ಕರಾಟೆ ಪಟುಗಳ ಸೆಲ್ಫಿ ಸಂಭ್ರಮ... ಕೊಲ್ಕತಾದಲ್ಲಿ ನಡೆಯುತ್ತಿರುವ ಮೂರನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ ಇರಾನ್ ಕರಾಟೆ ಪಟುಗಳು ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಹುಲಿ ಉಳಿಸಿ... ಅಂತರಾಷ್ಟ್ರೀಯ ಹುಲಿ ಸಂರಕ್ಷಣಾ ದಿನದ ಅಂಗವಾಗಿ ಶನಿವಾರ ಮಥುರಾದಲ್ಲಿ ವಿದ್ಯಾರ್ಥಿನಿಯರು ಹುಲಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದ್ದು ಹೀಗೆ.ನಾಗರ ಪಂಚಮಿಯ ಸಂಭ್ರಮ... ಧಾರವಾಡದಲ್ಲಿ ಬುಧವಾರ ಮಹಿಳೆಯರು ಮತ್ತು ಮಕ್ಕಳು ಉತ್ತರ ಕರ್ನಾಟಕದ ಮಹತ್ವ ಹಬ್ಬ ನಾಗರ ಪಂಚಮಿಯನ್ನು ಆಚರಿಸಿದ್ದು ಹೀಗೆ.ಮಹಾತ್ಮನಿಗೆ ಪುಷ್ಪ ನಮನ... ನಿಯೋಜಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ರಾಜ್ ಘಾಟ್ ಗೆ ತೆರಳಿ ಮಹಾತ್ಮಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.ಸಾಮೂಹಿಕ ಸೀಮಂತ.... ಬೆಳಗಾವಿ ಜಿಲ್ಲಾ ಪರಿಷತ್ ಸ್ವಚ್ಛ ಭಾರತ ಮಿಷನ್ ಅಂಗವಾಗಿ ಜುಲೈ ತಿಂಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗಾಗಿ ಶನಿವಾರ ಸೀಮಂತ ಕಾರ್ಯಕ್ರಮ ಆಯೋಜಿಸಿತ್ತು.ಗಮನ ಸೆಳೆದ ಸೇನಾ ಟ್ಯಾಂಕರ್ ರಥ... ಚಿಕ್ಕಬಳ್ಳಾಪುರದ ಸರ್ಕಲ್ ಮಾರಮ್ಮ ಜಾತ್ರೆ ಉತ್ಸವದಲ್ಲಿ ಸೇನಾ ಟ್ಯಾಂಕರ್ ಮಾದರಿಯ ರಥ ಜನರ ಗಮನ ಸೆಳೆಯಿತು.ಬಲ್ಬ್ ನಲ್ಲಿ ನೂತನ ರಾಷ್ಟ್ರಪತಿ... ಅಮೃತಸರದ ಕಲಾವಿದ ಜಗ್ಮೋಹನ್ ಕನೋಜಿಯಾ ಅವರು ಭಾರತದ 14ನೇ ರಾಷ್ಟ್ರಪತಿಯಾಗಿ ಗುರವಾರ ಆಯ್ಕೆಯಾದ ರಾಮನಾಥ್ ಕೋವಿಂದ್ ಅವರ ಫೋಟೋ ಇರುವ ವಿದ್ಯುತ್ ಬಲ್ಬ್ ಅನ್ನು ಪ್ರದರ್ಶಿಸಿದ್ದು ಹೀಗೆ.ತಾತಾ ಆರ್ಶೀವಾದ ಮಾಡು... ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲ್ ಕೃಷ್ಣ ಗಾಂಧಿ ಅವರು ಮಂಗಳವಾರ ಉಪ ರಾಷ್ಟ್ರಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸಂಸತ್ ಭವನದ ಬಳಿ ಇರುವ ತಮ್ಮ ತಾತಾನ ಪ್ರತಿಮೆಗೆ ನಮಸ್ಕರಿಸಿದ್ದು ಹೀಗೆ.ಹಕ್ಕು ಚಲಾಯಿಸಿದ ನಾಯಕರು... ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಮತ ಹಾಕಿದರು. ಜಿಮ್ನಾಸ್ಟಿಕ್ ತಾರೆಯರು... 14ನೇ ಏರೋಬಿಕ್ ಜಿಮ್ನಾಸ್ಟಿಕ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿದ್ದು ಹೀಗೆ.ಸೆಲ್ಫಿ ಸಂಭ್ರಮ... ಮುಂಬೈನಲ್ಲಿ ಶುಕ್ರವಾರ ನಡೆದ ವರ್ಷದ ಕ್ರೀಡಾ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಬ್ಯಾಡ್ ಮಿಂಟನ್ ಆಟಗಾರ್ತಿಯರಾದ ಪಿ.ವಿ.ಸಿಂಧು, ಜ್ವಾಲಾ ಗುಟ್ಟಾ ಹಾಗೂ ಕ್ರಿಕೆಟಿಗ ಪ್ರಗ್ಯಾನ್ ಓಜಾ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.ಐಐಎಸ್ ಸಿ ಬೆಂಗಳೂರಿನಲ್ಲಿ ರಾಷ್ಟ್ರಪತಿ.... ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ ನಡೆದ ವಾರ್ಷಿಕ ಘಟಿಕೋತ್ಸವದ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ಅವರ ಗ್ರೂಪ್ ಫೋಟೋ.ಕಲಾವಿದರ ನೃತ್ಯ ಪ್ರದರ್ಶನ... ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಕಾನ್ಫೆಡರೇಷನ್ ಕಪ್ ಸಮಾರೋಪ ಸಮಾರಂಭದಲ್ಲಿ ಕಲಾವಿದರು ನೃತ್ಯ ಪ್ರದರ್ಶನ ಮಾಡಿದ್ದು ಹೀಗೆ.ಶ್ವೇತಾ ಶ್ರೀವಾತ್ಸವ್ ಬೇಬಿ ಬಂಪ್... ನಟಿ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಹೊಟ್ಟೆಯ ಮೇಲೆ ಮಗುವಿನ ಚಿತ್ರವನ್ನು ಹಾಕಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದು, ಆ ಫೋಟೋ ಈಗ ವೈರಲ್ ಆಗಿದೆ. 3ಡಿ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಶ್ವೇತಾ ಶ್ರೀವಾತ್ಸವ್ ಹೊಟ್ಟೆಯಲ್ಲಿ ಮಲಗಿರುವ ಮಗುವಿನ ಚಿತ್ರವನ್ನು ಸುರಾಷ್ಟ್ರಪತಿ ಅಭ್ಯರ್ಥಿಗೆ ಸಿಎಂ ಸನ್ಮಾನ... ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಬೆಂಗಳೂರಿಗೆ ಆಗಮಿಸಿದ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಪೇಠ ತೊಡಿಸಿ ಸನ್ಮಾನಿಸಿದರು.ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ಪುರಿ ಬೀಚ್ ನಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಜಿಎಸ್ ಟಿಯನ್ನು ಸ್ವಾಗತಿಸಿದ್ದು ಹೀಗೆ.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics