ಮೊರಾರ್ಜಿಗೆ ಮೋದಿ ನಮನ... ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಜನ್ಮ ದಿನದ ಅಂಗವಾಗಿ ಸಂಸತ್ ಭವನದಲ್ಲಿ ಅವರ ಭಾವಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರರು ಗೌರವ ನಮನ ಸಲ್ಲಿಸಿದರು.
ಮಹಿಳಾ ಬಾಡಿ ಬಿಲ್ಡರ್ ಗಳು... ಥಾಣೆಯಲ್ಲಿ ನಡೆದ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಚ್ಯಾಂಪಿಯನ್ ಶಿಪ್ ನಲ್ಲಿ ಮಹಿಳಾ ಅಭ್ಯರ್ಥಿಗಳು ಪೋಸ್ ನೀಡಿದ್ದು ಹೀಗೆ.ಬಿಜೆಪಿ ವಿಜಯೋತ್ಸವ... ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ಹೈದರಾಬಾದ್ ನಲ್ಲಿ ಕೇಂದ್ರ ಸಚಿವರಾದ ಎಂ.ವೆಂಕಯ್ಯ ನಾಯ್ಡು ಹಾಗೂ ಬಂಡಾರು ದತ್ತಾತ್ರೇಯ ಅವರು ವಿಜಯೋತ್ಸವ ಆಚರಿಸಿದ್ದು ಹೀಗೆ.ಶಿವಲಿಂಗಕ್ಕೆ ಕ್ಷಿರಾಭಿಷೇಕ... ಮಹಾಶಿವರಾತ್ರಿಯ ಅಂಗವಾಗಿ ಶುಕ್ರವಾರ ಅಲಹಬಾದ್ ನಲ್ಲಿ ನೂರಾರು ಭಕ್ತರ ಶಿವಲಿಂಗಕ್ಕೆ ಕ್ಷಿರಾಭಿಷೇಕ ಮಾಡಿದರು. ಸತ್ಯಮೇವ ಜಯತೆ.... ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗುರುವಾರ ಬಿಜೆಪಿ ಭ್ರಷ್ಟಾಚಾರ ಆರೋಪಗಳ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸತ್ಯಮೇವ ಜಯತೆ ಬೃಹತ್ ರ್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಗೂ ಇತರರು.ಸಿಲಿಕಾನ್ ಸಿಟಿಯಲ್ಲಿ ಶಿವನ ಪ್ರತಿಮೆ... ಬೆಂಗಳೂರಿನ ಸಿವಿ ರಾಮನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 51 ಅಡಿ ಎತ್ತರದ ಶಿವನ ಪ್ರತಿಮೆ ಸಿದ್ಧವಾಗಿದ್ದು, ಫೆ.24ರಂದು ಶಿವರಾತ್ರಿ ದಿನದಂದು ಅನಾವರಣಗೊಳ್ಳಲಿದೆ. ಹಕ್ಕು ಚಲಾಯಿಸಿದ ಸಚಿನ್ ದಂಪತಿ... ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಅವರು ಮಂಗಳವಾರ ನಡೆದ ಬೃಹತ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದರು.ಕ್ಯಾಚ್... ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಕೊಲ್ಕತಾದಲ್ಲಿ ನಡೆದ ಖೇಲ್ ಸಮ್ಮಾನ್ 2016-17ರ ಕಾರ್ಯಕ್ರಮದಲ್ಲಿ ಬಾಲ್ ಎಸೆದಿದ್ದು ಹೀಗೆ.ಪಟಿಯಾಲ ಬಾಲೆಯರ ಸೆಲ್ಫಿ... ಪಟಿಯಾಲ ಸರ್ಕಾರಿ ವೈದ್ಯಕೀಯ ಕಾಲೇಜ್ ನ ವಿದ್ಯಾರ್ಥಿನಿಯರು ಶನಿವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಗ್ರೂಪ್ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.ಮುಗುಳುನಗೆ... ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಶುಕ್ರವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕ ಗಾಂಧಿ ಪರಸ್ಪರ ಸ್ಮೈಲ್ ಮಾಡಿದ್ದು ಹೀಗೆ.ಸ್ಮೈಲ್ ಪ್ಲೀಸ್... ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಹಿಮದ ರಾಶಿಯ ಮದ್ಯ ದಂಪತಿಗಳು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಹೀಗೆ.ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಅವರಿಂದ ಅಂತಿಮ ನಮನ...ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ಹುತಾತ್ಮರಾದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಎಎಫ್ಎಸ್ ಪಾಲಂನಲ್ಲಿ ಅಂತಿಮ ನಮನ ಸಲ್ಲಿಸಿದರು.ಜಯಾ ಸಮಾಧಿ ಮೇಲೆ ಶಶಿಕಲಾ ಶಪಥ... ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಬುಧವಾರ ಬೆಳಗ್ಗೆ ಬೆಂಗಳೂರಿಗೆ ಬರುವ ಮುನ್ನ ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ಸಮಾಧಿ ಮೇಲೆ ಶಪಥಗೈಯುತ್ತಿರುವುದು.ಹ್ಯಾಪಿ ವ್ಯಾಲೆಂಟೆನ್ಸ್ ಡೇ... ಪ್ರೇಮಿಗಳ ದಿನದ ಅಂಗವಾಗಿ ಮಂಗಳವಾರ ಸೂರತ್ ನಲ್ಲಿ ಹುಡುಗರು ಹುಡುಗಿಯರಿಗೆ ರೋಸ್ ನೀಡಿ ವ್ಯಾಲೆಂಟೆನ್ಸ್ ಡೇ ಶುಭಾಶಯ ಕೋರಿದರು.ಕಿರಣ್ ಬೇಡಿ ಸೈಕಲ್ ಸವಾರಿ... ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಭಾನುವಾರ ಪುದುಚೇರಿಯ ಗ್ರಾಮವೊಂದಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು.ಜಂಟಿ ನಮಸ್ಕಾರ.... ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಲಖನೌನಲ್ಲಿ ಶನಿವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರಿಗೆ ನಮಸ್ಕರಿಸಿದ್ದು ಹೀಗೆ.ಯು-17 ಫಿಫಾ ವಿಶ್ವಕಪ್ 2017 ಲೋಗೋ... ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಹಾಗೂ ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಪ್ರಫುಲ್ ಪಟೇಲ್ ಅವರು ಶುಕ್ರವಾರ ದೆಹಲಿಯಲ್ಲಿ ಯು-17 ಫಿಫಾ ವಿಶ್ವಕಪ್ 2017ರ ಲೋಗೋ ಬಿಡುಗಡೆ ಮಾಡಿದರು.ಕಾಶ್ಮೀರ ಕಲಾವಿದರು... ಫರಿದಾಬಾದ್ ನಲ್ಲಿ ನಡೆಯುತ್ತಿರುವ ಸುರಜ್ ಕುಂಡ್ ಕರಕುಶಲ ಮೇಳದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಲಾವಿದರು ಪೋಸ್ ನೀಡಿದ್ದು ಹೀಗೆ.ಯುಟಿಲಿಟಿ ಕಟ್ಟಡದ ಮೇಲೆ ರಾಜ್ಯದ ಸಂಸ್ಕೃತಿ ಅನಾವರಣ... ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಎಂಜಿ ರಸ್ತೆಯಲ್ಲಿರುವ ಯುಟಿಲಿಟಿ ಕಟ್ಟಡದ ಮೇಲೆ ತ್ರಿಡಿ ಲೈಟಿಂಗ್ ಪ್ರದರ್ಶನ ನಡೆಯಿತು. ರಾಜ್ಯದ ಕಲೆ, ಸಾಹಿತ್ಯ ಹಾಗೂ ಸಿನೆಮಾಗಳ ಸಾಧನೆಗಳನ್ನು ಇಲ್ಲಿ ಬೆಳಕಿನ ಮೂಲಕ ಪ್ರದರ್ಶಕಲಾ ಕಾರು... ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಭಾನುವಾರ ಚಂಡಿಗಢದಲ್ಲಿ ಬಿಎಂಡಬ್ಲ್ಯೂ ನ ಹೊಸ ಕಾರು ಆರ್ಟ್ ಕಾರ್ ನೊಂದಿಗೆ ಪೋಸ್ ನೀಡಿದ್ದು ಹೀಗೆ.ಇದು ಕುಂಗ್ ಫು ಯೋಗ... ದೆಹಲಿಯಲ್ಲಿ ಬುಧವಾರ ನಡೆದ ಕುಂಗ್ ಫು ಯೋಗ ಚಿತ್ರದ ಪ್ರಚಾರಾರ್ಥ ಕಾರ್ಯಕ್ರಮದಲ್ಲಿ ನಟಿ ಅಮ್ರ ದಸ್ತೂರ್ ಹಾಗೂ ಸೋನು ಸೂದ್. ದೆಹಲಿಯಲ್ಲಿ ಬುಧವಾರ ನಡೆದ ಕುಂಗ್ ಫು ಯೋಗ ಚಿತ್ರದ ಪ್ರಚಾರಾರ್ಥ ಕಾರ್ಯಕ್ರಮದಲ್ಲಿ ನಟಿ ಅಮ್ರ ದಸ್ತೂರ್ ಹಾಗೂ ಸೋನು ಸೂದ್. Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics