ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆರಂಭವಾಗಿರುವ 13ನೇ ಆವೃತ್ತಿಯ ಏರೋ ಇಂಡಿಯಾಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು.
ಏರೋ ಇಂಡಿಯಾ ವೇಳೆ ವಾಯುಪಡೆ ಯೋಧರ ಸಿಂಫೋನಿ ಕಲಾವಿದರು ಬ್ಯಾಂಡ್ ಕೊಳಲು ಮತ್ತು ಸಂಗೀತದಿಂದ ನೆರೆದವರನ್ನು ರಂಜಿಸಿದರು.ರಕ್ಷಣಾ ಸಚಿವರು ವೇದಿಕೆ ಮೇಲೇರುತ್ತಿದ್ದಂತೆ, ಎಚ್ಎಎಲ್ ನ ಲಘು ಹೆಲಿಕಾಪ್ಟರ್ ಗಳು ಭಾರತದ ತ್ರಿವರ್ಣಧ್ವಜ, ಏರೋ ಇಂಡಿಯಾ ಮತ್ತು ವಾಯಪಡೆಯ ಬಾವುಟಗಳನ್ನು ಹೊತ್ತು ಹಾದು ಹೋದವು.ಇತ್ತೀಚೆಗೆ ವಾಯುಪಡೆಗೆ ಸೇರ್ಪಡೆಗೊಂಡಿರುವ ರಫೇಲ್ ಯುದ್ಧ ವಿಮಾನಗಳು ಸಾಲಾಗಿ ಹಾರಾಟ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದವು.ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಕ್ಷಣಾ ಪಡೆ ಮುಖ್ಯಸ್ಥ ಎಂ.ಎಂ. ನರವಾನೆ, ರಕ್ಷಣಾ ಪಡೆಯ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ರಾಕೇಶ್ ಸಿಂಗ್ ಬದಾವಿಯ, ನೌಕಾಪಡೆ ಮುಖ್ಯಸ್ಥ ಕರಮ್ ಬೀರ್ ಸಿಂಗ್, ರಕ್ಷಣಾ ಕಾರ್ಯದರ್ಶಿ ರಾಜ್ಕುಬಮಾರ್ ಮತ್ತಿತರರು ಉಪಸ್ಥಿತರಿದ್ದರು.ಏರೋ ಇಂಡಿಯಾದಲ್ಲಿ 523 ಭಾರತೀಯ ಮತ್ತು 78 ವಿದೇಶಿ ಕಂಪನಿಗಳು ಸಏರಿ 601 ಪ್ರದರ್ಶನಕಾರರು ಪಾಲ್ಗೊಂಡಿದ್ದಾರೆ. ಜೊತೆಗೆ, 14 ದೇಶಗಳು ಕೂಡ ಪಾಲ್ಗೊಳ್ಳುತ್ತಿವೆ.ಏರೋ ಇಂಡಿಯಾ 2021ಏರೋ ಇಂಡಿಯಾ 2021ಏರೋ ಇಂಡಿಯಾ 2021ಏರೋ ಇಂಡಿಯಾ 2021ಏರೋ ಇಂಡಿಯಾ 2021ಏರೋ ಇಂಡಿಯಾ 2021ಏರೋ ಇಂಡಿಯಾ 2021Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos