ದೇಶ

ಸೇನಾ ದಂಡನಾಯಕ ಜನರಲ್ ಬಿಪಿನ್ ರಾವತ್ ರಿಂದ ವೈ ಎಸ್ ಆರ್  ತನಕ ಏರ್ ಕ್ರಾಫ್ಟ್ ದುರ್ಘಟನೆಯಲ್ಲಿ ಮೃತಪಟ್ಟ ಪ್ರಮುಖ ಭಾರತೀಯರು

Harshavardhan M
ಸುಭಾಷ್ ಚಂದ್ರ ಬೋಸ್- ಸ್ವಾತಂತ್ರ್ಯ ಸೇನಾನಿ ಬೋಸ್ ಅವರು 1945ರಲ್ಲಿ ತೈವಾನ್ ನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಅದು ಮುಂದೆ ವಿವಾದಕ್ಕೂ ಕಾರಣವಾಗಿತ್ತು.
ಸುಭಾಷ್ ಚಂದ್ರ ಬೋಸ್- ಸ್ವಾತಂತ್ರ್ಯ ಸೇನಾನಿ ಬೋಸ್ ಅವರು 1945ರಲ್ಲಿ ತೈವಾನ್ ನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಅದು ಮುಂದೆ ವಿವಾದಕ್ಕೂ ಕಾರಣವಾಗಿತ್ತು.
ಸಂಜಯ್ ಗಾಂಧಿ- ಇಂದಿರಾಗಾಂಧಿಯವರ ಹಿರಿಯ ಪುತ್ರನಾಗಿದ್ದ ಸಂಜಯ್ 1980ರಲ್ಲಿ ಸಂಭವಿಸಿದ ಗ್ಲೈಡರ್ ಅಪಘಾತದಲ್ಲಿ ಮೃತರಾಗಿದ್ದರು.
ಸುರೇಂದ್ರ ನಾಥ್- ಪಂಜಾಬ್ ರಾಜ್ಯಪಾಲರಾಗಿದ್ದ ಸುರೇಂದ್ರ ನಾಥ್ ಅವರು 1994ರಲ್ಲಿ 9 ಮಂದಿ ಕುಟುಂಬ ಸದಸ್ಯರೊಡನೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಪರ್ವತಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಎಲ್ಲರೂ ಮೃತಪಟ್ಟಿದ್ದರು.
ಮಾಧವ ರಾವ್ ಸಿಂಧಿಯ- ಹಿರಿಯ ಕಾಂಗ್ರೆಸ್ ಮುಖಂಡ ಮಾಧವ ರಾವ್ ಸಿಂಧಿಯ 2001ರಲ್ಲಿ ರಾಲಿಯಲ್ಲಿ ಪಾಲ್ಗೊಳ್ಲಲು ತೆರಳುವ ವೇಳೆ ಹೆಲಿಕಾಪ್ಟರ್ ಪತನಗೊಂಡು ಸಾವನ್ನಪ್ಪಿದ್ದರು.
ಜಿ.ಎಂ.ಸಿ. ಬಾಲಯೋಗಿ- ಲೋಕಸಭಾ ಸ್ಪೀಕರ್ ಆಗಿದ್ದ ಆಂದ್ರಪ್ರದೇಶದ ತೆಲುಗುದೇಶಂ ನಾಯಕ ಜಿಎಂಸಿ ಬಾಲಯೋಗಿ 2002ರಲ್ಲಿ ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟಿದ್ದರು.
ಒ.ಪಿ. ಜಿಂದಾಲ್- 2005ರಲ್ಲಿ ಹರಿಯಾಣಾದ ಇಂಧನ ಸಚಿವರಾಗಿದ್ದ ಒ.ಪಿ ಜಿಂದಾಲ್ ಅವರು ರಾಜ್ಯ ಕೃಷಿ ಸಚಿವ ಸುರೇಂದ್ರ ಸಿಂಗ್ ಅವರೊಂದಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಇಬ್ಬರೂ ಮೃತಪಟ್ಟಿದ್ದರು.
ವೈ.ಎಸ್ ರಾಜಶೇಖರ ರೆಡ್ಡಿ- 2009ರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ರಾಜಕೀಯ ಧುರೀಣ ವೈ.ಎಸ್ ರಾಜಶೇಖರ ರೆಡ್ಡಿ. ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು. 27 ಗಂಟೆಗಳ ನಂತರ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವುದು ಪತ್ತೆಯಾಗಿತ್ತು.
ದೋರ್ಜಿ ಕಾಂದು- ಅರುಣಾಚಲ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಾಂದು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ 2011ರಲ್ಲಿ 5 ದಿನಗಳ ಕಾಲ ನಾಪತ್ತೆಯಾಗಿತ್ತು. ನಂತರ ಅವರ ಹೆಲಿಕಾಪ್ತರ್ ಅಪಘಾತಗೊಂಡ ಸ್ಥಿತಿಯಲ್ಲಿ ಚೀನಾ ಗಡಿಯಲ್ಲಿ ಪತ್ತೆಯಾಗಿತ್ತು.
SCROLL FOR NEXT