ಸೈನಿಕರಿಗೆ ಅರ್ಪಣೆ... ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪ್ರದೀಪ್ ಬೀಚ್ ನಲ್ಲಿ ಹ್ಯಾಪಿ ದೀಪಾವಳಿ ಎಂಬ ಕಲಾಕೃತಿಯನ್ನು ರಚಿಸಿ ಅದನ್ನು ಸೈನಿಕರಿಗೆ ಅರ್ಪಿಸಿದ್ದಾರೆ. 
ಇತರೆ

ಫೋಟೋ ಕ್ಲಿಕ್ ಅಕ್ಟೋಬರ್ 2016

ಗಡಿಯಲ್ಲಿ ಯೋಧರ ದೀಪಾವಳಿ ಸಂಭ್ರಮ...ದುನಾಜ್ ಪುರ್ ಬಿಎಸ್ಎಫ್ ಯೋಧರು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಪಟಾಕಿ ಸಿಡಿಸುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಹುತಾತ್ಮ ಯೋಧನಿಗೆ ಅಂತಿಮ ನಮನ... ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಮೃತಪಟ್ಟ ಬಿಎಸ್ಎಫ್ ಯೋಧ ಜಿತೇಂದ್ರ ಕುಮಾರ್ ಸಿಂಗ್ ಅವರಿಗೆ ಬಿಎಸ್ಎಫ್ ಹೆಚ್ಚುವರಿ ಮಹಾ ನಿರ್ದೇಶಕ ಅರುಣ್ ಕುಮಾರ್ ಅವರು ಶುಕ್ರವಾರ ಅಂತಿಮ ನಮನ ಸಲ್ಲಿಸಿದರು.
ಹ್ಯಾಪಿ ದೀಪಾವಳಿ.... ಸೂರತ್ ಕಾಲೇಜ್ ವಿದ್ಯಾರ್ಥಿನಿಯರು ಗುರುವಾರ ದೀಪ ಬೆಳಗಿಸುವ ಮೂಲಕ ದೀಪಾವಳಿ ಆಚರಿಸಿದರು.
ಏ ದಿಲ್ ಹೈ ಮುಷ್ಕಿಲ್... ಮುಂಬೈನಲ್ಲಿ ಮಂಗಳವಾರ ಏ ದಿಲ್ ಹೈ ಮುಷ್ಕಿಲ್ ಚಿತ್ರದ ಪ್ರದರ್ಶನದ ವೇಳೆ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಅನುಷ್ಕಾ ಶರ್ಮಾ ಅವರು ಕಾಣಿಸಿಕೊಂಡಿದ್ದು ಹೀಗೆ.
ಲಕ್ಷ್ಮೀ, ಗಣೇಶ ಬಂದ್ರು ದಾರಿ ಬಿಡಿ... ಮಿರ್ಜಾಪುರದಲ್ಲಿ ಮಂಗಳವಾರ ಮುಸ್ಲಿಂ ಮಹಿಳೆಯೊಬ್ಬರು ಗಣೇಶ ಹಾಗೂ ಲಕ್ಷ್ಮೀ ವೇಶಧಾರಿ ತನ್ನ ಮಕ್ಕಳನ್ನು ದೀಪಾವಳಿ ಹಬ್ಬದ ಪ್ರಯುಕ್ತ ಅವರ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿರುವುದು.
ಪುತ್ರಿಯೊಂದಿಗೆ ಆಮಿರ್ ಖಾನ್.... ಮುಂಬೈನಲ್ಲಿ ನಡೆಯುತ್ತಿರುವ 18ನೇ ಮುಂಬೈ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಅಮಿರ್ ಖಾನ್, ಪುತ್ರಿ ಇರಾ ಖಾನ್, ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ಹಾಗೂ ಸಾನ್ಯ ಮಲ್ಹೋತ್ರಾ.
ಕಬಡ್ಡಿ... ವಿಶ್ವ ವಿಜೇತರು
2016ನೇ ಸಾಲಿನ ವಿಶ್ವಕಪ್ ಕಬಡ್ಡಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇರಾನ್ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ ತಂಡ...
ಅಮ್ಮನ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ... ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಶೀಘ್ರ ಗುಣಮುಖರಾಗಲಿ ಎಂದು ಎಐಎಡಿಎಂಕೆ ಕಾರ್ಯಕರ್ತರು ಕೊಯಂಬತ್ತೂರಿನ ದೇವಸ್ಥಾನವೊಂದರಲ್ಲಿ ಶುಕ್ರವಾರ 1508 ದೀಪಗಳನ್ನು ಬೆಳಗಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಆಸಿಡ್ ಸಂತ್ರಸ್ಥೆಯ ಸೆಲ್ಫಿ ಸಂಭ್ರಮ... ಆಸಿಡ್ ದಾಳಿ ಸಂತ್ರಸ್ಥೆ ಲಕ್ಷ್ಮೀ ಅವರು ಬುಧವಾರ ಗುರಗಾಂವ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಮಗು ಮತ್ತು ಪತಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಮಹಾತ್ಮನಿಗೆ ಪುಷ್ಪ ನಮನ... ಮಯನ್ಮಾರ್ ನ ವಿದೇಶಾಂಗ ಸಚಿವೆ ಆಂಗ್ ಸಾನ್ ಸೂ ಕೀ ಅವರು ದೆಹಲಿಯ ರಾಜ್ ಘಾಟ್ ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಕಾವೇರಿ ತೀರ್ಥೋದ್ಭವಕ್ಕೆ ರಮ್ಯಾ ಸಾಕ್ಷಿ... ಸೋಮವಾರ ತಲಾ ಕಾವೇರಿಯಲ್ಲಿ ನಡೆದ ದಕ್ಷಿಣ ಗಂಗೆ ಎಂದೇ ಕರೆಯಲ್ಪಡುವ ಕೊಡಗಿನ ಜೀವನದಿ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಸಾಕ್ಷಿಯಾದರು.
ಬ್ರಿಕ್ಸ್ ಶೃಂಗಸಭೆಯಲ್ಲಿ ಪಂಚ ರಾಷ್ಟ್ರ ಪ್ರಧಾನಿಗಳು...
ಗೋವಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಂಚ ರಾಷ್ಟ್ರಗಳ ಪ್ರಧಾನಿಗಳಾದ ಭಾರತದ ನರೇಂದ್ರ ಮೋದಿ, ರಷ್ಯಾದ ವಾದ್ಲಿಮಿರ್ ಪುಟಿನ್, ಚೀನಾದ ಕ್ಸಿಜಿಂಗ್ ಪಿನ್, ದಕ್ಷಿಣ ಆಫ್ರಿಕಾದ ಜಾಕೋಬ್ ಝುಮಾ, ಬ್ರಿಜಿಲ್ ನ ಮೈಕೆಲ್ ಟೆಮೇರ್ ಭಾಗವ
ಕಲಾಂಗೆ ಸಲಾಂ... ರಾಷ್ಟ್ರಪತಿ ಭವನದಲ್ಲಿ ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ಪುಷ್ಪ ನಮನ ಸಲ್ಲಿಸಿದರು.
ಹೋಗಿ ಬರ್ತಿನಿ ನಮಸ್ಕಾರ... ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯ ನಂತರ ಆನೆ ಅರ್ಜುನ ಮರಳಿ ಕಾಡಿಗೆ ಹೋಗುವ ಮುನ್ನ ಸೊಂಡಿಲು ಮೇಲೆತ್ತಿ ಎಲ್ಲರಿಗೂ ನಮಸ್ಕರಿಸಿದ್ದು ಹೀಗೆ.
ಸಂಸದೆಯಾಗಿ ರೂಪಾ ಗಂಗೂಲಿ ಪ್ರಮಾಣ... ಬಿಜೆಪಿ ನಾಯಕಿ ರೂಪಾ ಗಂಗೂಲಿ ಅವರು ಶುಕ್ರವಾರ ಸಂಸತ್ ಭವನದಲ್ಲಿ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಅಧ್ಯಕ್ಷೆ ಹಮಿದ್ ಅನ್ಸಾರಿ ಅವರಿಂದ ರಾಜ್ಯಸಭೆಯ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಘವೇಂದ್ರ ಸ್ವಾಮಿ ದರ್ಶನ ಪಡೆದ ಪುನೀತ್ ರಾಜ್‍ಕುಮಾರ್...
ಸ್ಯಾಂಡಲ್ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.

ಬಿಗ್ ಬಿ ದುರ್ಗಾ ಪೂಜೆ... ನವರಾತ್ರಿ ಹಿನ್ನೆಲೆಯಲ್ಲಿ ಸೋಮವಾರ ಮುಂಬೈನ ದುರ್ಗಾ ದೇವಾಲಯದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಪತ್ನಿ ಜಯಾ ಬಚ್ಚನ್, ಪುತ್ರ ಅಭಿಷೇಖ್ ಬಚ್ಚನ್ ಹಾಗೂ ಪತ್ನಿ ಐಶ್ವರ್ಯ ರೈ ಬಚ್ಚನ್, ಪುತ್ರಿ ಆರಾಧ್ಯಾಳೊಂದಿಗೆ ಪೂಜೆ ಸಲ್ಲಿಸಿದರು.
ಅಗ್ರ ಭದ್ರತೆ... ಆಗ್ರದ ಪ್ರೇಮ ಸೌಧ ತಾಜ್ ಮಹಲ್ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧನೊಬ್ಬ ಶನಿವಾರ ಕಾಣಿಸಿಕೊಂಡಿದ್ದು ಹೀಗೆ.
ಪತ್ನಿಯರೊಂದಿಗೆ ನ್ಯೂಜಿಲೆಂಡ್ ಆಟಗಾರರ ಗಾರ್ಬ ನೃತ್ಯ... ಇಂದೋರ್ ನಲ್ಲಿ ನವರಾತ್ರಿ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರು ತಮ್ಮ ಪತ್ನಿಯರೊಂದಿಗೆ ಗಾರ್ಬ ನೃತ್ಯ ಮಾಡಿದರು.
ಕಲಾವಿದರಿಂದ ಗಾರ್ಬ ನೃತ್ಯ...ಗಾರ್ಬ ನೃತ್ಯ ಪ್ರದರ್ಶಿಸುತ್ತಿರುವ ಅಹಮದಾಬಾದ್ ಕಲಾವಿದರು.
ಕಲರ್ ಫುಲ್ ಪೇಂಟಿಂಗ್... ಮುಂಬೈನಲ್ಲಿ ಬುಧವಾರ ಚಿತ್ರಕಲಾ ಪ್ರದರ್ಶನ ಉದ್ಘಾಟನೆ ವೇಳೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಪೇಂಟಿಂಗ್ ವೊಂದರ ಜೊತೆ ಪೋಸ್ ಕೊಟ್ಟಿದ್ದು ಹೀಗೆ.
ಅನುಮಾನಕ್ಕೆ ಎಡೆಮಾಡಿದ ಫೋಟೋ...ಮಂಗಳೂರು ಮೂಲದ ಉದ್ಯಮಿ ವಿವೇಕ್ ರೈ ಎಂಬುವರ ಜತೆ ನಟಿ ರಾಧಿಕಾ ಅವರು ಮರುಮದುವೆಯಾಗಿದ್ದಾರೆಂಬ ಅನುಮಾನಕ್ಕೆ ಕಾರಣವಾದ ಫೋಟೋ.
ಅಮ್ಮನ ಚೇತರಿಕೆಗಾಗಿ ನೆಲದ ಮೇಲೆ ಊಟ... ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಶೀಘ್ರ ಗುಣಮುಖರಾಗಲಿ ಎಂದು ಎಐಎಡಿಎಂಕೆ ಮಹಿಳಾ ಸದಸ್ಯೆಯರು ಮಂಗಳವಾರ ಚೆನ್ನೈನ ದೇವಸ್ಥಾನವೊಂದರಲ್ಲಿ ನೆಲದ ಮೇಲೆ ಊಟ ಮಾಡಿದರು.
ಅಕ್ಕಿಗೆ ಆಲಿಯಾ ಪಂಚ್.... ಭಾನುವಾರ ಮುಂಬೈನಲ್ಲಿ ನಡೆಗ ಮಹಿಳೆಯರ ಆತ್ಮ ರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ನಟಿ ಆಲಿಯಾ ಭಟ್ ಪಂಚ್ ನೀಡಿದ್ದು ಹೀಗೆ.
ನಾಡ ಹಬ್ಬ ದಸರಾಗೆ ಚಾಲನೆ... ಹಿರಿಯ ಸಾಹಿತಿ, ನಾಡೋಜ ಚನ್ನವೀರ ಕಣವಿ ಅವರು ನಾಡ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ಉಪಸ್ಥಿತರಿದ್ದರು.
ಮೈಸೂರು ರಾಜ ಶ್ರೀ ಯದುವೀರ್ ಖಾಸಗಿ ದರ್ಬಾರ್...ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಮೈಸೂರು ರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸಿದ ಕ್ಷಣ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