26 ಅಡಿ ಉದ್ದದ ಮೀಸೆ ಮಾವ...... ಬಿಕಾನೆರದಲ್ಲಿ ವಿಶ್ವದಲ್ಲಿಯೇ ಅತಿ ಉದ್ದ(26 ಅಡಿ)ದ ಮೀಸೆ ಹೊಂದಿರುವ ಗಿರಿಧರ್ ವ್ಯಾಸ್ ಅವರು ಶನಿವಾರ ಪೋಸ್ ಕೊಟ್ಟಿದ್ದು ಹೀಗೆ.
ಪ್ರಧಾನಿಗೆ ನಮಸ್ಕಾರ...
ದೆಹಲಿಯಲ್ಲಿ ಇಂದು ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ 100 ರೂ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ಭೀಷ್ಮ ಎಲ್ ಕೆ ಅಡ್ವಾಣಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉಭಯ ಕುಶಲೋಪರಿ ವಿಚಾರಿಸಿದರು.
ಚಿತ್ರಕೃಪೆ: ಶೇಖರ್ ಯಾದವ್ (ದಿ ನ್ಯೂ ಇಡಿಕೆಶಿ ಕಾಲಿಗೆ ಬಿದ್ದ ನೂತನ ಸಚಿವ..... ಶನಿವಾರ ರಾಜಭವನದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರು ಸಚಿವ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು.ಹುಲಿಯ ಚಿನ್ನಾಟ.... ಇಂಧೋರ್ ನ ಮೃಗಾಲಯದಲ್ಲಿ ಬುಧವಾರ ಹೆಣ್ಣು ಹುಲಿಯೊಂದು ತನ್ನ ಎರಡು ನವಜಾತ ಮರಿಗಳ ಜತೆ ಕಾಣಿಸಿಕೊಂಡಿದ್ದು ಹೀಗೆ.ವೈಕುಂಠ ಏಕಾದಶಿ ಸಂಭ್ರಮ.... ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರಿನ ಇಸ್ಕಾನ್ ನಲ್ಲಿ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ದ್ವಾರದ ಬಾಗಿಲು ತೆರೆದು ದರ್ಶನಕ್ಕೆ ಅನುವು ಮಾಡಕೊಡಲಾಯಿತು. ದೇಶ-ವಿದೇಶದಿಂದ ಇಸ್ಕಾನ್ ದೇವಾಲಯಕ್ಕೆ ಭಕ್ತರು ಆಗಮಿಸಿದ್ದರು.ಸೌಂದರ್ಯ ಸೌಧ.... ಪ್ರೇಮ ಸೌಧ ತಾಜ್ ಮಹಲ್ ಮುಂದೆ 12 ದೇಶಗಳ ಅಂತರಾಷ್ಚ್ರೀಯ ಮಾಡೆಲ್ ಗಳು ಶನಿವಾರ ಪೋಸ್ ಕೊಟ್ಟಿದ್ದು ಹೀಗೆ.ಪ್ಲೇ ಆಫ್ ಲೈಟ್ಸ್ ಇನ್ ಡಾರ್ಕ್ ನೆಸ್..... ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಸೋಮವಾರ ಪ್ಲೇ ಆಫ್ ಲೈಟ್ಸ್ ಇನ್ ಡಾರ್ಕ್ ನೆಸ್ ಅಟ್ ಕೆ ಆರ್ ಮಾರ್ಕೆಟ್ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು.ಸಾಹಸಿ ಮಕ್ಕಳಿಗೆ ಶೌರ್ಯ ಪ್ರಶಸ್ತಿ.... ಬೆಂಗಳೂರಿನ ಬಾಲಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಲಾ ಅವರು ಸಾಹಸಿ ಮಕ್ಕಳಿಗೆ ಹೋಯ್ಸಳ ಹಾಗೂ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದರು.ಅಂಬೇಡ್ಕರ್ ಮಹಾಪರಿ ನಿರ್ವಾಣ ದಿನ: ಚಿಕ್ಕದೇವಸಂದ್ರ ಗ್ರಾಮದಲ್ಲಿ ಡಾ| ಬಿ ಆರ್. ಅಂಬೇಡ್ಕರ್ ಅವರ ಮಹಾಪರಿ ನಿರ್ವಾಣ ದಿನವನ್ನು ದಲಿತ ಸಂಘಟನೆ ಆಚರಿಸಿತು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.ಕ್ರಿಸ್ಮಸ್ ಸಡಗರ ಆರಂಭ.... ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ ಆರಂಭವಾಗಿದ್ದು, ನಗರದ ಹೋಟೆಲ್ ವೊಂದರಲ್ಲಿ ಕ್ರಿಸ್ಮಸ್ ಅಲಂಕಾರ ಜನರ ಗಮನ ಸೆಳೆಯಿತು.ವಾಟಾಳ್ ಮೇಕೆ ಪ್ರತಿಭಟನೆ.... ಮೇಕೆದಾಟು ಯೋಜನೆ ವಿಳಂಬ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಅವರು ಸೋಮವಾರ ಬೆಂಗಳೂರಿನಲ್ಲಿ ಮೇಕೆಗಳೊಂದಿಗೆ ಪ್ರತಿಭಟನೆ ನಡೆಸಿದರು.ಕಡಲೆಕಾಯಿ ಪರಿಷೆ..... ಬೆಂಗಳೂರಿನ ಬಸವನಗುಡಿಯಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಸೋಮವಾರ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದರು.ಕಡಲೆಕಾಯಿ ಪರಿಷೆ..... ಬೆಂಗಳೂರಿನ ಬಸವನಗುಡಿಯಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಸೋಮವಾರ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದರು.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics