ಪ್ರಾಣಿಗಳೇ ಗುಣದಲಿ ಮೇಲು, ಮಾನವ ಅದಕ್ಕಿಂತ ಕೀಳು ಎಂಬುದು ಅಣ್ಣಾವ್ರು ಹಾಡಿರುವ ಹಾಡು. ಹೀಗಾಗಿ ಪ್ರಾಣಿಗಳನ್ನೇ ರೂಪಕವಾಗಿಟ್ಟುಕೊಂಡು ಮನುಷ್ಯರ ಗುಣಾವಗುಣಗಳನ್ನು ವಿಡಂಬನಾತ್ಮಕವಾಗಿ ನಿಮ್ಮ ಮುಂದಿಡುವ ಪ್ರಯತ್ನ ಇಲ್ಲಿದೆ. ಓದಿ ಎಂಜಾಯ್ ಮಾಡಿ, ಸೀರಿಯಸ್ಸಾಗಿ ತಗೊಂಡ್ರೆ ನಾವು ಜವಾಬ್ದಾರರಲ್ಲ. ಹೊಸ ವರ್ಷದ ಶುಭಾಶಯ 
ಇತರೆ

ಹೊಸ ನಡೆ ನವ ಜೀವನದ ಕಡೆ

ಉಮ್ಮಾ...! ನಾನೂ ನೀನು ಜೋಡಿ, ರಾಜಕೀಯ ಜೀವನ ಗಾಡಿ ಅಂತ ಕೆಜೆಪಿ ಮತ್ತು ಬಿಜೆಪಿ ಡಿ..ಡಿ..ಡಿ ಡಿಕ್ಕಿ ಕೊಡ್ತಿರಬಹುದೇ?
ಯಾರ್ ಏನ್ ಬೇಕಾದ್ ಮಾಡ್ಕೊಳ್ಳಿ, ನಾನ್ ಮಾತ್ರ ಏನನ್ನೂ ನೋಡಲ್ಲ. ಯಾವುದಕ್ಕೂ ನಾನ್ ಕಾರಣವಲ್ಲ ಎಂಬ ಪ್ರಧಾನಿ ಸಿಂಗ್ ಭಾವ ಇಲ್ಲಿ ಪ್ರತಿಬಿಂಬ.
ಅಹ್ಹ ಹ್ಹ ಹ್ಹ ಕಾಂಗ್ರೆಸ್ ಎಷ್ಟು ಚೆನ್ನಾಗಿ ಬಾಯ್ತೆರೆದಿದೆ, ಕೇಜ್ರಿವಾಲ್ ಎಂಗೋಗಿ ಕಚ್ಕೊಂಡವ್ರೆ ನೋಡಿ... ದೇವ್ರೇ ಕಾಪಾಡ್ಬೇಕು.
ಹೊಸ ಗೆಟಪ್ನಲ್ಲಿ ಪತ್ರಕರ್ತರು...
ಎಂಗೈತೆ ಆಹಾ ಈ ಪೋಸು ಎಂಗೈತೆ, ರಾಜಕೀಯ ಜೋಕಾಲಿಯಲ್ಲಿ ರಮ್ಯಾ, ರಕ್ಷಿತಾ, ಪೂಜಾಗಾಂಧಿ ಭವಿಷ್ಯ ಹೀಗೆ ಅರಸುತ್ತಿರಬಹುದೇ?
ಕಾಲೆಳೆಯುವುದನ್ನು ಕಂಡಿದ್ದೀವಿ, ಯವಿ ಯವಿ ಇಲ್ಲಿ ಶೂನೇ ಎಳೀತಿ ದ್ದಾರಲ್ಲಪ್ಪ. ಅಂದಹಾಗೆ ಇವರಿಬ್ಬರಲ್ಲಿ ಯಾರು ಸಿದ್ದರಾಮಯ್ಯ, ಯಾರು ಪರಮೇಶ್ವರ್ ಅಂತ ಗೊತ್ತಾಗ್ತಿಲ್ಲ ಅಷ್ಟೇ.
