ಮೋದಿ ಸ್ವಾಗತಕ್ಕೆ ಸಿದ್ಧಗೊಂಡ ಧರ್ಮಸ್ಥಳ... ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಪ್ರಧಾನಿ ಸ್ವಾಗತಕ್ಕಾಗಿ ಶ್ರೀ ಕ್ಷೇತ್ರವನ್ನು ಸಿಂಗರಿಸಲಾಗಿದೆ.
ಕಿತ್ತೂರಿನ ಕಲಿಗಳು... ಬೆಳಗಾವಿಯ ಕಿತ್ತೂರು ಉತ್ಸವದಲ್ಲಿ ಬುಧವಾರ ನಡೆದ ಕುಸ್ತಿ ಕಾಳಗ ಜನರ ಗಮನ ಸಳೆಯಿತು.
ಹುತಾತ್ಮ ಪೊಲೀಸರಿಗೆ ಗೌರವ... ಬೆಂಗಳೂರಿನ ಕೋರಮಂಗಲ ಕೆಎಸ್ಆರ್ ಪಿ ಮೈದಾನದಲ್ಲಿ ರಾಜ್ಯ ಗೃಹ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು.
Advertisement
Advertisement
ನ್ಯೂಜೆರ್ಸಿ ರಸ್ತೆಯಲ್ಲಿ ದೀಪಾವಳಿ ಸಂಭ್ರಮ.... ಅಮೆರಿಕದ ನ್ಯೂಜರ್ಸಿಯ ನೆವಾರ್ಕ್ ಅವೆ ರಸ್ತೆಯಲ್ಲಿ ಭಾರತೀಯರು ಗುರುವಾರ ದೀಪಾವಳಿ ಆಚರಿಸಿದ್ದು ಹೀಗೆ.
ದೀಪಾವಳಿ ಹಬ್ಬದ ಶುಭಾಶಯ... ಮೊರದಾಬಾದ್ ನ ಶಾಲೆಯೊಂದರಲ್ಲಿ ಶಿಕ್ಷಕಿಯರು ಮಂಗಳವಾರ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ಕೋರಿದ್ದು ಹೀಗೆ.
ಅಕ್ಕಿಗೆ ಡಿಶುಂ ಡಿಶುಂ... ಮುಂಬೈನಲ್ಲಿ ಶನಿವಾರ ನಡೆದ ಕುಡೊ ಪಂದ್ಯಾವಳಿ ವೇಳೆ ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಕತ್ರಿನಾ ಕೈಫ್ ಹಾಗೂ ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರು ಪೋಸ್ ಕೊಟ್ಟಿದ್ದು ಹೀಗೆ.
ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ... ಮೈಸೂರಿನಲ್ಲಿ ಗುರುವಾರ ಸಚಿವ ಎಚ್ ಸಿ ಮಹದೇವಪ್ಪ ಅವರು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದರು.
ಹಿಮ ಸುಂದರಿ... ಧರಮಸಾಲದಲ್ಲಿ ಭಾನುವಾರ ರಾತ್ರಿ ಮಿಸ್ ಹಿಮಾಲಯ 2017 ಸ್ಪರ್ಧೆಯ ವಿನ್ನರ್ ಪ್ರೆಕ್ಷಾ ರಾಣಾ ಅವರಿಗೆ ಮಾಜಿ ಹಿಮಾಲಯ ಸುಂದರಿ ಆಯುಶಿ ಸೇಠಿ ಅವರು ಕಿರಿಟ ತೊಡಿಸಿದರು.
ಗಮನ ಸೆಳೆದ ತರಕಾರಿ ಅಲಂಕಾರ... ನವರಾತ್ರಿಯ ಕೊನೆಯ ಪೂಜೆಯ ಅಂಗವಾಗಿ ಶುಕ್ರವಾರ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ಮರಿಯಮ್ಮ ದೇವಸ್ಥಾನದ ತರಕಾರಿ ಅಲಂಕಾರ ಭಕ್ತರ ಗಮನ ಸೆಳೆಯಿತು.
ನೀವು ನಕ್ಕರೆ ಬಿಜೆಪಿಗೆ ಸಕ್ಕರೆ... ಬಾಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಶುಕ್ರವಾರ ನಡೆದ ನೇಕಾರರ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ ಎಸ್ ಈಶ್ವರಪ್ಪ ಅವರು ಹಳೆ ಮುನಿಸು ಮರೆತು ಪರಸ್ಪರ ನಗು ಚೆಲ್ಲಿದ್ದು ಹೀಗೆ.<br
ಮೌನ ಮಾತಾಡಿದಾಗ.... ಬೆಂಗಳೂರಿನಲ್ಲಿ ಗುರುವಾರ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಶೈಕ್ಷಣಿಕ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದು ಹೀಗೆ.
ಕೆಆರ್ ಎಸ್ ನ ವೈಮಾನಿಕ ನೋಟ... ಮಂಡ್ಯ ಜಿಲ್ಲೆಯ ಕೆಆರ್ಎಸ್ ಡ್ಯಾಂ ಮತ್ತು ಬೃಂದಾವನ ಗಾರ್ಡನ್ ನ ವೈಮಾನಿಕ ನೋಟ.
ಮರಳಿ ಕಾಡಿಗೆ... ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದ ಆನೆಗಳು ಮಂಗಳವಾರ ಲಾರಿಯಲ್ಲಿ ಅರಮನೆ ಆವರಣದಿಂದ ಕಾಡಿಗೆ ತೆರಳಿದವು. ಈ ವೇಳೆ ವಿದೇಶಿ ಪ್ರವಾಸಿಗರು ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಮಹಾತ್ಮನಿಗೆ ಪುಷ್ಪ ನಮನ... ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯ ರಾಜಘಾಟ್ ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಗಾಂಧಿ ಜಯಂತಿ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಸೋಮವಾರ ದೆಹಲಿಯ ರಾಜಘಾಟ್ ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಗಾಂಧಿ ಜಯಂತಿ ಅಂಗವಾಗಿ ಸೋಮವಾರ ಅಲಹಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿದ್ದ ಮಹಾತ್ಮ ಗಾಂಧಿಯ ಮರಳು ಕಲಾಕೃತಿಗೆ ಸಾಧುಗಳು ಗೌರವ ಸಲ್ಲಿಸಿದರು.