ಅಮಿತ್ ಶಾ ವಿರುದ್ಧ ಕೈ ಪ್ರತಿಭಟನೆ... ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಮಂಗಳವಾರ ಪ್ರತಿಭಟನೆ ಮಾಡಿದ್ದು ಹೀಗೆ.
ನೋಟ್ ನಿಷೇಧದ ವಿರುದ್ಧ ಆಕ್ರೋಶ... 500 ಹಾಗೂ 1000 ನೋಟ್ ನಿಷೇಧದ ವಿರುದ್ಧ ಕೊಯಂಬತ್ತೂರಿನಲ್ಲಿ ಡಿಎಂಕೆ ಕಾರ್ಯಕರ್ತರು ಸೋಮವಾರ ಷೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ.
ಬಸವನಗುಡಿ ಕಡಲೆಕಾಯಿ ಪರೀಷೆ...ಬೆಂಗಳೂರಿನ ಬಸವನಗುಡಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕಡಲೆಕಾಯಿ ಪರೀಷೆ ಆರಂಭಗೊಂಡಿದೆ.
Advertisement
Advertisement
ಸಂವಿಧಾನ ಶಿಲ್ಪಿಗೆ ಪುಷ್ಪ ನಮನ... ಸಂವಿಧಾನ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಧಾನಸೌಧದ ಬಳಿ ಇರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಕಾಗೆಗಳಿಗೆ ಕಾಳು... ಮುಂಬೈನ ಗೇಟ್ ವೇ ಆಫ್ ಇಂಡಿಯ ಹಾಗೂ ತಾಜ್ ಹೋಟೆಲ್ ಹೊರಗಡೆ ವ್ಯಕ್ತಿಯೊಬ್ಬ ಕಾಗೆಗಳಿಗೆ ಕಾಳು ಹಾಕುತ್ತಿರುವ ದೃಶ್ಯ ಕಂಡುಬಂದಿದ್ದು ಹೀಗೆ.
ಕ್ರಿಸ್ಮಸ್ ಮಾರುಕಟ್ಟೆ... ಕ್ರಿಸ್ಮಸ್ ಪ್ರಯುಕ್ತ ಜರ್ಮನಿಯ ಫ್ರಾಂಕ್ ಫರ್ಟ್ ನಲ್ಲಿ ಸಾಂಪ್ರದಾಯಿ ಕ್ರಿಸ್ಮಸ್ ಮಾರುಕಟ್ಟೆ ಆರಂಭವಾಗಿದ್ದು, ಅದರ ಒಂದು ನೋಟ.
ಅಯ್ಯೋ... ಎಲ್ಲಿ ಕುಳಿತುಕೊಳ್ಳೊದಪ್ಪಾ... ಬಿಜೆಪಿ ಸಂಸದೀಯ ಸಭೆಗೆ ಆಗಮಿಸಿದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿ17ವ ಅರುಣ್ ಜೇಟ್ಲಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಅವರು ಬರಮಾಡಿಕೊಂಡಿದ್ದು ಹೀಗೆ.
ರೈತರ ಪ್ರತಿಭಟನೆ... ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ವಿಧಾನಮಂಡಲದ ಉಭಯ ಸದನಗಳ ಕಲಾಪ ಆರಂಭವಾಗಿದ್ದು, ಅಧಿವೇಶನ ಆರಂಭಕ್ಕೂ ಮುನ್ನ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸುವರ್ಣಸೌಧ ಎದುರು ಪ್ರತಿಭಟನೆ ನಡೆಸುತ್ತಿರುವುದು.
ಟೀ-ಶರ್ಟ್ ಬಿಚ್ಚಿ ಪ್ರತಿಭಟಿಸಿದ ಮಂಗಳಮುಖಿ... 500-1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಬದಲಿ ಹಣಕ್ಕಾಗಿ ಎಟಿಎಂ ಮುಂದೆ ಕ್ಯೂನಲ್ಲಿ ನಿಂತು ಬೇಸತ್ತ ದೆಹಲಿ ಮಂಗಳಮುಖಿಯೊಬ್ಬರು ತಮ್ಮ ಟೀ-ಶರ್ಟ್ ಬಿಚ್ಚಿ ಪ್ರತಿಭಟಿಸಿದ ರೀತಿ.
