ಈಗಾಗಲೇ ದೆಹಲಿಯಲ್ಲಿ ಚಾಲ್ತಿಯಲ್ಲಿರುವ ಈ ಹಸಿರು ಪಟಾಕಿ ಬಳಕೆ ಬಗ್ಗೆ ಬಹುತೇಕರಿಗೆ ಅರಿವಿಲ್ಲ. ಅಲ್ಲದೇ ಈ ಹಸಿರು ಪಟಾಕಿ ಮಾರಾಟದ ಬಗ್ಗೆ ಈ ಹಿಂದೆಯೇ ವರ್ತಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು. ಪಟಾಕಿಯಂತೆಯೇ ಕಾಣುವ ಇದು ಪರಿಸರ ಸ್ನೇಹಿಯಾಗಿದೆ. 
ದೇಶ

ಏನಿದು ಹಸಿರು ಪಟಾಕಿ..? ನಿಜಕ್ಕೂ ಇದು ಮಾಲಿನ್ಯ ರಹಿತವೇ? ಇಲ್ಲಿದೆ ಮಾಹಿತಿ!

ಶ್ವಾಸಕೋಶ ಮತ್ತು ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರುವ ಕೊರೋನಾ ವೈರಸ್ ಸೋಂಕಿಗೆ ತುತ್ತಾದವರನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಆರೋಗ್ಯ ಇಲಾಖೆ ಹಸಿರು ಪಟಾಕಿ ಬಳಕೆಗೆ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಕೂಡ ಸಾಮಾನ್ಯ ಪಟಾಕಿ ನಿಷೇಧ  ಮಾಡಿ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಿದೆ. ಇಷ್ಟಕ್ಕೂ ಏನಿದು ಹಸಿರು ಪಟಾಕಿ..?

ಹೆಚ್ಚು ಮಾಲಿನ್ಯವಲ್ಲದ ಈ ಪಟಾಕಿ ಕೇವಲ ಶೇ30ರಷ್ಟು ಪ್ರಮಾಣದ ಹೊಗೆಯನ್ನು ಹೊರಹಾಕುತ್ತದೆ. ಕೌನ್ಸಿಲ್​ ಆಫ್ ಸೈಂಟಿಫಿಕ್​ ಅಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ (ಸಿಎಸ್​ಐಆರ್​) ಪ್ರಯೋಗಾಲಯದ ಮೂಲಕ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನು ಕಳೆದ ವರ್ಷ ಈ ಪಟಾಕಿಯನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ​ದೆಹಲಿ
ಹಸಿರು ಪಟಾಕಿ ಎಂದರೇನು? ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುವ, ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ಹೊರಚೆಲ್ಲುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಪರಿಗಣಿಸಲಾಗುತ್ತದೆ.
ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಅಭಿವೃದ್ಧಿಪಡಿಸಿದ ಹಸಿರು ಪಟಾಕಿಗಳು ಮಾಲಿನ್ಯಕಾರಕಗಳನ್ನು ತಮ್ಮ ಸಾಂಪ್ರದಾಯಿಕ ಪ್ರತಿರೂಪಗಳಿಗಿಂತ ಶೇ.30ರಷ್ಟು ಕಡಿಮೆ ಪ್ರಮಾಣದಲ್ಲಿ ಹೊರಸೂಸುತ್ತದೆ.
ಕಡಿಮೆ ಅಪಾಯಕಾರಿ ಮತ್ತು ಹೆಚ್ಚು ಹಾನಿಕಾರಕವಲ್ಲದ ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ಇನ್ನು ಈ ಹಸಿರು ಪಟಾಕಿಯನ್ನು ಪತ್ತೆಗಾಗಿ ಹಸಿರು ಲೋಗೊ ಮತ್ತು ಕ್ಯೂಆರ್​ ಕೋಡಿಂಗ್​ ವ್ಯವಸ್ಥೆಯನ್ನು ಮಾಡಲಾಗಿದೆ.
