ನವದೆಹಲಿಯ ಲೋಧಿ ಗಾರ್ಡನ್ ನಲ್ಲಿ ಬೆಳಗಿನ ನಡಿಗೆಗೆ ಬಂದವರು ಯೋಗಾಭ್ಯಾಸದಲ್ಲಿ ನಿರತರಾಗಿರುವುದು...
ರಾಷ್ಟ್ರಪತಿ ರಾಮನಾಥ್ ಕೋವಿಂದ್ ನವದೆಯಲಿಯ ರಾಷ್ಟ್ರಪತಿ ಭವನದಲ್ಲಿ ಯೋಗಭ್ಯಾಸ ಮಾಡಿದರು. ಯೋಗದಿನದ ಅಂಗವಾಗಿ ಸಂದೇಶ ನೀಡಿರುವ ಅವರು ಕೋವಿಡ್-19 ಸಂದರ್ಭದಲ್ಲಿ ಯೋಗ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದಿದ್ದಾರೆಯೋಗ ದಿನದ ಅಂಗವಾಗಿ ಮಾತನಾಡಿದ ಪ್ರಧಾನಿ ಮೋದಿ, ಜಗತ್ತು ಕೊರೋನಾ ಎದುರಿಸುತ್ತಿರುವಾಗ ಯೋಗ ಸದೃಢ ಆರೋಗ್ಯಕ್ಕೆ ಆಶಾಕಿರಣವಾಗಿದೆ, ಸಂಕಷ್ಟದ ಪರಿಸ್ಥಿತಿಯಲ್ಲಿ ಯೋಗ ಆಂತರಿಕ ಶಕ್ತಿಯ ಮೂಲ ಎಂದು ಬಣ್ಣಿಸಿದ್ದಾರೆಆಂಧ್ರಪ್ರದೇಶದ ಗುಂಟೂರಿನ ಉಂಡವಲ್ಲಿ ಗುಹೆಗಳಲ್ಲಿ ಭಾರತದ ಪುರಾತತ್ವ ಸಂಸ್ಥೆ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.ಭಾರತ ಡಬ್ಲ್ಯುಹೆಚ್ಒ ದ ಸಹಯೋಗದಲ್ಲಿ ಎಂ-ಯೋಗ ಅಪ್ಲಿಕೇಷನ್ ಕೊಡುಗೆಯನ್ನು ಜಗತ್ತಿಗೆ ನೀಡಲಿದ್ದು, ಮಾರ್ಗಸೂಚಿ ಸಹಿತ ಯೋಗ ತರಬೇತಿಯ ಹಲವು ವೀಡಿಯೋಗಳು ವಿವಿಧ ಭಾಷೆಗಳಲ್ಲಿ ಲಭ್ಯವಿರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆಮದ್ರಾಸ್ ರೆಜಿಮೆಂಟಲ್ ಕೇಂದ್ರದಲ್ಲಿ ಸೇನೆಗೆ ಸೇರಿರುವ 750 ಮಂದಿ, ಯೋಧರು, ಯೋಧರ ಕುಟುಂಬದವರು ನೀಲಗಿರೀಸ್ ನ ವೆಲ್ಲಿಂಗ್ ಟನ್ ನಲ್ಲಿ ಯೋಗಾಭ್ಯಾಸ ಮಾಡಿದರು.ಶ್ರೀನಗರದಲ್ಲಿ ವಿದ್ಯಾರ್ಥಿಗಳಿಂದ ಯೋಗಾಭ್ಯಾಸಸಂಸ್ಕೃತಿ ಹಾಗೂ ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ನವದೆಹಲಿಯ ಕೆಂಪು ಕೋಟೆ ಬಳಿ ಯೋಗಾಭ್ಯಾಸ ನಡೆಸಿದರು.ತೆಲಂಗಾಣ ಬಿಜೆಪಿ ಅಧ್ಯಕ್ಷ, ಸಂಸದ ಬಂಡಿ ಸಂಜಯ್, ಮಾಜಿ ಸಂಸದೆ ವಿಜಯಶಾಂತಿ ಹೈದರಾಬಾದ್ ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಯೋಗಾಭ್ಯಾಸ ನಡೆಸಿದರು.ಪಾಂಡಿಚೆರಿಯಿಂದ 'ಆಸನ' ಸಂಸ್ಥೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಮಾಡುತ್ತಿರುವವರುಕೊವಿಡ್-19 ಎದುರಿಸುತ್ತಿರುವವರು ಕೊಯಂಬತ್ತೂರಿನಲ್ಲಿ ಯೋಗಾಭ್ಯಾಸ ಮಾಡುತ್ತಿರುವುದು...ಯೋಗಾಭ್ಯಾಸ ನಿರತ ಮಹಿಳೆ....