ಸಿಎಂ ಕೈಯಲ್ಲಿ ನಿಂಬೆ ಹಣ್ಣು! ಮೈಸೂರಿನಲ್ಲಿ ಮಂಗಳವಾರ ನಡೆದ ಜನತಾ ದರ್ಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಸಿಎಂಗೆ ಉಗುರು ಸುತ್ತು ಆಗಿದೆ. ಹೀಗಾಗಿ ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದಿದ್ದಾರೆ ಎಂದು ಸಿಎಂ ಆಪ್ತ
ಮುತ್ತಿನ ಸ್ವಾಗತ...ಲ್ಯಾಕ್ಮೆ ಫ್ಯಾಷನ್ ವೀಕ್ ನ ಫೈನಲ್ ಶೋನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕರೀಷ್ಮ ಕಪೂರ್ ಗೆ ಮುತ್ತಿನ ಸ್ವಾಗತ.
ಗಣಪತಿ ಮೂರ್ತಿ ತಯಾರಿ... ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ತಯಾರಕರು ಮೂರ್ತಿಯನ್ನು ತಯಾರಿಕೆಯಲ್ಲಿ ಮಗ್ನರಾಗಿರುವುದು.
Advertisement
Advertisement
ಮಹಾಂಕಾಳಿ ದರ್ಶನ ಪಡೆದ ಸಿಂಧು: ರಿಯೋ ಒಲಿಂಪಿಕ್ಸ್ ನ ಬೆಳ್ಳಿತಾರೆ ಪಿ.ವಿ.ಸಿಂಧು ಅವರು ಶನಿವಾರ ಹಳೆ ಹೈದರಾಬಾದ್ ನಲ್ಲಿರುವ ಅಕ್ಕನ್ನ ಮಾದನ್ನ ಮಹಾಂಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು.
ಪೊಲೀಸ್ ರಕ್ಷಣೆಯಲ್ಲಿ ರಮ್ಯಾ... ಪಾಕಿಸ್ತಾನ ಪರ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಶುಕ್ರವಾರ ಮಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಎನ್.ಚಂದ್ರಶೇಖರ್ ಅವರ ರಕ್ಷಣೆಯಲ್ಲಿ ಹೋಟೆಲ್ ನಿಂದ ಹೊರ ಬರುತ್ತಿರುವುದು.
ಕೃಷ್ಣ ಜನ್ಮಾಷ್ಟಮಿಯ ಶುಭಾಶಯ... ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಬೆಂಗಳೂರಿನಲ್ಲಿ ಕೃಷ್ಣನ ಕಲಾಕೃತಿ ರಚಿಸಿ, ಶುಭಕೋರಿದ್ದಾರೆ.
ಕೃಷ್ಣಾವತಾರ... ರಾಜಸ್ಥಾನದ ಅಜ್ಮೇರಾದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲಾ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಗೋವುಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.
ಸ್ಮೃತಿ ಇರಾನಿಯ ತಿರಂಗ ಯಾತ್ರೆ.... ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಮಂಗಳವಾರ ಚಿಕ್ಕಬಳ್ಳಾಪುರದಲ್ಲಿ ತಿರಂಗ ಯಾತ್ರೆಗೆ ಚಾಲನೆ ನೀಡಿದರು.
ಅಮೆರಿಕ ಭಾರತೀಯರ ಸ್ವಾತಂತ್ರ್ಯೋತ್ಸವ... ಅಮೆರಿಕದ ನ್ಯೂಯಾರ್ಕ್ ನಲ್ಲಿ ಅನಿವಾಸಿ ಭಾರತೀಯರು ಭಾನುವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್.
ರಾಜೀವ್ ಗಾಂಧಿಗೆ ರಾಷ್ಟ್ರಪತಿ ಪುಷ್ಪನಮನ... ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ 72ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ದೆಹಲಿಯ ವೀರಭೂಮಿಯಲ್ಲಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಸಾಕ್ಷಿ ಮಲಿಕ್ ಗೆ ಅಭಿನಂದನೆಗಳು... ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಸಮುದ್ರ ಕಿನಾರೆಯಲ್ಲಿ ರಿಯೋ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು ಹೀಗೆ.
ಪ್ರಧಾನಿಗೆ ರಕ್ಷಾ ಬಂಧನ... ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು. ಇದೇ ವೇಳೆ ಶಾಲಾ ಮಕ್ಕಳಿಂದ ತಮ್ಮ ಕೈಗೆ ರಾಕಿ ಕಟ್ಟಿಸಿಕೊಂಡು ರಕ್ಷಾ ಬಂಧನ ಆಚರಿಸಿದರು.
ತಿರಂಗ ಯಾತ್ರೆ... 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೋಮವಾರ ಭೋಪಾಲ್ ಮೀನುಗಾರರ ಸಮುದಾಯ ತಿರಂಗ ಯಾತ್ರೆ ಕೈಗೊಂಡಿತ್ತು.
ಸಂಸತ್ ಗೆ ದೀಪಾಲಂಕಾರ... ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದೆಹಲಿಯ ಸಂಸತ್ ಭವನವನ್ನು ಇದೇ ಮೊದಲ ಬಾರಿಗೆ ಎಲ್ಇಡಿ ಬಲ್ಬ್ ಗಳಿಂದ ಅಲಂಕರಿಸಲಾಗುತ್ತಿದೆ.
ಬಾಲಕರ ಬೀಚ್ ಕ್ರಿಕೆಟ್... ಚೆನ್ನೈನ ಪ್ರಸಿದ್ಧ ಮರಿನಾ ಬೀಚ್ ನಲ್ಲಿ ಬಾಲಕರು ಕ್ರಿಕೆಟ್ ಆಡುತ್ತಿರುವ ದೃಶ್ಯ.
ಹ್ಯಾಪಿ ಫ್ರೆಂಡ್ ಶಿಪ್ ಡೇ.... ಸೂರತ್ ಯುವತಿಯರು ಭಾನುವಾರ ಫ್ರೆಂಡ್ ಶಿಪ್ ಡೇ ಆಚರಿಸಿದ್ದು ಹೀಗೆ.
ಗುಡ್ ಲಕ್ ಫಾರ್ ಗೋಲ್ಡ್... ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಸಮುದ್ರ ಕಿನಾರೆಯಲ್ಲಿ ರಿಯೋ ಒಲಂಪಿಕ್ಸ್ ಸ್ಪರ್ಧಾಳುಗಳಿಗೆ ಶುಭಕೋರಿ, 'ಗೋ ಫಾರ್ ಗೋಲ್ಡ್' ಎಂದು ಬರೆದು, ಅಕರ್ಷಕ ಮರಳು ಶಿಲ್ಪವೊಂದನ್ನು ರಚಿಸಿರುವುದು.
ಅಕಿರಾ ಪ್ರಚಾರ... ಮುಂಬೈನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ ಅಕಿರಾ ಪ್ರಚಾರಾರ್ಥ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ.
ರಿಯೋ ಒಲಿಂಪಿಕ್ಸ್ ಗೆ ಶುಭ ಕೋರಿದ ಮಕ್ಕಳು... ಅಹಮದಬಾದ್ ಶಾಲಾ ಮಕ್ಕಳು ಒಲಿಂಪಿಕ್ ಲಾಂಛನದ ಪ್ರತಿರೂಪವನ್ನು ತಯಾರಿಸುವ ಮೂಲಕ ರಿಯೋ ಒಲಿಂಪಿಕ್ಸ್ 2016ಕ್ಕೆ ಶುಭ ಕೋರಿದರು.
ಹೇಗಿದೆ ನಮ್ ಪೋಸ್... ಬಾಲಿವುಡ್ ನಟಿ ಇಲಿಯಾನ ಡಿಕ್ರೂಜ್, ನಟ ಅಕ್ಷಯ್ ಕುಮಾರ್ ಹಾಗೂ ನಟಿ ಈಶಾ ಗುಪ್ತಾ ಅವರು ಮಂಗಳವಾರ ಮುಂಬೈನಲ್ಲಿ ನಡೆದ ಫೋಟೋ ಶೂಟ್ ವೊಂದಕ್ಕೆ ಪೋಸ್ ನೀಡಿದ್ದು ಹೀಗೆ.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.