ಸಂಬಂಧ ಬೆಸುಗೆ... ನವದೆಹಲಿಯಲ್ಲಿ ಗುರುವಾರ ನಡೆದ ಭಾರತ-ಆಫ್ರಿಕಾ ವೇದಿಕೆಯ ಶೃಂಗಸಭೆ ವೇಳೆ ಆಫ್ರಿಕಾ ದೇಶಗಳ ಪ್ರತಿನಿಧಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ.
ಕಟ್ಟಿಗೆಯಲ್ಲಿ ಅರಳಿದ ಕಲಾವೈಭವ.. ಬೆಂಗಳೂರಿನ ಲಾನ್ಟೆನಿಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಿರುವ ಸಮಕಾಲೀನ ಕಾಷ್ಠ ಶಿಲ್ಪಕಲಾ ಶಿಬಿರದಲ್ಲಿ ಮರದಲ್ಲಿ ಕೆತ್ತಿರುವ ಮೀನು ಶಿಲ್ಪದೊಂದಿಗೆ ಕಲಾಸಕ್ತೆ.
ಬಾಲಕಿ ಕೆನ್ನೆಯಲ್ಲಿ ಮೂಡಿದ ವಾಲ್ಮೀಕಿ... ವಾಲ್ಮೀಕಿ ಜಯಂತಿ ಪ್ರಯುಕ್ತ ಮಂಗಳವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಮುದ್ದು ಮಕ್ಕಳು ಕಂಡದ್ದು ಹೀಗೆ. ಬಾಲಕಿಯ ಕೆನ್ನೆಯಲ್ಲಿ ಮೂಡಿ ಬಂದ ವಾಲ್ಮೀಕಿ ವರ್ಣಚಿತ್ರ. ಚಿತ್ರ- ಎ.ವೀರಮಣಿ
Advertisement
Advertisement
ನಾನು ಸೂಪರ್.... ಬೆಂಗಳೂರಿನಲ್ಲಿ ಅಕ್ಟೋಬರ್ 31ರಿಂದ ಆಭರಣ ಪ್ರದರ್ಶನ ಆರಂಭವಾಗಲಿದ್ದು, ಇದರ ಪ್ರಚಾರದ ಅಂಗವಾಗಿ ನಟಿ ಪ್ರಿಯಾಮಣಿ ಆಭರಣದೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಹೀಗೆ.
ಚಾಮುಂಡೇಶ್ವರಿಗೆ ಪೂಜೆ... ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ರಥೋತ್ಸವಕ್ಕೆ ಮುನ್ನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮುಂಡೇಶ್ವರಿ ಪೂಜೆ ನೆರವೇರಿಸಿದರು.
ಕೂಲಿ ನಂ1... ಟಿವಿ ಶೋ ಚಿತ್ರೀಕರಣದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಕೂಲಿಯ ರೂಪದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಬಸ್ ನಿಲ್ದಾಣದಲ್ಲಿದ್ದ ಬಸ್ನ ಟಾಪ್ ಮೇಲೆ ಕುಳಿತು ಸಾಮಾನು ಇಳಿಸಿದ್ದನ್ನು ಕಂಡು ಅಚ್ಚರಿಗೊಂಡ ಜನ.
ಹೆಂಗಿದೆ ಹಬ್ಬದ ಸೆಲ್ಫೀ?...ಬಾಂಗ್ಲಾದೇಶದಲ್ಲೂ ನವರಾತ್ರಿ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು. ದುರ್ಗಾಪೂಜೆ ಹಬ್ಬದ ಪ್ರಯುಕ್ತ ಹಣೆಗೆ ಸಿಂಧೂರವಿಟ್ಟುಕೊಂಡು ಕೆನ್ನೆಗೂ ಕಂಕುಮ ಬಳಿದುಕೊಂಡು ಹಿಂದೂ ಮಹಿಳೆಯರು ದೇವಾಲಯದೆದುರು ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು.
ದಸರಾ ಅವತಾರ...ನವದೆಹಲಿಯಲ್ಲಿ ದಸರಾ ಹಬ್ಬದ ಅಂಗವಾಗಿ ನಡೆದ ಉತ್ಸವದಲ್ಲಿ ಕಲಾವಿದರು, ರಾಮ, ಹನುಮಂತ, ಗಣೇಶ ಹಾಗೂ ರಾವಣನ ಅವತಾರದಲ್ಲಿ ಕಾಣಿಸಿದ್ದು ಹೀಗೆ.
ರಾಣಿಗೆ ಮೊದಲ ಗೌರವ... ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮೊದಲ ಬಾರಿಗೆ ನಾಲ್ಕು ದಿನಗಳ ಬ್ರಿಟನ್ ಪ್ರವಾಸ ಕೈಗೊಂಡಿದ್ದು, ಲಂಡನ್ ನಲ್ಲಿರುವ ಬಕಿಂಗ್ ಹ್ಯಾಂ ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತದ ವೇಳೆ, ಚೀನಾ ಅಧ್ಯಕ್ಷರು ರಾಣಿ ಎರಡನೇ ಎಲಿಜಬೆತ್ ರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು.
ಹೂ ನಮನ... ಜಂಬೂಸವಾರಿಗೆ ಸಿದ್ದಗೊಂಡಿರುವ ಅರ್ಜುನ ಆನೆಗೆ ಡಿಸಿಪಿ ಬಸವರಾಜ್ ವಿ.ಕಿತ್ತೂರ್ ಅವರು ಸೋಮವಾರ ಮೈಸೂರು ಅರಮನೆ ಮೈದಾನದಲ್ಲಿ ವಿಶೇಷವಾಗಿ ಸಿದ್ಧಪಡಿಸಿದ್ದ ಹಲಗೆ ಮೇಲೆ ಹೂ ನಮನ ಸಲ್ಲಿಸಿದರು.
ಮ್ಯೂಸಿಕ್ ಫ್ಯೂಷನ್... ನಾಡಹಬ್ಬ ದಸರಾ ಅಂಗವಾಗಿ ಮೈಸೂರು ಅರಮನೆ ಮುಂದೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಬ್ಯಾಂಡ್ ತಂಡ ಮನ ಸೆಳೆಯುವ ಸಂಗೀತದ ಮೂಲಕ ಗಮನ ಸೆಳೆಯಿತು. ಈ ವೇಳೆ ಕರ್ನಾಟಕ ಶಾಸ್ತ್ರೀಯ ಮತ್ತು ಪಾಶ್ಚತ್ಯ ಸಂಗೀತವನ್ನು ಪ್ರಸ್ತುತ ಪಡಿಸಲಾಯಿತು.
ಝಗಮಗ ಅರಮನೆ... ಮೈಸೂರಿನಲ್ಲೀಗ ದರಸೆಯ ಸಂಭ್ರಮ. ಇಲ್ಲಿನ ಕೆ.ಆರ್. ಸರ್ಕಲ್ ಮೂಲಕ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ಮೈಸೂರು ಅರಮನೆ ಕಂಗೊಳಿಸಿ, ರಾಜ ವೈಭವ ನೆನಪಿಸಿದ್ದು ಹೀಗೆ. ಈಗಾಗಲೇ ದೇಶ-ವಿದೇಶಗಳ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದಾರೆ.
ಡಾಕ್ಟರೇಟ್ ಗೌರವ... ಸ್ಕಾಟ್ಲೆಂಡ್ ನ ಎಡಿನ್ ಬರ್ಗ್ ಯುನಿವರ್ಸಿಟಿಯಲ್ಲಿ ಪ್ರಿನ್ಸೆಸ್ ಕಾಯಲ್ ಆಫ್ ಎಡಿನ್ ಬರ್ಗ್ ಅವರು ಬಾಲಿವುಡ್ ನಟ ಶಾರುಖ್ ಖಾನ್ ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ನಾವೆಲ್ಲರೂ ಕಲಾಂಗಳೇ... ಸಾಯಿಬಾಬಾನಗರದಲ್ಲಿರುವ ಲಿಟಲ್ ಫ್ಲವರ್ ಸ್ಕೂಲ್ ನಲ್ಲಿ ಮಾಜಿ ರಾಷ್ಟ್ಪಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬದ ಅಂಗವಾಗಿ ಮಕ್ಕಳೆಲ್ಲ ಕಲಾಂ ಮಾಸ್ಕ್ ಧರಿಸಿ ಕೇಕ್ ಕತ್ತರಿಸಿ ಸಂಭ್ರಮಾಚರಿಸಿದರು.
ಫೈನಲ್ ಟಚ್... ಕಾಕ್ಸ್ ಟೌನ್ ನಲ್ಲಿ ಕಲಾವಿದನೊಬ್ಬ ದುರ್ಗಾದೇವಿ ಮೂರ್ತಿಗೆ ಅಂತಿಮ ಟಚ್ ನೀಡುತ್ತಿರುವುದು.
ಮುತ್ತಿನ ಮತ್ತೇ ಗಮ್ಮತ್ತು... ಲಾಸ್ ಏಂಜಲಿಸ್ ನಲ್ಲಿ ನಡೆದ ಹಾಲಿವುಡ್ ವಾಕ್ ಆಫ್ ಫೇಮ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತೆಯಾದ ಕಿರುತೆರೆ ತಾರೆ ಕೆಲ್ಲಿ ರಿಪಾರನ್ನು ಅಭಿನಂದನಾಪೂರ್ವಕವಾಗಿ ಚುಂಬಿಸುತ್ತಿರುವ ನಟ ಮ್ಯಾಟ್ ಬೋಮರ್ ಮತ್ತು ಟೆಡ್ ಮೆಕ್ ಗಿನ್ಲೆ.
ವಾಟಾಳ್ ಬುರ್ಕಾ... ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ವಾಟಾಳ್ ನಾಗರಾಜ್ ಅವರು ಮಂಗಳವಾರ ಬೆಂಗಳೂರಿನ ಟೌನ್ ಹಾಲ್ ಬಳಿ ಬುರ್ಕಾ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಗೌರವದ ಹೊತ್ತು... ಅಮ್ಮಾನ್ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಜೋರ್ಡಾನ್ ವಿಶ್ವವಿದ್ಯಾಲಯ ಸೋಮವಾರ ರಾಜ್ಯಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಈ ವೇಳೆ ಪ್ರಣಬ್ ಹಾಗೂ ಮತ್ತಿತರರು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.
ಬಿಗ್ ಸೆಲ್ಫಿ... ಭಾನುವಾರ ತಮ್ಮ 73ನೇ ಜನ್ಮದಿನ ಆಚರಿಸಿಕೊಂಡ ಬಾಲಿವುಡ್ ಹಿರಿಯ ನಟ, ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮಾಧ್ಯಮಗೋಷ್ಠಿಯಲ್ಲಿ ಕಾಣಿಸಿಕೊಂಡರು. ಈ ವೇಳೆ ಬಿಗ್ ಬಿ ಸೆಲ್ಫಿ ತೆಗೆದುಕೊಂಡ ಸಂಭ್ರಮದ ಕ್ಷಣ.
ಕುಣಿಯೋಣು ಬಾರಾ: ನವರಾತ್ರಿ ಪ್ರಯುಕ್ತ ಗುಜರಾತ್ ನ ಅಹ್ಮದಾಬಾದಿನಲ್ಲಿ ನಡೆದ ಸಾಂಪ್ರದಾಯಿಕ ಗರ್ಬಾ ನೃತ್ಯ ಪ್ರದರ್ಶನದ ವೇಳೆ ಸ್ಥಳೀಯ ಯುವತಿಯರು ಹೆಜ್ಜೆಹಾಕಿದರು.
ನಾನಾ...ನೀನಾ... ನವದೆಹಲಿಯಲ್ಲಿ ಶುಕ್ರವಾರ ನಡೆದ ಮಿಸ್ ಇಂಡಿಯಾ ಎಲೈಟ್ 2015 ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾಳುಗಳು ಕ್ಯಾಮರ ಕಣ್ಣಿಗೆ ಸೆರೆಸಿಕ್ಕಿದ್ದು ಹೀಗೆ.
ನಯ-ನಾಜೂಕು... ಮುಂಬೈಯಲ್ಲಿ ಜಝ್ಜಾ ಚಲನಚಿತ್ರದ ಪ್ರೀಮಿಯರ್ ಶೋ ವೇಳೆ ತಾಯಿ ಬೃಂದಾ ರೈ ಜತೆಗೆ ಆಗಮಿಸಿದ ನಟಿ ಐಶ್ವರ್ಯಾರೈ.
ಹೇಗಿದ್ದಾರೆ ವಾಜಪೇಯಿ..! ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಪುರಸ್ಕೃತ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಇತ್ತೀಚೆಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೇಟಿಯಾಗಿದ್ದು, ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ವಾಜಪೇಯಿ ಮತ್ತು ಸುಷ್ಮಾ ಸ್ವರಾಜ್ ಅವರು ಕಂಡುಬಂದಿದ್ದು ಹೀಗೆ
ಅಬ್ಬಾ, ಏನ್ ಕಸರತ್ತು... ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಆಯೋಜಿಸಲಾಗಿದ್ದ ಐಎಎಫ್ನ 85ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಗೌರವ ಗ್ರೂಪ್ ಕ್ಯಾಪ್ಟನ್ ಆಗಿರುವ ಸಚಿನ್ ತೆಂಡೂಲ್ಕರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪರೇಡ್ ಮತ್ತು ವೈಮಾನಿಕ ಕಸರತ್ತುಗಳನ್ನು ಮೊಬೈಲ್ನಿಂದ ವಿಡಿಯೋ ಮಾಡಿದ್ದು ಹೀಗೆ.
ಕೋಳಿ ರ್ಯಾಲಿ... ಸಂಕಷ್ಟದಲ್ಲಿರುವ ಕೋಳಿ ಸಾಕಾಣಿಕೆದಾರರಿಗೆ ವಿದೇಶಿ ಮತ್ತು ಸ್ವದೇಶಿ ಕಂಪನಿಗಳಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ಕೋಳಿ ಸಾಕಾಣಿಕೆದಾರರ ಕಲ್ಯಾಣ ಸಂಘಟನೆಯ ರೈತರು ಬೆಂಗಳೂರು ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ರ್ಯಾಲಿ ನಡೆಸಿದರು.
ಅಭ್ಯಾಸ ಬಲ... ಗಾಜಿಯಾಬಾದ್ ನ ಹಿಂಡನ್ ನಲ್ಲಿ ಮಂಗಳವಾರ ಭಾರತೀಯ ವಾಯುಪಡೆ ದಿನಕ್ಕಾಗಿ ಯೋಧರು ಭರ್ಜರಿ ತಾಲೀಮು ನಡೆಸಿದರು. ಅಭ್ಯಾಸದ ವೇಳೆ ಸೇನಾನಿಗಳು ತಮ್ಮ ಗನ್ ಗಳನ್ನು ಮೇಲಕ್ಕೆ ಹಾರಿಸಿದ ಕ್ಷಣ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.
ಮೇಕ್ ಇನ್ ಇಂಡಿಯಾ ಅಂದ್ರೆ ಹೀಗೆ...ಬೆಂಗಳೂರಿನಲ್ಲಿರುವ ಬಾಷ್ ಕಂಪನಿಗೆ ಜರ್ಮನಿ ಪ್ರಧಾನಿ ಏಂಜಲಾ ಮರ್ಕೆಲ್ ಜತೆಗೆ ಮಂಗಳವಾರ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಮೇಕ್ ಇನ್ ಇಂಡಿಯಾದ ಪ್ರತಿರೂಪದ ಬಗ್ಗೆ ವಿವರಣೆ ನೀಡುತ್ತಿರುವುದು.
ಲಲನೆಯರ ರ್ಯಾಂಪ್ ವಾಕ್... ಅಲಹಬಾದ್ ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಲಲನೆಯರು.
ಬೆಂಗಳೂರಿಗೆ ಸ್ವಾಗತ... ನಗರದಲ್ಲಿ ಆಯೋಜಿಸಲಾಗಿರುವ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜರ್ಮನಿ ಚಾನ್ಸಲರ್ ಆಂಜೆಲಾ ಮಾರ್ಕೆಲ್ ಅವರು ಬೆಂಗಳೂರಿಗೆ ಸೋಮವಾರ ರಾತ್ರಿ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬರಮಾಡಿಕೊಂಡರು.
ಫೋಟೋ ಫಿನಿಶ್... ನಾಯಿಗೂ ಇದೆ ರಾಜಕೀಯ ಯೋಗ ಎನ್ನುವ ಹಾಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ತನ್ನ ಮೆಚ್ಚಿನ ನಾಯಿಗೆ ಟೋಪಿ, ಕನ್ನಡಕ ತೊಡಿಸಿದ ಯುವತಿ ಚಿತ್ರ ತೆಗೆದು ಸಂಭ್ರಮಿಸಿದಳು. ಚಿತ್ರ-ಕೆ.ರವಿ
ದಿಗ್ಗಜರ ಸಮಾಗಮ... ಚೆನ್ನೈನಲ್ಲಿ ನಡೆದ ಐಎಸ್ಎಲ್ 2015ರ ಉದ್ಘಾಟನ ಸಮಾರಂಭಕ್ಕೆ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಜನಿಕಾಂತ್, ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಸಾಕ್ಷಿಯಾದರು.
ಕುಬ್ಜೆಯರ ಬೆಕ್ಕಿನ ನಡಿಗೆ... ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ಯಾಷನ್ ಶೋನಲ್ಲಿ ಈ ಬಾರಿ ಕುಬ್ಜೆಯರು ಭಾಗವಹಿಸಿದ್ದು ವಿಶೇಷ. ವಿಶೇಷ ಉಡುಗೆಗಳನ್ನು ತೊಟ್ಟು ನಾವು ಯಾರಿಗೂ ಕಮ್ಮಿ ಇಲ್ಲ ಎಂದು ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿದರು.
ಮುಷ್ಕರವಿದೆ ಆದ್ರೆ ಆದಾಯ?... ಲಾರಿ ಮಾಲೀಕರ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಲಾರಿ ಚಾಲಕರು ವಿಶ್ರಾಂತಿ ಪಡೆಯುತ್ತಿರುವುದು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದಿನದ ಆದಾಯಕ್ಕೇನು ಎಂದು ಯೋಚಿಸುವಂತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಗ್ರೇಟ್ ಮಲ್ನಾಡ್ ಚಾಲೆಂಜ್-2015 ಸೈಕ್ಲಿಂಗ್ ನಲ್ಲಿ ಯುವಜನರು ಭಾಗವಹಿಸಿದ್ದರು.