ನಾವ್ಯಾರು ಗೊತ್ತಾಯ್ತಲ್ಲ, ಆಮ್ ಆದ್ಮಿ ಮಂದಿ. ಏನೇನ್ ಮಾಡ್ತೀವಿ ನೋಡ್ತಾ ಇರಿ...
ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಮಾಜಿ ಸಚಿವ ರೇಣುಕಾಚಾರ್ಯ ಈಗ ಒಂದೇ ಕಾಲಲ್ಲಿ ಡಾನ್ಸ್.
ರಾಹುಲ್ - ಮೋದಿ ಕಾಳಗ ಹೀಗೆ ಇರಬಹುದೇ...?
ನಿತ್ಯಾನಂದ ಕಂಡ ಕಂಡ ಹಕ್ಕಿಗಳನ್ನು ಬಡಿದು ಬಾಯಿಗೆ ಹಾಕಿಕೊಂಡ ಬಗೆ ಇದು.
ಈಗ ಮೋದಿ ನಡೆದದ್ದೇ ದಾರಿ...
ನಿಂದು ಜಾಸ್ತಿ ಆಯ್ತು, ಸುಮ್ಕೆ ಇರು ಎಂದು ಜನ ಕೇಂದ್ರ ಸರ್ಕಾರವನ್ನು ತಳ್ತಾ ಇರೋ ಸ್ಟೈಲ್ ಇದು.
ನಾನಂತೂ ಹೊರಟಿದ್ದೇನೆ.... ಬಿಡ್ರಪ್ಪ ನಿಮ್ಮನ್ನು ಕರೆದುಕೊಂಡು ಹೋಗ್ತೇನೆ... ಚಿಂತಿ ಮಾಡ್ಬೇಡಿ. ಹೀಗಂತ ಯಡಿಯೂರಪ್ಪ ತಮ್ಮ ಬೆಂಬಲಿಗರನ್ನ ಈ ರೀತಿ ಸಂತೈಸುತ್ತಿರಬಹುದೇ?
ಕುಡಿಯೋದೇ ನಿಮ್ ವೀಕ್ನೆಸ್ ಆಗ್ಬಾರ್ದು. ಹೊಸ ವರ್ಷದ ಸಂಭ್ರಮ ಚೆಂದಾಕಿರಲಿ...
ಥತ್ಥೇರಿಕೆ, ಚಳಿಗಾಲದಲ್ಲೇ ಒಂದು ತೊಟ್ಟು ನೀರಿಗೆ ಇಷ್ಟು ಕಷ್ಟ ಪಡಬೇಕು. ಇನ್ನು ಬೇಸಿಗೆ ಬಂದ್ರೆ ಹೆಂಗಪ್ಪಾ?
ಬ್ಯಾಟ್ ಬೀಸಿ ಬೀಸಿ ಬೇಜಾರಾಗೈತಿ, ಬಾ ಹಂಗೆ ಸಿಂಗಾಪುರಕ್ಕೆ ಒಂದ್ ರೌಂಡ್ ಹೋಗ್ಬರೋಣ ಅಂತ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಗೆ ಹೂ ಮುಡಿಸೋದಿಕ್ಕೆ ರೆಡಿಯಾಗಿರಬಹುದೇ?
ನಗುವುದೇ ಸ್ವರ್ಗ.. ದೇವೇಗೌಡ್ರು, ಮಲ್ಲಿಕಾರ್ಜುನ ಖರ್ಗೆ, ಯಡಿಯೂರಪ್ಪ ಅವರನ್ನ ಜನ ಈ ಪೋಸಲ್ಲಿ ನೋಡೋಕೆ ಕಾಯ್ತಾ ಇದಾರೆ.., ಆದ್ರೆ ಬ್ಯಾಡ್ ಲಕ್...!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!