ಸಾಮಾನ್ಯ ಪಟಾಕಿಗಳನ್ನು ನೈಟ್ರೇಟ್​ ಮತ್ತು ಬೇರಿಯಂಗಳು ಕಂಡು ಬರುತ್ತವೆ. ಈ ರಾಸಾಯನಿಕಗಳು ಹಸಿರು ಪಟಾಕಿಗಳಲ್ಲಿ ಇರುವುದಿಲ್ಲ. ಈ ಹಸಿರು ಪಟಾಕಿಗಳು ಸ್ಪೋಟಿಸಿದಾಗ ನೀರಿನ ಆವಿ ಮತ್ತು ಹೊಗೆ ಹೊರ ಹಾಕುವುದನ್ನು ದುರ್ಬಲಗೊಳಿಸುತ್ತದೆ. ಇದರಲ್ಲಿ ಸುರಕ್ಷಿತ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ. ​
ಸಾಮಾನ್ಯ ಪಟಾಕಿಗಳು ಸುಮಾರು 160 ಡೆಸಿಬೆಲ್ ಧ್ವನಿಯನ್ನು ಹೊರಸೂಸಿದರೆ, ಹಸಿರು ಪಟಾಕಿಗಳು ಹೊರಸೂಸುವಿಕೆಯ ಧ್ವನಿ ಪ್ರಮಾಣ 110-125 ಡೆಸಿಬಲ್‌ಗಳಿಗೆ ಸೀಮಿತವಾಗಿದೆ.
ಪಟಾಕಿಗಳು ಸ್ಫೋಟಗೊಳ್ಳಲು ಕಾರಣವಾಗುವ ಆಮ್ಲಜನಕವನ್ನು ಉತ್ಪಾದಿಸಲು ಬಳಸುವ ರಸಾಯನಿಕಗಳನ್ನು ಆಕ್ಸಿಡೈಸರ್ ಎಂದು ಕರೆಯಲಾಗುತ್ತದೆ. ಪಟಾಕಿ ಉದ್ಯಮದಲ್ಲಿ ಸಾಮಾನ್ಯವಾಗಿ ಬಳಸುವ ಆಕ್ಸಿಡೈಸರ್ಗಳು ಎಂದರೆ ಪೊಟ್ಯಾಸಿಯಮ್ ನೈಟ್ರೇಟ್ ಅಥವಾ ಬೇರಿಯಮ್ ನೈಟ್ರೇಟ್ ಗಳು ಪ್ರಕೃತಿಯಲ್ಲಿನ ವಾತಾವರಣ ಕಲುಷಿತಗೊಳ್ಳುತ್ತವೆ. ಆದರೆ
ಅದು ಮಾತ್ರವಲ್ಲದೇ ಆಂಟಿಮನಿ, ಲಿಥಿಯಂ, ಪಾದರಸ, ಆರ್ಸೆನಿಕ್, ಸೀಸ, ಬೇರಿಯಂ ಆಕ್ಸೈಡ್‌ಗಳು ಮತ್ತು ಪೊಟ್ಯಾಸಿಯಮ್ ಆಕ್ಸೈಡ್‌ಗಳನ್ನು ಯಾವುದೇ ರೂಪದಲ್ಲಿ ಬಳಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.
ಪಿಎಂ ಅಥವಾ ಪಾರ್ಟಿಕ್ಯುಲೇಟ್ ಮ್ಯಾಟರ್ ಎನ್ನುವುದು ವಾತಾವರಣದಲ್ಲಿ ಅವಶೇಷವಾಗಿ ಉಳಿದ ಎಲ್ಲಾ ಘನ ಮತ್ತು ದ್ರವ ಕಣಗಳ ಮೊತ್ತವಾಗಿದೆ. ಯುಎಸ್ ಇಪಿಎ ವೆಬ್‌ಸೈಟ್‌ನ ಪ್ರಕಾರ, ವಿದ್ಯುತ್ ಸ್ಥಾವರಗಳು, ಕೈಗಾರಿಕೆಗಳು ಮತ್ತು ವಾಹನಗಳಿಂದ ಹೊರಸೂಸುವ ಮಾಲಿನ್ಯಕಾರಕಗಳಾದ ಸಲ್ಫರ್ ಡೈಆಕ್ಸೈಡ್ ಮತ್ತು ಸಾರಜನಕ ಆಕ್ಸೈಡ್‌ಗಳಂ
ಭಾರತದಲ್ಲಿ ಪ್ರಸ್ತುತ ಮೂರು ಬಗೆಯ ಹಸಿರು ಪಟಾಕಿಗಳು ಲಭ್ಯವಿದ್ದು, SWAS, STAR ಮತ್ತು SAFAL ಹಸಿರು ಪಟಾಕಿಗಳಾಗಿವೆ.
ಸುರಕ್ಷಿತ ನೀರು ಬಿಡುಗಡೆ ಮಾಡುವುದು (SWAS): ಈ ವಿಧದ ಪಟಾಕಿಗಳು ಸ್ಫೋಟಗೊಳ್ಳುವಾಗ ಪಟಾಕಿಯಿಂದ ಬೇರ್ಪಟ್ಟ ಧೂಳಿನ ಅಥವಾ ರಸಾಯನಿಕಗಳ ಕಣವನ್ನು ಅದರಲ್ಲಿರುವ ನೀರಿನ ಆವಿ ದುರ್ಬಲಗೊಳಿಸುತ್ತದೆ. ಆ ಮೂಲಕ ಆ ಕಣಗಳು ವಾತಾವರಣ ಸೇರದಂತೆ ಮಾಡುತ್ತದೆ. ವಾತಾವರಣಕ್ಕೆ ಸಲ್ಫರ್ ಡೈಆಕ್ಸೈಡ್ ಹೊರಸೂಸುವುದನ್ನು ತಪ್ಪಿಸಲು ಸ
ಸುರಕ್ಷಿತ ಥರ್ಮೈಟ್ ಕ್ರ್ಯಾಕರ್ಸ್ (STAR): ಹೆಸರೇ ಸೂಚಿಸುವಂತೆ, STAR ಪಟಾಕಿಗಳು ಥರ್ಮೈಟ್ ಅನ್ನು ಕಡಿಮೆ ಬಳಕೆ ಮಾಡುವ ಪಟಾಕಿಗಳಾಗಿವೆ, ಈ ಪಟಾಕಿಗಳು ವಾತಾವರಣಕ್ಕೆ ಕಣಗಳ ಹೊರಸೂಸುವಿಕೆಯನ್ನು ತಗ್ಗಿಸುತ್ತದೆ. ಸಾಂಪ್ರದಾಯಿಕ ಪಟಾಕಿಗಳಲ್ಲಿ ಇವುಗಳನ್ನು ಸ್ಫೋಟಕ್ಕೆ ಇಂಧನವಾಗಿ ಬಳಸಲಾಗುತ್ತದೆ, ಬೆಂಕಿ ಹೊತ್ತಿ
ನಿಜಕ್ಕೂ ಹಸಿರು ಪಟಾಕಿ ಉಪಯುಕ್ತವೇ? ತಜ್ಞರ ಪ್ರಕಾರ ವಾಯು ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಹಸಿರು ಪಟಾಕಿಗಳ ಬಳಕೆ ಪರಿಣಾಮಕಾರಿ ಅಲ್ಲವೇ ಅಲ್ಲ. ಇವು ಮಾಲಿನ್ಯ ಪ್ರಮಾಣವನ್ನು ತಗ್ಗಿಸುತ್ತವೆಯೇ ಹೊರತು ಮಾಲಿನ್ಯವನ್ನು ತಡೆಯುವುದಿಲ್ಲ. ಇವು ಹಾನಿಕಾರಕ ರಸಾಯನಿಕ ಅಥವಾ ಅನಿಲ ಬಿಡುಗಡೆ ಪ್ರಮಾಣವನ್ನು ತಗ್ಗಿಸುತ್ತ
ಹಸಿರು ಪಟಾಕಿಗಳನ್ನು ಯಾರು ತಯಾರಿಸಬಹುದು? ಹಸಿರು ಪಟಾಕಿಗಳ ತಯಾರಿಕಾ ಸೂತ್ರವನ್ನು ಬಳಸಿಕೊಂಡು ಪಟಾಕಿ ತಯಾರಿಸಲು ತಯಾರಕರು ಸಿಎಸ್‌ಐಆರ್ ಜೊತೆ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಫೆಬ್ರವರಿ 2020 ರಂದು, ದೇಶಾದ್ಯಂತ 212 ಸಂಸ್ಥೆಗಳು ಹಸಿರು ಪಟಾಕಿ ತಯಾರಿಕೆ ಸಂಬಂಧ ಒಪ್ಪಂದಗಳಿಗೆ ಸಹಿ ಹಾಕಿವೆ.
ಯಾವ ಪಟಾಕಿಗೆ ನಿಷೇಧ? ಪಟಾಕಿ ಸಿಡಿಸಿದ ಪ್ರದೇಶದಿಂದ 4 ಮೀಟರ್ ದೂರದಲ್ಲೂ ಅದರ ಶಬ್ದದ ಪ್ರಮಾಣ 125 ಡೆಸಿಬಲ್ಸ್ ಇದ್ದಲ್ಲಿ ಅಂಥವುಗಳ ಬಳಕೆಗೆ ನಿಷೇಧ ಹೇರಲಾಗುವುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT