ತ್ರಿಶತಕ ವೀರ:ಕನ್ನಡಿಗ ಕೆ.ಎಲ್ ರಾಹುಲ್ ಉತ್ತರಪ್ರದೇಶದ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ತ್ರಿಶಕ ದಾಖಲಿಸಿ, ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಒಬಾಮ-ಮೋದಿ ಮನದ ಮಾತಿಗೆ ಕಿವಿಯಾದ ಜನತೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮಂಗಳವಾರ ಜಂಟಿಯಾಗಿ ನಡೆಸಿಕೊಟ್ಟ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ ಕೇಳುತ್ತಿರುವ ಲಖನೌ ಜನತೆ.ದೆಹಲಿಯ ಸಿರಿಪೋರ್ಟ್ ಆಡಿಟೋರಿಯಂನಲ್ಲಿ ಮಂಗಳವಾರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅವರ ಪತ್ಮಿ ಮಿಶೆಲ್ ಅವರು ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಮತ್ತು ಅವರ ಪತ್ನಿ ಸುಮೆಧಾರನ್ನು ಭೇಟಿ ಮಾಡಿದರು.ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಿಎಸ್‌ಎಫ್‌ನ ಒಂಟೆಪಡೆ ಪಥಸಂಚಲನ ಎಲ್ಲರ ಗಮನ ಸೆಳೆಯಿತು.ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ಚನ್ನಪಟ್ಟಣದ ಬೊಂಬೆಗಳ ಸ್ತಬ್ಧಚಿತ್ರ.ಹರ್ಯಾಣದ ಪಾಣಿಪತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಪಢಾವೋ, ಬೇಟಿ ಬಚಾವೋ ಆಂದೋಲನಕ್ಕೆ ಗುರುವಾರ ಚಾಲನೆ ನೀಡಿದರು. ಈ ವೇಳೆ ಹರ್ಯಾಣ ಸಿಎಂ ಎಲ್.ಎಲ್. ಖಟ್ಟರ್ ಹಾಗೂ ಆಂದೋಲನದ ರಾಯಭಾರಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಇದ್ದರು.ಮಹಾವಿರಾಗಿಗೆ ಮಂಗಳ ಸೇಚನ: ಕಾರ್ಕಳ ಬೆಟ್ಟದ ಮೇಲೆ ನಿಂತ ಗೊಮ್ಮಟೇಶ್ವರನಿಗೆ ಪಾರ್ಶ್ವಗಳಲ್ಲಿ ಕಟ್ಟಿದ ಅಟ್ಟಣಿಗೆಗಳಲ್ಲಿ ನಿಂತ ಆಸ್ತಿಕರು ಭಕ್ತಿಯ ಸಿಂಚನದಿಂದ ಮಂಗಳ ಸೇಚನ ಮಾಡಿದರು. ನೀರು, ಎಳನೀರು, ಹಾಲು ಕಲ್ಕ ಚೂರ್ಣ, ಅರಸಿನ, ಕಷಾಯ, ಗಂಧ, ಚಂದನ, ಅಷ್ಟಗಂಧ ಅಭಿಷೇಕ ಮಾಡಿ ವಿರಾಗಿಯನ್ನು ತೋಯಿಸಿದರು. ಚಭಾರತದ ತ್ರಿವರ್ಣ ಧ್ವಜದೊಂದಿಗೆ ಭೋಪಾಲ್ ಯುವತಿಯರ ಸೆಲ್ಫೀ.ಮಿಡಿದ ಮಿಡತೆ ಹೃದಯ! ಪಾರ್ಕ್‌ನಲ್ಲಿ ಪ್ರೇಮಿಗಳ ಆಟ ನೋಡಿಯೋ ಏನೋ? ಇಂಡೋನೇಷ್ಯಾದಲ್ಲಿ ಗಂಡು ಮಿಡತೆಯೊಂದು ಕಾಲೇಜು ಹುಡುಗನ ರೀತಿಯಲ್ಲೇ ತನ್ನ ಮನದನ್ನೆ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿತೆ? ಗೊತ್ತಿಲ್ಲ. ಆದರೆ, ಕೈಯಲ್ಲಿ ಹೂವು ಹಿಡಿದ ರೀತಿ ನೋಡಿದರೆ ಈ ಮಿಡತೆಯ ಲವ್‌ಸ್ಟೋರಿ ಕೂಡ ಯಾವುದೇ ಸಿನಿಮಾಗಿಂತಶಕ್ತಿ ಸಂಗಮ... ಬೆಂಗಳೂರಿನಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷತ್‌ನ ದುರ್ಗಾ ವಾಹಿನಿ ಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯೆ ತಾರಾ ಅನೂರಾಧಾ ಹಾಗೂ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಭಾಗವಹಿಸಿದ್ದರು.ಪ್ರಧಾನಿ ಜತೆ ಕನ್ನಡಿಗರ ಸಂಕ್ರಾಂತಿ: ದೆಹಲಿಯಲ್ಲಿರುವ ಕರ್ನಾಟಕ ಸಂಘದ ವತಿಯಿಂದ ಏರ್ಪಡಿಸಿದ್ದ ದಕ್ಷಿಣ ಭಾರತ ರಾಜ್ಯಗಳ ಸಾಂಸ್ಕೃತಿಕ ಉತ್ಸವ ಸಂಕ್ರಾಂತಿ ಮಿಲನ ಕಾರ್ಯಕ್ರಮದಲ್ಲಿ ವಿವಿಧ ಕಲೆ ಪ್ರದರ್ಶಿಸಿದ ಕೋಲಾರದ ವಿದ್ವಾನ್ ರಮೇಶ್ ನೇತೃತ್ವದ ತಂಡದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಸಂಕ್ರಾಂತಿ ಕಿಚ್ಚು: ಮಕರ ಸಂಕ್ರಾಂತಿ ನಿಮಿತ್ತ ಗುರುವಾರ ಸಂಜೆ ಮಂಡ್ಯದಲ್ಲಿ ರೈತರು ರಾಸುಗಳನ್ನು ಕಿಚ್ಚು ಹಾಯಿಸಿದ್ದು ಹೀಗೆ.ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಜನವರಿ 17ರಿಂದ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಪ್ರದರ್ಶನಕ್ಕೆ ಸಜ್ಜಾಗುತ್ತಿರುವ ದೆಹಲಿ ಕೆಂಪುಕೋಟೆಯ ಮಾದರಿ.ಬೆಂಗಳೂರಿನ ನಾಗಪುರ ವಾರ್ಡ್‌ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಡೆದ ಪಂಜಿನ ಮೆರವಣಿಗೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ ಪಾಲ್ಗೊಂಡಿದ್ದರು. ಕಾರ್ಪೊರೇಟರ್ ಹರೀಶ್, ಉಪಮೇಯರ್ ರಂಗಣ್ಣ ಹಾಜರಿದ್ದರು.ಉಗ್ರರ ವಿರುದ್ಧ 'ಏಕತಾ ನಡಿ'ಗೆ: ಚಾರ್ಲಿ ಹೆಬ್ಡೋ ಕಚೇರಿ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನ ಪ್ಲೇಸ್ ಡಿ ಲಾ ರಿಪಬ್ಲಿಕ್ ಸ್ಕ್ವೇರ್‌ನಲ್ಲಿ ಭಾನುವಾರ ನಡೆದ ಏಕತಾ ನಡಿಗೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು.ಸಂಭ್ರಮದ ಆರಂಭ: ವೈಭವದ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಚಾಲನೆ ನೀಡಿದರು. ಈ ವೇಳೆ ಸಚಿವರಾದ ಉಮಾಶ್ರೀ, ಪಿ.ಟಿ. ಪರಮೇಶ್ವರ್ ನಾಯ್ಕ್, ಶಾಸಕ ಅನಿಲ್ ಲಾಡ್ ಸೇರಿ ಇತರರು ಇದ್ದರು.ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಹಾಗೂ ಟಿವಿ ನಿರೂಪಕಿ ರೆಹಾಂ ವಿವಾಹ ಗುರುವಾರ ನೆರವೇರಿತು.ಪದಕ ಹೇಗಿದೆ? ವಿಶ್ವಶಾಂತಿಗಾಗಿ ನೊಬೆಲ್ ಪುರಸ್ಕಾರ ಪಡೆದ ಕೈಲಾಶ್ ಸತ್ಯಾರ್ಥಿ ಅವರು ಬುಧವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಪದಕವನ್ನು ಮುಖರ್ಜಿಯವರಿಗೆ ತೋರಿಸಿದರು. ತಮಗೆ ಸಂದ ಗೌರವವನ್ನು ದೇಶಕ್ಕೆ ಅರ್ಪಿಸುವುದಾಗಿ ಸತ್ಯಾರ್ಥಿ ಹೇಳಿದರು.ಕತ್ತೆಗಳಿಗೆ ಆದರ್ಶ ಪ್ರಶಸ್ತಿ! ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಂಗಳವಾರ ಕತ್ತೆಗಳಿಗೆ ರಾಜ್ಯೋತ್ಸವದ ಆದರ್ಶ ಪ್ರಶಸ್ತಿ ನೀಡಿ ಮಂಗಳವಾರ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಿನೂತನವಾಗಿ ಪ್ರತಿಭಟಿಸಲಾಯಿತು.ಸಿಡ್ನಿಯ ಡಾರ್ಲಿಂಗ್ ಹಾರ್ಬರ್‌ನಲ್ಲಿ ವಿರಾಟ್ ಕೊಹ್ಲಿ ಜತೆ ಅನುಷ್ಕಾ ಶರ್ಮಾ ಇವರಿಬ್ಬರ ಹಿಂದೆ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಇದ್ದಾರೆ.ಪುಣ್ಯ ಸ್ನಾನ: ಮಾಘ ಪೂರ್ಣಿಮೆಯ ಅಂಗವಾಗಿ ಭಾನುವಾರ ಅಹಮದಾಬಾದ್‌ನಲ್ಲಿ ಮಕ್ಕಳು ಪರಸ್ಪರರ ಮೈಗೆ ನೀರನ್ನು ಸುರಿದುಕೊಳ್ಳುವ ಮೂಲಕ ಪುಣ್ಯ ಸ್ನಾನ ಮಾಡಿದರು.ಅವರೆ ಜಾತ್ರೆ... ಬೆಂಗಳೂರಿನ ಸಜ್ಜನ್ ರಾವ್ ವೃತ್ತದಲ್ಲಿ ಆಯೋಜಿಸಲಾಗಿರುವ ಅವರೆ ಬೇಳೆ ಮೇಳವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ನಟಿ ರೂಪಿಕಾ ಶುಕ್ರವಾರ ಉದ್ಘಾಟಿಸಿದರು.ಹೊಸ ವರ್ಷದ ಮೊದಲ ದಿನ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಟೋನಿ ಅಬಾಟ್ ಕರೆದಿದ್ದ ಚಹಾ ಕೂಟದಲ್ಲಿ ಪಾಲ್ಗೊಂಡಿದ್ದ ಭಾರತ-ಆಸ್ಟ್ರೇಲಿಯಾ ತಂಡಗಳ ಕ್ರಿಕೆಟಿಗರು ಕ್ಯಾಮರಾಗೆ ಪೋಸ್ ನೀಡಿದ್ದು ಹೀಗೆ.ಹೊಸ ವರ್ಷಕ್ಕೆ ಸ್ವಾಗತ... ಕನ್ನಡಪ್ರಭ.ಕಾಮ್ ಸಿಬ್ಬಂದಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದು ಹೀಗೆ.ಆತಂಕದ ನಡುವೆಯೂ ಸಂಭ್ರಮ: ಆತಂಕದ ನಡುವೆಯೂ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷವನ್ನು ಹರ್ಷ ಹಾಗೂ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics