ಸೋದರ-ಸೋದರಿಯರ ಹಬ್ಬ ರಕ್ಷಾ ಬಂಧನದ ದಿನವಾದ ಭಾನುವಾರ ನವದೆಹಲಿಯಲ್ಲಿ ಪುಟಾಣಿ ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದ್ದು ಹೀಗೆ.
ಅತ್ತರಿ ಗಡಿ ಪ್ರದೇಶದಲ್ಲಿರುವ ಬಿಎಸ್‌ಎಫ್ ಯೋಧರಿಗೆ ಯುವತಿಯರು ರಾಖಿ ಕಟ್ಟುತ್ತಿರುವುದು...ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಂಜಿಹಿ ಅವರಿಗೆ ಶಾಲಾ ಮಕ್ಕಳು ರಾಖಿ ಕಟ್ಟಿ ಸಂಭ್ರಮಿಸಿದರು.ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ನಬಂ ಟುಕಿ ಅವರಿಗೆ ಬಾಲಕಿ ರಾಖಿ ಕಟ್ಟಿದ್ದು ಹೀಗೆ...ಬೃಂದಾವನದಲ್ಲಿ ನೆಲೆಸಿರುವ ವಿಧವೆಯರು ಪ್ರಧಾನಿ ಮೋದಿ ಅವರೊಂದಿಗೆ ರಕ್ಷಾ ಬಂಧನ ಆಚರಿಸಿದರು.ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ಸಹೋದರಿ ಕಮಲ ದೇವಿ ರಾಖಿ ಕಟ್ಟಿದರು.ಡೆಹ್ರಾಡನ್‌ನಲ್ಲಿ ಉತ್ತರಖಾಂಡದ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಟಿಬೆಟಿಯನ್ ಮಹಿಳೆ ರಾಖಿ ಕಟ್ಟುತ್ತಿರುವುದು.ಭೋಪಾಲ್‌ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ನನ್‌ಗಳು ರಾಖಿ ಕಟ್ಟುತ್ತಿರುವುದು.ಯುವ ಕಾಂಗ್ರೆಸ್ ಕಾರ್ಯಕರ್ತರು ಟಮೋಟೋ, ಈರುಳ್ಳಿಯಿಂದ ರಾಖಿಯನ್ನು ಕಟ್ಟಿ, ವಿಶಿಷ್ಟ ರೀತಿಯಲ್ಲಿ ರಕ್ಷಾ ಬಂಧನ ಆಚರಿಸಿದರು. ಇದೇ ವೇಳೆ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟಿಸಿದರು.ಗೌಹಾಟಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಯ್ ಅವರಿಗೆ ಮಕ್ಕಳು ರಕ್ಷ ಬಂಧನ ಕಟ್ಟಿ ಸಂಭ್ರಮಿಸಿದರು.ರಕ್ಷಾ ಬಂಧನ ಕಟ್ಟಿದ ಮಕ್ಕಳೊಂದಿಗೆ ಮೋದಿ ಮಾತು...ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮಕ್ಕಳಿಂದ ರಕ್ಷಾ ಬಂಧನ...ಅಹಮದಾಬಾದ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ರಕ್ಷಾ ಬಂಧನ ಕಟ್ಟಿದರು.ಬೆಂಗಳೂರಿನ ಆರ್‌ವಿ ಟೀಚರ್ಸ್ ಕಾಲೇಜಿನಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್ ಅವರಿಗೆ ಮಹಿಳೆಯರು ರಾಖಿ ಕಟ್ಟಿ ಸಂಭ್ರಮಿಸಿದರು.ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಮಕ್ಕಳು ರಾಖಿ ಕಟ್ಟಿದ್ದು ಹೀಗೆ...ಹೈದ್ರಾಬಾದ್‌ನಲ್ಲಿ ಶಾಸಕಿ ಹಾಗೂ ನಟಿ ರೋಜಾ ಅವರು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ರಾಖಿ ಕಟ್ಟಿದ್ದು ಹೀಗೆ...ದೆಹಲಿಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಎ. ಹೆಪ್ತುಲ್ಲಾ ಅವರು ಮೋದಿ ಅವರಿಗೆ ರಾಖಿ ಕಟ್ಟಿದ್ದು ಹೀಗೆ.ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಟಿಡಿಪಿ ಪಕ್ಷದ ಕಾರ್ಯಕರ್ತೆ ರಾಖಿ ಕಟ್ಟಿ ಸಂಭ್ರಮಿಸಿದರು.ಮೋದಿ ಅವರಿಗೆ ರಾಖಿ ಕಟ್ಟುವ ಸಂಭ್ರಮದಲ್ಲಿ ಸಾಧವಿ ರಿತಾಂಬರಾ...ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಬಾಲಕರಿಗೆ ರಾಖಿ ಕಟ್ಟುತ್ತಿರುವುದು...Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics