ವಿಶ್ವ ಹೃದಯ ದಿನ.... ಬೆಂಗಳೂರಿನ ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಸುಮಾರು 150 ವಿದ್ಯಾರ್ಥಿಗಳು ಗುರುವಾರ ವಿಶ್ವ ಹೃದಯ ದಿನವನ್ನು ಆಚರಿಸಿದ್ದು ಹೀಗೆ.
ಕೇದರನಾಥನ ದರ್ಶನ ಪಡೆದ ರಾಷ್ಟ್ರಪತಿ... ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ಉತ್ತರಾಖಂಡ್ ರಾಜ್ಯಪಾಲ ಕೆ.ಕೆ.ಪೌಲ್ ಹಾಗೂ ಉತ್ತರಾಖಂಡ್ ಮುಖ್ಯಮಂತ್ರಿ ಹರಿಶ್ ರಾವತ್ ಅವರೊಂದಿಗೆ ಕೇದರನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು.
ಮಾತೆಯೊಂದಿಗೆ ಮೋದಿ ಮಾತು... ಕೊಚ್ಚಿಯ ಮಾತಾ ಅಮೃತಾನಂದಮಯಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೆಹಲಿಯಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿದರು.
Advertisement
Advertisement
ರತ್ನಾಲಮ್ಮ ದೇವಿಗೆ ಪೊಂಗಲ್ಲು ಅರ್ಪಿಸಿದ ಸಿಂಧು...ಪಶ್ಚಿಮ ಗೋದಾವರಿಯ ಪೇಡವೇಗಿ ಮಂಡಲದಲ್ಲಿರುವ ರತ್ನಾಲಮ್ಮ ದೇವಿಗೆ ಪೊಂಗಲ್ಲು ಅರ್ಪಿಸಿದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು.
ಮೈಸೂರು ದಸರ ಉತ್ಸವಕ್ಕೆ ಸಿದ್ಧತೆ...ವಿಶ್ವವಿಖ್ಯಾತ ಮೈಸೂರು ದಸರ ಉತ್ಸವ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಮುಂದಿನ ಆವರಣದಲ್ಲಿರುವ ಹೂವಿನ ಗಿಡಗಳಿಗೆ ನೀರು ಹಾಯಿಸುತ್ತಿರುವ ಮಹಿಳೆ.
ಭೂಗರ್ಭ ಸೀಳಿ ಹೊರಬಂದ ಕೃಷ್ಣಾ... ಚಿಕ್ಕಪೇಟೆಯಿಂದ 750 ಮೀಟರ್ ಉದ್ದದ ಸುರಂಗ ನಿರ್ಮಿಸಿದ ಕೃಷ್ಣಾ ಟಿಬಿಎಂ ಮೆಜೆಸ್ಟಿಕ್ ಚಿಕ್ಕಲಾಲ್ ಬಾಗ್ ಬಳಿ ಶುಕ್ರವಾರ ಹೊರಬಂದಿದೆ.
ಮರವೇರಿದ ಚಿರತೆ... ಸೂರತ್ ನ ಪ್ರಾಣಿ ಸಂಗ್ರಹಾಲಯದಲ್ಲಿ ಶುಕ್ರವಾರ ಚಿರತೆಯೊಂದು ಮರವೇರಿ ವಿಶ್ರಮಿಸಿದ್ದು ಹೀಗೆ.
ಕಾಂಗ್ರೆಸ್ ನಾಯಕನ ಕೈಗೆ ಕತ್ತಿ... ಉತ್ತರ ಪ್ರದೇಶದಲ್ಲಿ ಕಿಸಾನ್ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗುರುವಾರ ಕಾನ್ಪುರದ ಗುರುದ್ವಾರದಲ್ಲಿ ಕತ್ತಿ ನೀಡಿ ಗೌರವಿಸಲಾಯಿತು.
ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ... ಲಖನೌ ವಿದ್ಯಾರ್ಥಿನಿಯರು ಉರಿ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕ್ಯಾಂಡಲ್ ಹಿಡಿದು ಪ್ರಾರ್ಥನೆ ಸಲ್ಲಿಸಿದರು.
ವನಿತೆಯರ ಕುಸ್ತಿ...ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಒಲಿಂಪಿಕ್ಸ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಮಂಗಳವಾರ ಕುಸ್ತಿ ಆಟದ ಪೋಸ್ ನೀಡಿದರು.
ಭಯೋತ್ಪಾದನೆ ನಿಲ್ಲಿಸಿ... ಅಜ್ಮೆರ್ ಮಕ್ಕಳು ವಿವಿಧ ಧರ್ಮಗಳನ್ನು ಪ್ರತಿನಿಧಿಸುವ ಉಡುಪು ಧರಿಸಿ, ಭಯೋತ್ಪಾದನೆ ನಿಲ್ಲಿಸಿ ಎಂದು ಸಾರುವ ಮೂಲಕ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು.
ಹುತಾತ್ಮ ಯೋಧರಿಗೆ ಅಂತಿಮ ನಮನ... ಜಮ್ಮು ಮತ್ತು ಕಾಶ್ಮೀರ ಉರಿ ಸೆಕ್ಟರ್ ನಲ್ಲಿ ಭಾನುವಾರ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸೇನಾ ಹಿರಿಯ ಅಧಿಕಾರಿಗಳು ಸೋಮವಾರ ಶ್ರೀನಗರದಲ್ಲಿ ಅಂತಿಮ ನಮನ ಸಲ್ಲಿಸಿದರು.
ಹ್ಯಾಪಿ ಬರ್ತಡೇ ಮೋದಿಜಿ... ದೆಹಲಿಯಲ್ಲಿ ನಡೆದ ಸ್ವಚ್ಚ ಭಾರತ ಕಾರ್ಯಕ್ರಮದಲ್ಲಿ ರೇಲ್ವೆ ಸಚಿವ ಸುರೇಶ್ ಪ್ರಭು ಅವರು ಅತಿ ದೊಡ್ಡ ಲಡ್ಡು ವಿತರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಜನ್ಮದಿನವನ್ನು ಆಚರಿಸಿದರು.
ತಾಜ್ ಹಿಂಬದಿಯ ಕೊಳದಲ್ಲಿ ಗಣೇಶ ವಿಸರ್ಜನೆ... ಆಗ್ರದ ಜಗತ್ ಪ್ರಸಿದ್ಧ ತಾಜ್ ಮಹಲ್ ಹಿಂಬದಿಯಲ್ಲಿರುವ ನದಿಯಲ್ಲಿ ಭಕ್ತರು ನೂರಾರು ಗಣೇಶ ಮೂರ್ತಿಯನ್ನು ವಿಸರ್ಜಿಸಿದರು.
ಮುಗಿಲು ಮುಟ್ಟಿದ ನೂತನ ಯೋಧರ ಸಂಭ್ರಮ... ಗುರಗಾಂವನ ಕಾದರ್ ಪುರದಲ್ಲಿರುವ ಸಿಆರ್ ಪಿಎಫ್ ಅಕಾಡೆಮಿಯಲ್ಲಿ ತರಬೇತಿ ಪೂರೈಸಿದ ನಂತರ ನೂತನ ಯೋಧರು ಸಂಭ್ರಮಿಸಿದ್ದು ಹೀಗೆ.
ಬೆಂಗಳೂರಿಗೆ ಬಂದ್ ಬಿಸಿ....ಕಾವೇರಿ ಹೋರಾಟದ ನಿಮಿತ್ತ ಶುಕ್ರವಾರ ನಡೆದ ಕರ್ನಾಟಕ ಬಂದ್ ವೇಳೆ ಸದಾ ಕಾಲಾ ವಾಹನಗಳಿಂದ ತುಂಬಿ ತುಳುಕುತ್ತಿದ್ದ ಕನ್ನಿಂಗ್ ಹ್ಯಾಮ್ ಜಂಕ್ಷನ್ ನಲ್ಲಿ ವಾಹನಗಳಿಲ್ಲದೇ ಬಿಕೋ ಎನ್ನುತ್ತಿತ್ತು....
ಇಂಡಿಯಾಗೆ ಮದುವೆ.... ತಂಜಾವುರಿನಲ್ಲಿ 24 ವರ್ಷದ ಇಂಡಿಯಾ ಗುರುವಾರ ಜೆ.ಸ್ಟಾಲಿನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಂದೆ ದಿ.ದೇಶಪ್ರೇಮಿ, ಸಾಮಾಜಿಕ ಕಾರ್ಯಕರ್ತ ಆಕೆಗೆ ಇಂಡಿಯಾ ಎಂದು ಹೆಸರಿಟ್ಟಿದ್ದರು.
ಚೆನ್ನೈನಲ್ಲಿ ಕ್ರಿಸ್ ಗೇಯ್ಲ್ ಗೆ ಸನ್ಮಾನ...ಚೆನ್ನೈನ ಶಾಲೆಯೊಂದರಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಅವರಿಗೆ ಶಾಲು ಹೊದೆಸಿ, ಕಿರೀಟ ತೊಡಿಸಿ ಸನ್ಮಾನಿಸಲಾಯಿತು.
ಗೌರಿ-ಗಣೇಶ ಹಬ್ಬದ ನಿಮಿತ್ತ ಬೆಂಗಳೂರಿನ ಮಲ್ಲೇಶ್ವರದಲ್ಲಿ ಭಕ್ತರೊಬ್ಬರು ಗಣೇಶ ಮೂರ್ತಿಯನ್ನು ಮನೆಗೆ ಒಯ್ದರು.
ಗಣೇಶ ಬಂದ ದಾರಿ ಬಿಡಿ... ಗಣೇಶ ಹಬ್ಬದ ಪ್ರಯುಕ್ತ ರಾಜಸ್ಥಾನದ ಬೀವಾರ್ ನಲ್ಲಿ ಭಾನುವಾರ ಗಣೇಶ ಮೂರ್ತಿಯನ್ನು ತಮ್ಮ ಮನೆಗೆ ಕೊಂಡಯ್ಯುತ್ತಿರುವ ಜನ.
ಬಿಗ್ ಸ್ವಚ್ಛತೆ... ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶನಿವಾರ ಮುಂಬೈನಲ್ಲಿ ರಸ್ತೆಗೂಡಿಸುವ ಮೂಲಕ ಮಹಾ ಕ್ಲೀನಾಂಥನ್ ಗೆ ಚಾಲನೆ ನೀಡಿದರು.
ಕೆಂಪು ಭಾವುಟ.... ಭಾರತ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಉತ್ತರ ತ್ರಿಪುರದ ಧರ್ಮಾನಗರದಲ್ಲಿ ರೈಲು ನಿಲ್ಲಿಸಲು ಹಳಿಯ ಮಧ್ಯ ಕೆಂಪು ಭಾವುಟ ನೆಡಲಾಗಿತ್ತು.
ಪರಿಸರ ಸ್ನೇಹಿ ಗಣೇಶ... ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಕುರಿತು ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಗಣೇಶನ ಕಟೌಟ್ ಹಾಗೂ ಮೂರ್ತಿಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.
ದೆಹಲಿಯಲ್ಲಿ ಗುರುವಾರ ನಡೆದ ಶ್ರಮಿಕ್ ಸಂಬದ್ ಕಾರ್ಯಕ್ರಮದಲ್ಲಿ ಕಲಾವಿದರು ಪ್ರದರ್ಶನ ನೀಡಿದ್ದು ಹೀಗೆ.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.