ಚಿತ್ರೋತ್ಸವದಲ್ಲಿ ನೃತ್ಯದ ಝಲಕ್.... ಶುಕ್ರವಾರ ನಡೆದ 22ನೇ ಕೋಲ್ಕತಾ ಚಲನ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಕಲಾವಿದನೊಬ್ಬ ನೃತ್ಯ ಪ್ರದರ್ಶನ ನೀಡಿದ್ದು ಹೀಗೆ.
ನೋಡಿ ಹೊಸ 500 ರು. ನೋಟ್.... ಗುರುಗ್ರಾಮ್ ನಲ್ಲಿ ವ್ಯಕ್ತಿಯೊಬ್ಬ ಶುಕ್ರವಾರ ಹೊಸ 500 ರುಪಾಯಿ ನೋಟ್ ಪ್ರದರ್ಶಿಸಿದ್ದು ಹೀಗೆ.
ವಾಸ್ತುದೋಷವೋ ಏನೋ... ಪಿಚ್ಗೂ ಪೂಜೆ ವಿಶಾಖಪಟ್ಟಂನಲ್ಲಿರುವ ಡಾ.ವೈ ಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ಪೂಜೆ ಮಾಡಲಾಯಿತು. ಇಂಗ್ಲೆಂಡ್-ಭಾರತ ನಡುವಿನ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಮುನ್ನ ಪೂಜಾ ಕೈಂಕರ್ಯವನ್ನು ನಡೆಸಲಾಯಿತು.
ನೋಟ್ ನಿಷೇಧದ ವಿರುದ್ಧ ಟಿಎಂಸಿ ಪ್ರತಿಭಟನೆ... ಸಂಸತ್ ಚಳಿಗಾಲದ ಅಧಿವೇಶನ ಬುಧವಾರ ಆರಂಭವಾಗಿದ್ದು, ಕಲಾಪಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್ ಸಂಸದರು ಸಂಸತ್ ಹೊರಗೆ 500 ಹಾಗೂ 1000 ನೋಟ್ ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು ಹೀಗೆ.<h1 class=
ಸೂಪರ್
ಸೋಮವಾರ ಭೂಮಿಗೆ ತೀರಾ ಸಮೀಪದಲ್ಲಿ ಹಾದು ಹೋದ ಚಂದ್ರ ದೆಹಲಿಯಲ್ಲಿ ಕಂಡಿದ್ದು ಹೀಗೆ.." attribution="">
ಚಾಚಾಗೆ ನಮಸ್ಕಾರ... ಪಂಡಿತ ಜವಾಹರ್ ಲಾಲ್ ನೆಹರು ಅವರ 127ನೇ ಜನ್ಮದಿನದ ಸೋಮವಾರ ಅಲಹಬಾದ್ ನಲ್ಲಿ ಬಾಲಕಿಯರು ಚಾಚಾ ನೆಹರು ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ್ದು ಹೀಗೆ. ಭಾರತದಲ್ಲಿ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ಬುಲೆಟ್ ರೈಲು ಓಡಿಸಿದ ಮೋದಿ... ಜಪಾನ್ ಪ್ರವಾಸ ಕೈಗೊಂಡಿದ್ದ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆ ಸೇರಿ ಬುಲೆಟ್ ರೈಲನ್ನು ಓಡಿಸಿದ್ದಾರೆ.
ಚಲನಚಿತ್ರೋತ್ಸವಕ್ಕೆ ಚಾಲನೆ... ಬಾಲಿವುಡ್ ನಟಿ ಜಯಾ ಬಚ್ಚನ್ ಅವರು ಶನಿವಾರ ಕೋಲ್ಕತಾದಲ್ಲಿ 22ನೇ ಕೋಲ್ಕತಾ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಂಜಯ್ ದತ್ ಹಾಗೂ ಕಾಜಲ್ ಉಪಸ್ಥಿತರಿದ್ದರು.
ಹೊಸ ನೋಟ್ ಬಂತು ದಾರಿ ಬಿಡಿ.... ತಿರುವನಂತಪುರನಲ್ಲಿ ಭಾರಿ ಭದ್ರತೆಯೊಂದಿಗೆ ಹೊಸ ನೋಟ್ ಗಳನ್ನು ಬ್ಯಾಂಕ್ ಗಳಿಗೆ ಸಾಗಿಸುತ್ತಿರುವ ದೃಶ್ಯ ಕಂಡುಬಂದಿದ್ದು ಹೀಗೆ.
ವಾವ್... ಹೊಸ ನೋಟು... ಸಾರ್ವಜನಿಕರು ಹೊಸ 2000 ರುಪಾಯಿ ನೋಟ್ ಪಡೆದ ನಂತರ ಅದನ್ನು ಮಾಧ್ಯಮಕ್ಕೆ ಪ್ರದರ್ಶಿಸಿ ಖುಷಿಪಟ್ಟಿದ್ದು ಹೀಗೆ.
ಟ್ರಂಪ್ ಗೆಲುವಿಗೆ ಹಿಂದೂ ಸೇನ ಸಂಭ್ರಮ... ದೆಹಲಿಯಲ್ಲಿ ಹಿಂದೂ ಸೇನ ಕಾರ್ಯಕರ್ತರು ಅಮೆರಿಕಾದ 45ನೇ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಪೋಸ್ಟರ್ ಗೆ ಸಿಹಿ ತಿನಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ದುಬೈನ ಒಂದು ನೋಟ... ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲಿಫಾದಿಂದ ತೆಗೆದ ಒಂದು ಚಿತ್ರವಿದು.
ಅಭಿಮಾನಿಗಳ ಜತೆ ಬಾಕ್ಸರ್ ವಿಜೇಂದರ್ ಸಿಂಗ್ ಸೆಲ್ಫಿ... ಗುರ್ ಗಾಂವ್ ನಲ್ಲಿ ನಡೆದ ಸಮಾರಂಭದಲ್ಲಿ ಅಭಿಮಾನಿಗಳ ಜತೆ ಸೆಲ್ಫಿಗೆ ಪೋಸ್ ನೀಡಿದ ಬಾಕ್ಸರ್ ವಿಜೇಂದರ್ ಸಿಂಗ್.
ಸ್ಮೈಲ್ ಸೂಪರ್ ಮಗಳೆ.... ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಶನಿವಾರ ಮುಂಬೈನಲ್ಲಿ ನಡೆದ ಫ್ಯಾಶನ್ ಶೋ ಒಂದರಲ್ಲಿ ರ್ಯಾಂಪ್ ವಾಕ್ ಮಾಡುತ್ತಿದ್ದ ತಮ್ಮ ಪುತ್ರಿ ಶ್ವೇತಾ ಬಚ್ಚನ್ ನಂದಾ ಅವರ ಫೋಟೋ ಕ್ಲಿಕ್ಕಿಸಿದ್ದು ಹೀಗೆ..
ಹಾಯ್.... ಪುಷ್ಕರದ ಬ್ರಹ್ಮ ದೇವಸ್ಥಾನದಲ್ಲಿ ನಡೆದ ಅನ್ನಕೂಟ ಉತ್ಸವದ ವೇಳೆ ಬಾಲಿವುಡ್ ನಟಿ ಉರ್ಮಿಳಾ ಮಾತೊಡ್ಕರ್ ಅವರು ಅಭಿಮಾನಿಗಳತ್ತ ಕೈಬಿಸಿದ್ದು ಹೀಗೆ.
ಹುತಾತ್ಮ ಯೋಧರಿಗೆ ಗೌರವ... ಬಾಲಿವುಡ್ ನಟ ಜಾನ್ ಅಬ್ರಹಂ ಹಾಗೂ ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ಮುಂಬರುವ ಚಿತ್ರ ಫೋರ್ಸ್ 2 ಪ್ರಚಾರಾರ್ಥ ಕಾರ್ಯಕ್ರಮದ ವೇಳೆ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ಗೌರವ ವಂದನೆ ಸಲ್ಲಿಸಿದರು,
ಐತಿಹಾಸಿಕ ಹೋರಾಟ... ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಹಿಲರಿ ಕ್ಲಿಂಟನ್ ಹಾಗೂ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಹೋರಾಟವನ್ನು ಚಿತ್ರಿಸಿದ್ದು ಹೀಗೆ...
ವ್ಯಾಘ್ರನ ಚಿತ್ರ ಸೆರೆಹಿಡಿದ ಪ್ರಧಾನಿ ಮೋದಿ... ಚತ್ತೀಸ್ ಘಡ ರಾಜ್ಯ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅವರು ನಂದನ್ ವನ್ ಝೂನ್ ನಲ್ಲಿ ಹುಲಿಯ ಪೋಟೋ ಸೆರೆಹಿಡಿಯುತ್ತಿರುವ ದೃಶ್ಯ.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.