ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆಯುತ್ತಿರುವ ಕುಂಭಮೇಳದ ಮೊದಲ ಪುಣ್ಯಸ್ನಾನದ ದಿನವಾದ ಶನಿವಾರ ವಿವಿಧೆಡೆಗಳಿಂದ ಬಂದ ಸಾಧುಗಳು ಸ್ನಾನಕ್ಕೆ ಸಿದ್ಧರಾದ ಕ್ಷಣ.
ರಕ್ಷಾಬಂಧ ಆನಂದ... ರಕ್ಷಾ ಬಂಧನದ ಅಂಗವಾಗಿ ಶುಕ್ರವಾರ ಬೆಂಗಳೂರಿನ ಮೂಲಪಾಳ್ಯದಲ್ಲಿ ರಾಖಿ ಕಟ್ಟಿ ಸಂಭ್ರಮಿಸಿದ ಸಹೋದರಿಯರು.
ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಪುತ್ರ ವಿಯಾನ್ ಜತೆ ಮಂಗಳೂರು ನೆಡ್ಡೋಡಿಯ ತಮ್ಮ ತವರು ಮನೆಯಲ್ಲಿ ಕರುವನ್ನು ಮುದ್ದಾಡಿದ ಕ್ಷಣ.
Advertisement
Advertisement
ಚಿನ್ನದ ನಗು... ಕರ್ನಾಟಕ ವಿಶ್ವವಿದ್ಯಾಲಯದ 65ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಗಳನ್ನು ಪಡೆದ ವೀಣಾ ಮುಜುಮ್ದಾರ, ನೇತ್ರಾವತಿ ಗಬ್ಬೂರ, ತುಷಾರ ಜೋಶಿ ಹಾಗೂ ಅನುರಾಧಾ ಕೊಟಬಾಗಿ ಪದಕಗಳೊಂದಿಗೆ ನಗು ಚೆಲ್ಲಿದರು.
ಗೆಲುವಿನ ಬಣ್ಣ... ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಮಂಗಳವಾರ ಮುಖಕ್ಕೆ ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿರುವ ಕಾರ್ಯಕರ್ತರು.
ಲಕ್ಷ್ಮೀ ಬಾರಮ್ಮಾ... ಇದೇ ಶುಕ್ರವಾರದಂದು ನಡೆಯುವ ವರ ಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಅಷ್ಟಲಕ್ಷ್ಮೀಯರ ವಿಗ್ರಹ ಮಾರಾಟ ಭರ್ಜರಿಯಾಗಿದೆ.
ಒಬಾಮ ಸೈಕಲ್ ಸವಾರಿ... ಅಮೆರಿಕದ ವೆಸ್ಟ್ಟಿಸ್ಟರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ರಜೆಯ ಮೂಡ್ನಲ್ಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಸೈಕಲ್ ಸವಾರಿ.
ಗೌರವ ಸಮರ್ಪಣೆ... ಬ್ಯಾಂಕಾಕ್ನ ದೇಗುಲದಲ್ಲಿ ನಾಲ್ಕು ದಿನಗಳ ಹಿಂದೆ ಬಾಂಬ್ ಸ್ಫೋಟದಲ್ಲಿ ಅಸುನೀಗಿದವರ ಸ್ಮರಣಾರ್ಥ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಯಿತು. ಇದರ ಜತೆಗೆ ಯಾತ್ರಾರ್ಥಿಗಳೂ ನಮನ ಸಲ್ಲಿಸಿದರು.
ಅರಸು ಕಾರ್ ಏರಿದ ಸಿದ್ದು... ವಿಧಾನಸೌಧದ ಆವರಣದಲ್ಲಿರುವ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಈ ಹಿಂದೆ ಅರಸು ಬಳಸುತ್ತಿದ್ದ ಕಾರಿನಲ್ಲಿ ರೌಂಡ್ ಹಾಕಿದ ಸಿಎಂ ಸಿದ್ದರಾಮಯ್ಯ.
ಏಕಾಂಗಿ ರಾಷ್ಟ್ರಪತಿ... ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪತ್ನಿ ಸುವ್ರಾ ಮುಖರ್ಜಿ ನಿಧನರಾಗಿದ್ದು, ಬುಧವಾರ ಅಂತ್ಯಸಂಸ್ಕಾರ ನಡೆಯಿತು. ಆದರೆ ಅಂತ್ಯ ಸಂಸ್ಕಾರಕ್ಕೆ ಬಂದ ಅತಿಥಿ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾರಿಗಾಗಿ ಕಾಯುತ್ತಿರುವ ಪ್ರಣಬ್ ಮುಖರ್ಜಿ ಅವರ ಈ ಚಿತ್ರ, ಅವರು ಇನ್ನು ಏಕಾಂಗಿ ಎಂದು ಬಿಂಬಿ
ಮತದಾನಕ್ಕೆ ನಾವು ಸಿದ್ಧ... ಬೆಂಗಳೂರಿನಲ್ಲಿ ಚುನಾವಣಾ ಆಯೋಗ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಅವರೊಂದಿಗೆ ಮತದಾನ ಮಾತದಾನ ಮಾಡಬೇಕು ಎಂದು ಬೆರಳು ತೋರಿಸುತ್ತಿರುವ ವಿದ್ಯಾರ್ಥಿಗಳು.
ಸಿಎಂ ಮನೆಗೆ ಸೈಕಲ್ ಸವಾರಿ... ತಮ್ಮ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲೆ ರಿಪ್ಪನ್ಪೇಟೆಯಿಂದ ಬೆಂಗಳೂರಿಗೆ ಸೈಕಲ್ನಲ್ಲಿ ಆಗಮಿಸಿದ ರೈತ ಟಿ.ಆರ್.ಕೃಷ್ಣಪ್ಪ ಅವರನ್ನು ಮುಖ್ಯಮಂತ್ರಿ ನಿವಾಸದ ಎದುರು ಕುತೂಹಲದಿಂದ ವೀಕ್ಷಿಸುತ್ತಿರುವ ಪೊಲೀಸ್ ಪೇದೆ.
'ಬಾಹುಬಲಿ ಗಣೇಶ'... ಬೆಂಗಳರಿನ ಆರ್ ವಿ ರಸ್ತೆಯ ಅಂಗಡಿಯೊಂದರಲ್ಲಿ ಗಮನಸೆಳೆದ ಬಾಹುಬಲಿ ಗಣೇಶ.
ರೆಡ್ ಡ್ರಸ್ ನಲ್ಲಿ ಮಹಿಳೆಯರ ಸೆಲ್ಫಿ.ಮುಂಬೈನಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದ ವೇಳೆ ಮಹಿಳೆಯರು ಸೆಲ್ಫಿಗೆ ಫೋಸ್ ಕೊಟ್ಟಿದ್ದು ಹೀಗೆ.
69ನೇ ಸ್ವಾತಂತ್ರ್ಯೋತ್ಸದ ಸಂಭ್ರಮದ ಹಿನ್ನೆಲೆಯಲ್ಲಿ ಭುವನೇಶ್ವರದ ಯುವಕರು ತ್ರಿವರ್ಣ ಧ್ವಜವನ್ನು ಹಿಡಿದು ಬೀದಿಯಲ್ಲಿ ಸಂಚರಿಸಿದ ದೃಶ್ಯ.
ದಾಖಲೆಗೆ 69ನೇ ಸ್ವಾತಂತ್ರೋತ್ಸವ... 69ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದಾಖಲೆಗಾಗಿ ಕೊಯಮತ್ತೂರು ಕಾಲೇಜ್ನ 6900 ವಿದ್ಯಾರ್ಥಿಗಳು ಶುಕ್ರವಾರ ಮಾನವ ಸರಪಳಿ ಮೂಲಕ ಭಾರತದ ನಕ್ಷೆ ರಚಿಸಿದ್ದು ಹೀಗೆ.
ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಸಿದ್ದಾರ್ಥ್ ಮಲ್ಹೊತ್ರಾ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಗುರುವಾರ ಮುಂಬೈನಲ್ಲಿ ನಡೆದ ಮಾಧ್ಯಮ ಸಂವಾದದ ವೇಳೆ ಪೋಸ್ ಕೊಟ್ಟಿದ್ದು ಹೀಗೆ.
ತ್ರಿವರ್ಣ ಧ್ವಜ ತಯಾರಿ... 69ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮುಂಬೈನ ಕಾರ್ಮಿಕರು ತ್ರಿವರ್ಣ ಧ್ವಜವನ್ನು ತಯಾರಿಸುತ್ತಿರುವ ದೃಶ್ಯ.
ಕಾಡಿನ ಮಕ್ಕಳ ಸೆಲ್ಫಿ: ಕೊಡಗು ಜಿಲ್ಲೆ ಸಿದ್ದಾಪುರ ಬಳಿಯ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಮಂಗಳವಾರ 'ನಮ್ಮ ನೆಲ ನಮ್ಮ ನಾಡು' ನೃತ್ಯ ಪ್ರದರ್ಶನದ ನಂತರ ಆದಿವಾಸಿ ಗಿರಿಜನ ವಿದ್ಯಾರ್ಥಿಗಳು ತಮ್ಮ ವೇಷದೊಂದಿಗೆ ಮೊಬೈಲ್ನಲ್ಲಿ ಸೆಲ್ಫಿ ತೆಗೆದು ಸಂಭ್ರಮಿಸಿದರು. ಚಿತ್ರ- ಎಸ್.ಎಂ.ಮುಬಾರಕ್
ಏಕ್ ದಿನ್ ಕಾ ಪೊಲೀಸ್... ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಪೋರ ಕುನ್ವರ್ ಸಿಂಗ್ ಪಾಟೀಲ್ ನ ಪೊಲೀಸ್ ಆಗಬೇಕೆಂಬ ಹೆಬ್ಬಯಕೆ. ಇದನ್ನರಿತ ಮುಂಬೈ ಪೊಲೀಸ್ ಇಲಾಖೆ ಕುನ್ವರ್ ನನ್ನು ಒಂದು ದಿನದ ಮಟ್ಟಿಗೆ ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯನ್ನಾಗಿ ಮಾಡಿದ ದೃಶ್ಯ.
ನೇಚರ್ ರೈಡರ್ಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನೇಚರ್ ರೈಡರ್ಸ್ '2ಕೆ-15' ರ್ಯಾಲಿಯನ್ನು ಆಯೋಜಿಸಲಾಗಿತ್ತು. ಪ್ರಕೃತಿಯ ಸಹಜ ಅಡೆತಡೆಗಳ ನಡುವೆ ಈ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಇದರಲ್ಲಿ ಭಾಗವಹಿಸಿದ್ದ ಚಾಲಕನೊಬ್ಬ ಜೀಪ್ ಚಲಾಯಿಸುತ್ತಿರುವುದು.
ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ... ಬೆಂಗಳೂರಿನಲ್ಲಿ ಬಿಬಿಎಂಪಿ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ ದಿನಾಚರಣೆಯಲ್ಲಿ ಪ್ರತಿಭಾ ಬಾಲ ಮಂದಿರದ ಮಕ್ಕಳು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಯೋಗಾಯೋಗ..ನವದೆಹಲಿಯ ಇಂಡಿಯಾ ಗೇಟ್ ಬಳಿ ಮಕ್ಕಳಿಗೆ ಯೋಗ ಹೇಳಿಕೊಡುತ್ತಿರುವ ತಂದೆ.
ಸಾಮೂಹಿಕ ಸೆಲ್ಫಿ... ಸ್ವಾತಂತ್ರ್ಯೋತ್ಸವ ಅಂಗವಾಗಿ ಬೆಂಗಳೂರಿನ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಶುಕ್ರವಾರದಿಂದ ಆರಂಭವಾಗಿದ್ದು, ಬೆಂಗಳೂರಿನ ಅರಮನೆ ಕಲಾಕೃತಿ ಮುಂದೆ ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ.
ಬದುಕು-ಬೇಸಾಯ ಜಾಗೃತಿ ಅಭಿಯಾನಕ್ಕೆ ಚಾಲನೆ: ರೈತರಲ್ಲಿ ಆತ್ಮಸ್ಥೆರ್ಯ ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಬದುಕು-ಬೇಸಾಯ ರೈತರ ಜಾಗೃತಿ ಅಭಿಯಾನಕ್ಕೆ ಧಾರವಾಡದಲ್ಲಿ ಸಚಿವರಾದ ಎಚ್ ಕೆ. ಪಾಟೀಲ್ ಹಾಗೂ ವಿ.ಶ್ರೀನಿವಾಸ್ ಪ್ರಸಾದ್ ಅವರು ಶುಕ್ರವಾರ ಚಾಲನೆ ನೀಡಿದರು
ಹೋಗ್ಬುಟ್ನೋ ಯಪ್ಪಾ...: ಗದಗ ಜಿಲ್ಲೆಯಲ್ಲಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ರೈತ ಕುಟುಂಬವೊಂದು ತೀವ್ರ ದುಃಖತಪ್ತವಾಗಿ ಸಿಎಂ ಜತೆ ತಮ್ಮ ನೋವನ್ನು ತೋಡಿಕೊಂಡ ಪರಿ.
ರಾಷ್ಟ್ರಪತಿ ಭವನದಲ್ಲಿ ಮಂಗಳವಾರ 'ನವಚಾರ ಕಕ್ಷ್' ವಿಜ್ಞಾನ ಮತ್ತು ಸಂಶೋಧನಾ ಮ್ಯೂಸಿಯಂ ಉದ್ಘಾಟನೆ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಬಲ ಬಾರಿಸಲು ಯತ್ನಿಸಿದ್ದು ಹೀಗೆ.
ಏನೋ ಬರೆದವ್ರೆ... ರೈತರಿಗೆ ಆತ್ಮಸ್ಥೈರ್ಯ ತುಂಬಲು ರಾಜ್ಯ ಸರ್ಕಾರ ಬಾಗಲಕೋಟೆಯಲ್ಲಿ ಅಳವಡಿಸಿರುವ ಫ್ಲೆಕ್ಸ್ ಅನ್ನು ಸೋಮವಾರ ಕುತೂಹಲದಿಂದ ಓದುತ್ತಿರುವ ರೈತ.
ಬದುಕು ಜಟಕಾ ಬಂಡಿ! ಆಧುನಿಕ ಯುಗದಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಎತ್ತಿನ ಬಂಡಿಯೇ ಪ್ರಮುಖ ಸಾರಿಗೆಯಾಗಿದೆ. ಭಾನುವಾರ ಬಾಗಲಕೋಟೆಯಲ್ಲಿ ಕಂಡುಬಂದ ಬಂಡಿ ಪಯಣ.
ಸಿಹಿ ಮುತ್ತು...ದೆಹಲಿಯಲ್ಲಿ ಅಳಿಲುಗಳು ಮುತ್ತಿನ ಗಮ್ಮತ್ತನ್ನು ಸವೆದ ಪರಿ.
ಹೇಗಿದೆ ಪೋಸ್!... ಕೋಲ್ಕತಾದಲ್ಲಿ ಬಂಗಾಳಿ ಸಿನಿಮಾ 'ಶೇಶೆರ್ ಕೊಬಿತಾ'ದ ಪ್ರಚಾರದಲ್ಲಿ ನಿರತವಾಗಿರುವ ಬಾಲಿವುಡ್ ನಟ ರಾಹುಲ್ ಬೋಸ್, ಕೊಂಕಣಾ ಸೇನ್ ಶರ್ಮಾ ಹಾಗೂ ಟಾಲಿವುಡ್ ನಟಿ ಸ್ವಸ್ತಿಕಾ ಮುಖರ್ಜಿ ಅವರು ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.