60ನೇ ಅರ್ಥ್ ಅವರ್... 60ನೇ ಅರ್ಥ್ ಅವರ್ ಡೇ ಪ್ರಯುಕ್ತ ಶನಿವಾರ ಮುರದಾಬಾದ್ ಯುವತಿಯರು ಮುಖಕ್ಕೆ ಪೇಂಟ್ ಮಾಡಿಕೊಂಡು ಪೋಸ್ ಕೊಟ್ಟಿದ್ದು ಹೀಗೆ.
ವಿಮಾನ ನಿಲ್ದಾಣದಲ್ಲೇ ಸಂಧ್ಯಾವಂದನೆ...ಕರ್ನಾಟಕದ ಹುಬ್ಬಳ್ಳಿಯ ಶ್ರೀನಿವಾಸ್ ಆಚಾರ್ ಲಖನೌ ವಿಮಾನ ನಿಲ್ದಾಣದಲ್ಲಿ ಯಾವುದೇ ಮುಜುಗರವಿಲ್ಲದೆ ಸಂಧ್ಯಾವಂದನೆ ಪೂರೈಸಿ ನಿಲ್ದಾಣದಲ್ಲಿದ್ದ ನೂರಾರು ಜನರ ಅಚ್ಚರಿಗೆ ಕಾರಣರಾದರು.
ರಾಜಕುಮಾರನಿಗೆ ಅದ್ಧೂರಿ ಸ್ವಾಗತ... ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಪ್ರದರ್ಶನದ ವೇಳೆ ಅಭಿಮಾನಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದು ಹೀಗೆ.
Advertisement
Advertisement
ಛತ್ರಿ ಬೈಕ್... ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಮೈಸೂರಿನಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ಬೈಕ್ ಸವಾರ ನಂದೀಶ್ ಆರ್ ಜಿ ಎಂಬುವವರು ತಮ್ಮ ಬೈಕ್ ಗೆ ಕೊಡೆ ಅಳವಡಿಸಿಕೊಂಡು ಬುಧವಾರ ಸವಾರಿ ಮಾಡಿದ್ದು ಹೀಗೆ.
ಗೆಲುವಿನ ಸಿಹಿ... ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಉಭಯ ನಾಯಕರು ಪರಸ್ಪರ ಗೆಲುವಿನ ಸಿಹಿ ಹಂಚಿಕೊಂಡಿದ್ದು ಹೀಗೆ.
ಐಪಿಎಲ್ ಟ್ರೋಫಿಯೊಂದಿಗೆ ಅಭಿಮಾನಿಗಳು... ಮುಂದಿನ ತಿಂಗಳು ಆರಂಭವಾಗಲಿರುವ ವೀವಾ ಐಪಿಎಲ್ ಹತ್ತನೇ ಆವೃತ್ತಿಯ ಟ್ರೋಫಿಯನ್ನು ಸೋಮವಾರ ಪಾಟ್ನಾದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಕ್ರಿಕೆಟ್ ಪ್ರೇಮಿಗಳು ಟ್ರೋಫಿ ಜೊತೆ ಪೋಸ್ ಕೊಟ್ಟಿದ್ದು ಹೀಗೆ.
ತಾಜ್ ಮಹಲ್ ಭದ್ರತೆ ಹೆಚ್ಚಳ.... ಆಗ್ರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಅವಳಿ ಬಾಂಬ್ ಸ್ಫೋಟಗೊಂಡ ನಂತರ ವಿಶ್ವವಿಖ್ಯಾತ ತಾಜ್ ಮಹಲ್ ಭದ್ರತೆ ಹೆಚ್ಚಿಸಲಾಗಿದ್ದು, ಪ್ರೇಮಸೌಧ ಕಾಯುತ್ತಿರುವ ಭದ್ರತಾ ಸಿಬ್ಬಂದಿ ಶನಿವಾರ ಕಾಣಿಸಿದ್ದು ಹೀಗೆ.
ಅಮ್ಮನಿಗೆ ಬಜೆಟ್ ಅರ್ಪಣೆ... ತಮಿಳುನಾಡು ಹಣಕಾಸು ಸಚಿವ ಡಿ ಜಯಕುಮಾರ್ ಅವರು ಗುರುವಾರ ತಮ್ಮ ಮೊದಲ ಬಜೆಟ್ ಮಂಡಿಸುವ ಮುನ್ನ ಚೆನ್ನೈನ ಮರೀನಾ ಬೀಚ್ ನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ಆರ್ಶೀವಾದ ಪಡೆದರು.
ಜಂತರ್ ಮಂತರ್ ನಲ್ಲಿ ಮರ ಏರಿದ ರೈತ.... ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿನ ರೈತನೊಬ್ಬ ಬುಧವಾರ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ. ಪೊಲೀಸರು ಆತನ ಮನವೊಲಿಸಿ ಕೆಳಗಿಳಿಸಿದ್ದಾರೆ.
ಬಣ್ಣದ ಸೆಲ್ಫಿ... ಕೋಲ್ಕತಾ ವಿದ್ಯಾರ್ಥಿನಿಯರು ಭಾನುವಾರ ಬಸಂತ್ ಉತ್ಸವ ವೇಳೆ ಹೋಳಿ ಆಚರಿಸಿದ್ದು ಹೀಗೆ.
ಮೋದಿ ಪಿಚಕಾರಿ... ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಗುವಾಹತಿಯಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಪಿಚಕಾರಿ ವಾಟರ್ ಗನ್ ಗಳನ್ನು ಮಾರಾಟ ಮಾಡುವ ದೃಶ್ಯ ಕಂಡುಬಂದಿದ್ದು ಹೀಗೆ.
ಬಿಜೆಪಿ, ಆರ್ ಎಸ್ಎಸ್ ನಾಯಕರ ಹೋಳಿ ಸಂಭ್ರಮ... ಪಾಟ್ನಾದಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಬಿಜೆಪಿ ಹಾಗೂ ಆರ್ ಎಸ್ಎಸ್ ನಾಯಕರೊಂದಿಗೆ ಶುಕ್ರವಾರ ಹೋಳಿ ಆಚರಿಸಿದ್ದು ಹೀಗೆ.
ನಾರಿ ಶಕ್ತಿ ಪುರಸ್ಕಾರ.... ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬುಧವಾರ ರಾಷ್ಟ್ರಪತಿಭವನದಲ್ಲಿ ನಡೆದ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿ ಪ್ರದಾನದ ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಕೇಂದ್ರ ಸಚಿವೆ ಮನೇಕಾ ಗಾಂಧಿ.
ವಾರಣಾಸಿಯಲ್ಲಿ ಪ್ರಧಾನಿ ರೋಡ್ ಶೋ... ಉತ್ತರ ಪ್ರದೇಶ ವಿಧಾನಸಭೆ ಕೊನೆ ಹಂತದ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಕಾರ್ಯಕರ್ತರತ್ತ ಕೈ ಬೀಸಿದ್ದು ಹೀಗೆ.
ಪೆಟಾ ಸದಸ್ಯರ ವೆಜಿಟೆಬಲ್ ಬಿಕಿನಿ... ಹವಾನ ಕ್ಯುಬಾದಲ್ಲಿ ಪೆಟಾ ಸದಸ್ಯರಾದ ಕಿಯರಾ ಬೆನಕ್ ಹಾಗೂ ಯರಿಕಾ ಸೊಜೊ ಅವರು ಗುರುವಾರ ತರಕಾರಿ ಬಿಕಿನಿ ಧರಿಸಿ ರಸ್ತೆಯಲ್ಲಿ ವಾಕ್ ಮಾಡುವ ಮೂಲಕ ಸಸ್ಯಹಾರ ಜೀವನ ಶೈಲಿ ಕುರಿತು ಪ್ರಚಾರ ಮಾಡಿದರು.
ದೃಶ್ಯೋತ್ಸವ... ಫೈನ್ ಆರ್ಟ್ಸ್ ಕಾಲೇಜ್ ವಿದ್ಯಾರ್ಥಿಗಳು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿದ್ದ ದೃಶ್ಯೋತ್ಸವ ವಾರ್ಷಿಕ ಪ್ರದರ್ಶನದಲ್ಲಿ ಕಲಾಕೃತಿಯೊಂದು ವೀಕ್ಷಕರ ಗಮನ ಸೆಳೆಯಿತು.
ಹುಟ್ಟು ಹಬ್ಬಕ್ಕೆ ನೋಟಿನ್ ಹಾರ... ಬುಧವಾರ ಚೆನ್ನೈನಲ್ಲಿ 65ನೇ ಹುಟ್ಟು ಹಬ್ಬ ಆಚರಿಸಿಕೊಂಡ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರಿಗೆ ಪಕ್ಷದ ಕಾರ್ಯಕರ್ತರು ಹೊಸ 500 ರುಪಾಯಿಯ ನೋಟಿನ ಹಾರ ಹಾಕಿ, ಶುಭಾಶಯ ಕೋರಿದರು.
ಬುಧವಾರ ಚೆನ್ನೈನಲ್ಲಿ ತಮ್ಮ 65ನೇ ಹುಟ್ಟು ಹಬ್ಬ ಆಚರಿಸಿಕೊಂಡ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರಿಗೆ ಅವರ ಸಹೋದರಿ ಹಾಗೂ ಸಂಸದೆ ಕನಿಮೋಳಿ ಅವರು ಶುಭಾಶಯ ಕೋರಿದರು.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.