1982ರಲ್ಲಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಯ ಶಿಕ್ಷಣ ಮುಗಿಸಿದ್ದ ಕಲ್ಪನಾ ಚಾವ್ಲಾ.
ಅಮೆರಿಕನ್ನೊಬ್ಬರನ್ನು ವಿವಾಹವಾಗಿದ್ದ ಕಲ್ಪನಾ ಚಾವ್ಲಾ ಅವರು 1991ರಲ್ಲಿ ನಾಸಾ ಸಂಸ್ಥೆಗೆ ಅರ್ಜಿ ಹಾಕಿದ್ದರು. 1997 ನವೆಂಬರ್ 19ರಂದು ಕಲ್ಪನಾ ಚಾವ್ಲಾ ಅವರು ತಮ್ಮ ಮೊದಲ ಬಾಹ್ಯಾಕಾಶಯಾನ ಪ್ರಾರಂಭಿಸಿದರು. 2000ರಲ್ಲಿ ಕಲ್ಪನಾ ಚಾವ್ಲಾ ಅವರು ಎರಡನೇ ಬಾರಿಗೆ ಬಾಹ್ಯಾಕಾಶ ಯಾನ ಪ್ರಾರಂಭಿಸಿದರು. 2003ರಲ್ಲಿ ಈ ಯಾನ ಅಂತ್ಯವಾಯಿತು. 2003ರ ಫೆಬ್ರವರಿ 1ರಂದು ತೆಗೆದಂತಾ ಚಿತ್ರ. ಇದರಲ್ಲಿ ಕಲ್ಪನಾ ಚಾವ್ಲಾ ಅವರು ಕೆಲವೊಂದು ಟಿಪ್ಪಣಿಗಳನ್ನು ಮಾಡುತ್ತಿರುವ ದೃಶ್ಯ. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು 80 ಸಂಶೋಧನೆಗಳಲ್ಲಿ ಕಲ್ಪನಾ ನಿರತರಾಗಿದ್ದರು. ಎರಡು ಬಾಹ್ಯಾಕಾಶ ಯಾನದಲ್ಲಿ ಕಲ್ಪನಾ ಅವರು ಸುಮಾರು 30 ದಿನ 14 ಗಂಟೆ 54 ನಿಮಿಷ ಆಕಾಶದಲ್ಲಿ ಕಳೆದಿದ್ದಾರೆ. ಕಲ್ಪನಾ ಚಾವ್ಲಾ ಜತೆ ಬಾಹ್ಯಾಕಾಶಯಾನ ಕೈಗೊಂಡಿದ್ದು ವಾಪಸಾಗುತ್ತಿದ್ದ ವೇಳೆ ಸ್ಫೋಟಗೊಂಡು ಮೃತಪಟ್ಟ ಇತರ ಸಹಪಾಠಿಗಳು. ಕಲ್ಪನಾ ಚಾವ್ಲಾ ಬಾಹ್ಯಾಕಾಶ ಯಾನ ಕೈಗೊಂಡ ಭಾರತದ ಮೊದಲ ಮಹಿಳೆಯಾಗಿದ್ದಾರೆ.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics