿದ ಗಣ್ಯರು, ಪ್ರಮುಖರು

ಸುಲಭಾ ದೇಶಪಾಂಡೆ

ಮರಾಠಿ ಸಿನಿಮಾ ಹಿರಿಯ ನಟಿ ಮತ್ತು ರಂಗಭೂಮಿ ಕಲಾವಿದೆ ಸುಲಭಾ ದೇಶಪಾಂಡೆ ಅವರು ಅನಾರೋಗ್ಯದಿಂದಾಗಿ ಜೂನ್ 5 ರಂದು ಸಾವನ್ನಪ್ಪಿದ್ದರು, ಸುಲಭಾ ಅವರಿಗೆ 79 ವರ್ಷ ವಯಸ್ಸಾಗಿತ್ತು.
ಗೌರವ್ ತಿವಾರಿ

ಭಾರತದ ಭೂತಗಳ ಪತ್ತೇಧಾರಿ ಎಂದೇ ಹೆಸರು ಮಾಡಿದ್ದ ಗೌರವ್ ತಿವಾರಿಯವರು ಜುಲೈ 11 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು, ಗೌರವ್ ಅವರಿಗೆ 32 ವರ್ಷ ವಯಸ್ಸಾಗಿತ್ತು.

ಜ್ಯೋತಿ ಲಕ್ಷ್ಮಿ

70-80ರ ದಶಕದ ನಟಿ ಹಾಗೂ ನರ್ತಕಿ ಜ್ಯೋತಿ ಲಕ್ಷ್ಮಿ ಅವರು ರಕ್ತದ ಕ್ಯಾನ್ಸರ್ ನಿಂದಾಗಿ ಆಗಸ್ಟ್ 9 ರಂದು ಸಾವನ್ನಪ್ಪಿದ್ದರು, ಜ್ಯೋತಿ ಲಕ್ಷ್ಮಿ ಅವರಿಗೆ 63 ವರ್ಷ ವಯಸ್ಸಾಗಿತ್ತು.
ಕಾನು ಗಾಂಧಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ  ಮೊಮ್ಮಗ ಹಾಗೂ ನಾಸಾ ಮಾಜಿ ವಿಜ್ಞಾನಿ ಕಾನು ಗಾಂಧಿಯವರು ವೃದ್ಧಾಪ್ಯ ಸಾಮಾನ್ಯ ಸಮಸ್ಯೆಯಿಂದಾಗಿ ನವೆಂಬರ್ 7 ರಂದು ಸಾವನ್ನಪ್ಪಿದ್ದರು. ಕಾನು ಗಾಂಧಿಯವರಿಗೆ 87 ವರ್ಷ ವಯಸ್ಸಾಗಿತ್ತು.
ಶ್ರೀನಿವಾಸ್ ಕುಮಾರ್ ಸಿನ್ಹಾ

ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಲೆ.ಜ.ಶ್ರೀನಿವಾಸ್ ಕುಮಾರ್ ನಿನ್ಹಾ ಅವರು ಅನಾರೋಗ್ಯದಿಂದಾಗಿ ನವೆಂಬರ್ 7 ರಂದು ಸಾವನ್ನಪ್ಪಿದ್ದರು. ಶ್ರೀನಿವಾಸ್ ಅವರಿಗೆ 90 ವರ್ಷ ವಯಸ್ಸಾಗಿತ್ತು.

ಕೆ.ಸುಭಾಷ್

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಸುಭಾಷ್ ಅವರು ಕಿಡ್ನಿ ವೈಫಲ್ಯದಿಂದಾಗಿ ನವೆಂಬರ್ 24 ರಂದು ಸಾವನ್ನಪ್ಪಿದ್ದರು. ಸುಭಾಷ್ ಅವರಿಗೆ 57 ವರ್ಷ ವಯಸ್ಸಾಗಿತ್ತು.

ಹರೀಶ್

ಅರಗಿಣಿ ಧಾರಾವಹಿಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಖ್ಯಾತ ಕಿರುತೆರೆ ನಟ ಹರೀಶ್ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಸೆಪ್ಟೆಂಬರ್ 6 ರಂದು ಸಾವನ್ನಪ್ಪಿದ್ದರು, ಹರೀಶ್ ಅವರಿಗೆ 26 ವರ್ಷ ವಯಸ್ಸಾಗಿತ್ತು.
ಅನಿಲ್

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಅನಿಲ್ ಅವರು ನವೆಂಬರ್ 7 ರಂದು ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು,
ಉದಯ್

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಉದಯ್ ಅವರು ನವೆಂಬರ್ 7 ರಂದು ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು,
ಸಂಕೇತ್ ಕಾಶಿ

ಕನ್ನಡ ಚಿತ್ರರಂಗದ ಪ್ರಮುಖ ಹಾಸ್ಯ ನಟರದಲ್ಲಿ ಒಬ್ಬರಾಗಿದ್ದ ಸಂಕೇತ್ ಕಾಶಿ ಅವರು ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಆಗಸ್ಟ್ 6 ರಂದು ಸಾವನ್ನಪ್ಪಿದ್ದರು. ಸಂಕೇತ್ ಅವರಿಗೆ 60 ವರ್ಷ ವಯಸ್ಸಾಗಿತ್ತು.
ಅಶೋಕ್ ಬಾದರದಿನ್ನಿ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಅಶೋಕ್ ಬಾದರದಿನ್ನಿ ಅವರು ಅನಾರೋಗ್ಯದಿಂದಾಗಿ ನವೆಂಬರ್ 24 ರಂದು ಸಾವನ್ನಪ್ಪಿದ್ದರು. ಅಶೋಕ್ ಅವರಿಗೆ 66 ವರ್ಷ ವಯಸ್ಸಾಗಿತ್ತು.
ಸುಭಾಷ್ ಪಾಲ್

ಪರ್ವಾತಾರೋಹಿ ಸುಭಾಷ್ ಪಾಲ್ ಅವರು ವಿಶ್ವದ ಅತಿಎತ್ತರದ ಪರ್ವತ ಶ್ರೇಣಿ ಮೌಂಟ್ ಎವರೆಸ್ಟ್ (ಗೌರಿಶಿಖರ) ಪರ್ವತಾರೋಹಣ ಸಂದರ್ಭದಲ್ಲಿ ಸಾವನ್ನಪ್ಪಿದ್ದರು.

ಕಲಾಭವನ್ ಮಣಿ

ಬಹುಭಾಷಾ ನಟ ಹಾಗೂ ಮಲಯಾಳಂ ಚಿತ್ರರಂಗದ ಖ್ಯಾಟ, ಗಾಯಕ ಕಲಾಭವನ್ ಮಣಿ ಅವರು ಲಿವರ್ ಸಮಸ್ಯೆಯಿಂದಾಗಿ ಮಾರ್ಚ್ 6 ರಂದು ಸಾವನ್ನಪ್ಪಿದ್ದರು. ಕಲಾಭವನ್ ಅವರಿಗೆ 45 ವರ್ಷ ವಯಸ್ಸಾಗಿತ್ತು.
ಫಿಡಲ್ ಕ್ಯಾಸ್ಟ್ರೋ

ವಿಶ್ವದ ದೊಡ್ಡಣ್ಣ ಅಮೆರಿಕಾ ರಾಷ್ಟ್ರಕ್ಕೆ ಸೆಡ್ಡು ಹೊಡೆದು ಅಮೆರಿಕಾದಿಂದ ಹೊರಬಂದು ಕ್ಯೂಬಾ ಎಂಬ ಪುಟ್ಟ ಕಮ್ಯುನಿಸ್ಟ್ ದೇಶ ನಿರ್ಮಿಸಿ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಕ್ರಾಂತಿಕಾರಿ ನಾಯಕನೆಂದೇ ಹೆಸರು ಮಾಡಿದ್ದ ಫಿಡಲ್ ಕ್ಯಾಸ್ಟ್ರೋ ಅವರು ವೃದ್ಧಾಪ್ಯ ಸಹಜ ಸಮಸ್ಯೆ
ಅರ್ನಾಲ್ಡ್ ಪಾಲ್ಮರ್


" attribution="">

ನ್ಯಾನ್ಸಿ ರೇಗನ್

ಯಶಸ್ಸಿನ ಸೂತ್ರಧಾರಿಣಿ ಎಂದೇ ಖ್ಯಾತಿಗಳಿಸಿದ್ದ ಅಮೆರಿಕಾದ ಮಾಜಿ ಅಧ್ಯಕ್ಷೆ ರಾನಾಲ್ಡ್ ರೇಗನ್ ಅವರು ವೃದ್ಧಾಪ್ಯ ಸಾಮಾನ್ಯ ಸಮಸ್ಯೆಗಳಿಂದಾಗಿ ಮಾರ್ಚ್ 6 ರಂದು ನಿಧನರಾಗಿದ್ದರು, ರೇಗನ್ ಅವರಿಗೆ 94 ವರ್ಷ ವಯಸ್ಸಾಗಿತ್ತು.
ಚೊ ರಾಮಸ್ವಾಮಿ

ರಾಜಕೀಯ ಟೀಕಾಕಾರ, ರಂಗ ಕರ್ಮಿ ಮತ್ತು ರಾಜಕಾರಣಿಗಳ ವಿಡಂಬನೆ ಮತ್ತು ನಿರ್ಭೀತ ಟೀಕೆಗೆ ಖ್ಯಾತಿ ಪಡೆದಿದ್ದ 'ತುಘಲಕ್ ತಮಿಳು ನಿಯತಕಾಲಿಕೆಯ ಸಂಪಾದ ಚೊ ರಾಮಸ್ವಾಮಿ ಅವರು ಹೃದಯಾಘಾತದಿಂದಾಗಿ ಡಿಸೆಂಬರ್ 7 ರಂದು ಸಾವನ್ನಪ್ಪಿದ್ದರು. ರಾಮಸ್ವಾಮಿ ಅವರಿಗೆ 83 ವರ್ಷ ವಯಸ್ಸಾಗಿತ್ತು.
ಜೆ.ಜಯಲಲಿತಾ

ತಮಿಳು ಜನರಿಂದ 'ಅಮ್ಮ', 'ಪುರಚ್ಚಿ ತಲೈವಿ' ಎಂದು ಕರೆಸಿಕೊಳ್ಳುವ ತಮಿಳುನಾಡು ಮಾಜಿ ಮುಖ್ಯಂತ್ರಿ ಜೆ.ಜಯಲಲಿತಾ ಅವರು ಹೃದಯ ಸ್ತಂಭನದಿಂದಾಗಿ ಡಿಸೆಂಬರ್ 5 ರಂದು ಸಾವನ್ನಪ್ಪಿದ್ದರು, ಜಯಾಲಲಿತಾ ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮುಫ್ತಿ ಮೊಹಮ್ಮದ್ ಸಯೀದ್

ಪೀಪಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಮುಫ್ತಿ ಮೊಹಮ್ಮದ್ ಸಯೀದ್ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಬಹು ಅಂಗಾಂಗ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದರು. ಮುಫ್ತಿಯವರಿಗೆ 79 ವರ್ಷ ವಯಸ್ಸಾಗಿತ್ತು.
ರಾಜೇಶ್ ವಿವೇಕ್

ಲಗಾನ್ ಹಾಗೂ ಸ್ವದೇಶ್ ಚಿತ್ರಗಳ ಮೂಲಕ ಜನರ ಗಮನ ಸೆಳೆದಿದ್ದ ಬಾಲಿವುಡ್ ಹಾಗೂ ಕಿರುತರೆ ನಟ ರಾಜೇಶ್ ವಿವೇಕ್ ಅವರು ಹೃದಯಾಘಾತದಿಂದಾಗಿ ಜನವರಿ 16 ರಂದು ಸಾವನ್ನಪ್ಪಿದ್ದರು. ರಾಜೇಶ್ ಅವರಿಗೆ 66 ವರ್ಷ ವಯಸ್ಸಾಗಿತ್ತು.
ರಾಕೇಶ್ ಸಿದ್ದರಾಮಯ್ಯ

ಬೆಲ್ಜಿಯಂ ಪ್ರವಾಸದಲ್ಲಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೇಷ್ಠ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಜುಲೈ.30 ರಂದು ಸಾವನ್ನಪ್ಪಿದ್ದರು. ರಾಕೇಶ್ ಸಿದ್ದರಾಮಯ್ಯ ಅವರಿಗೆ 39 ವರ್ಷ ವಯಸ್ಸಾಗಿತ್ತು.
ಕಲ್ಪನಾ ರಂಜನಿ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ಮಲಯಾಳಂ ನಟಿ ಕಲ್ಪನಾ ರಂಜನಿ ಅವರು ಹೃದಯಾಘಾತದಿಂದಾಗಿ ಜನವರಿ 25 ರಂದು ಸಾವನ್ನಪ್ಪಿದ್ದರು. ಕಲ್ಪನಾ ಅವರಿಗೆ 51 ವರ್ಷ ವಯಸ್ಸಾಗಿತ್ತು.
ಪ್ರದೀಪ್ ಶಕ್ತಿ

ಖಳನಟನ ಪಾತ್ರದಲ್ಲಿ ಹೆಸರು ಮಾಡಿದ್ದ ತೆಲುಗು ಚಿತ್ರರಂಗದ ಖ್ಯಾತ ನಟ ಪ್ರದೀಪ್ ಶಕ್ತಿಯವರು ಹೃದಘಾತದಿಂದಾಗಿ ಫೆ.20 ರಂದು ಸಾವನ್ನಪ್ಪಿದ್ದರು. ಪ್ರದೀಪ್ ಅವರಿಗೆ 60 ವರ್ಷ ವಯಸ್ಸಾಗಿತ್ತು.

ಪ್ರತ್ಯೂಷಾ ಬ್ಯಾನರ್ಜಿ

'ಬಾಲಿಕಾ ವಧು' ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ ಪ್ರತ್ಯೂಷಾ ಬ್ಯಾನರ್ಜಿಯವರು ಏಪ್ರಿಲ್ 1 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರತ್ಯೂಷಾ ಅವರಿಗೆ 24 ವರ್ಷ ವಯಸ್ಸಾಗಿತ್ತು.
ಅಜಯ್ ಕೃಷ್ಣನ್

ಮಲಯಾಳಂ ಚಿತ್ರರಂಗದ ಯುವ ನಿರ್ಮಾಪಕ ಅಜಯ್ ಕೃಷ್ಣನ್ ಅವರು ಏಪ್ರಿಲ್ 24 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅಜಯ್ ಅವರಿಗೆ 29 ವರ್ಷ ವಯಸ್ಸಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Goa Nightclub Tragedy: ನೈಟ್‌ಕ್ಲಬ್‌ ಮ್ಯಾನೇಜರ್‌ ಬಂಧನ, ಮಾಲೀಕನ ವಿರುದ್ಧ ವಾರಂಟ್‌ ಜಾರಿ

ಗೋವಾ ನೈಟ್ ಕ್ಲಬ್​ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 25 ಮಂದಿ ಸಜೀವ ದಹನ, ತನಿಖೆಗೆ ಆದೇಶ

'ಮದುವೆ ರದ್ದಾಗಿದೆ': ಪಲಾಶ್ ಮುಚ್ಚಲ್ ಜೊತೆಗಿನ ವಿವಾಹದ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ!

'ಮುಂದುವರಿಯಲು ನಿರ್ಧರಿಸಿದ್ದೇನೆ': ಸ್ಮೃತಿ ಮಂಧಾನ ಬಳಿಕ ಮದುವೆ ರದ್ದಾದ ಬಗ್ಗೆ ಪಲಾಶ್ ಮುಚ್ಚಲ್ ಮಾತು!

500 ಕೋಟಿ ರು ಕೊಟ್ಟು ಪಂಜಾಬ್ CM ಕುರ್ಚಿಯಲ್ಲಿ ಕುಳಿತುಕೊಳ್ಳಲು ನಮ್ಮ ಬಳಿ ಹಣವಿಲ್ಲ; ನವಜೋತ್ ಸಿಧು ಪತ್ನಿ ಹೇಳಿಕೆ

SCROLL FOR NEXT