ದೇಶ

ತಮಿಳುನಾಡಿನಲ್ಲಿ ಧಾರಾಕಾರ ಮಳೆ: ಜಲಾವೃತಗೊಂಡ ಚೆನ್ನೈ ರಸ್ತೆಗಳ ಫೋಟೋಗಳು 

Srinivas Rao BV
ಚೆನ್ನೈ ನ ಹಲವು ಪ್ರದೇಶಗಳು ಮಳೆ ನೀರಿನಿಂದ ಸಂಭವಿಸಬಹುದಾಗಿರುವ ಸಮಸ್ಯೆಗಳನ್ನು ಎದುರಿಸಲು ಸಿದ್ಧಗೊಳ್ಳುತ್ತಿವೆ.
ಚೆನ್ನೈ ನ ಹಲವು ಪ್ರದೇಶಗಳು ಮಳೆ ನೀರಿನಿಂದ ಸಂಭವಿಸಬಹುದಾಗಿರುವ ಸಮಸ್ಯೆಗಳನ್ನು ಎದುರಿಸಲು ಸಿದ್ಧಗೊಳ್ಳುತ್ತಿವೆ.
ಚೆನ್ನೈ ಕಾರ್ಪೊರೇಷನ್ ಸಹ ಪರಿಸ್ಥಿತಿ ನಿಭಾಯಿಸಲು ಸನ್ನದ್ಧಗೊಂಡಿದ್ದು 52 ಬೋಟ್, 507 ವಾಟರ್ ಪಂಪ್ ಗಳನ್ನು ಸಜ್ಜುಗೊಳಿಸಿದೆ. ಅಗತ್ಯವಿರುವವರಿಗೆ ಅಮ್ಮಾ ಕ್ಯಾಂಟೀನ್ ಗಳು ಉಚಿತ ಆಹಾರಗಳನ್ನು ನೀಡುತ್ತಿದೆ.
ತಮಿಳುನಾಡಿನ ಕರಾವಳಿ ಭಾಗದಲ್ಲಿ ಮುಂದಿನ 36-48 ಗಂಟೆಗಳಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚೆನ್ನೈ ನಲ್ಲಿ ಧಾರಾಕಾರ ಮಳೆ
ಚೆನ್ನೈ ನ ಪೆರವಳ್ಳೂರ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಬೋಟ್ ನ ಸಹಾಯದ ಮೂಲಕ ಆಗಮಿಸಿದರು.
ಚೆನ್ನೈ ನ ಪಟ್ಟಲಮ್ ನಲ್ಲಿ ಜಲಾವೃತ ರಸ್ತೆಗಳನ್ನು ಜನತೆ ನಡೆದುಹೋಗುತ್ತಿರುವುದು ಕಡಲೂರು ಮತ್ತು ಚೆನ್ನೈ ನಡುವಿನ ರಸ್ತೆ ಧಾರಾಕಾರ ಮಳೆಯ ಹಾಟ್ ಸ್ಪಾಟ್ ಆಗಿದೆ.
ಚೆನ್ನೈ ನ ಶಾಪಿಂಗ್ ಹಬ್ ಆಗಿರುವ ಟಿ ನಗರದಲ್ಲಿಯೂ ಧಾರಾಕಾರ ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡಿದೆ.
ಡಾ. ಅಂಬೇಡ್ಕರ್ ನಗರದಲ್ಲಿ ತಾಯಿಯೊಬ್ಬರು ಇಬ್ಬರು ಮಕ್ಕಳೊಂದಿಗೆ ಜಲಾವೃತ ರಸ್ತೆಯಲ್ಲಿ ಹಾದು ಹೋಗುತ್ತಿರುವ ದೃಶ್ಯ ಕಂಡುಬಂದದ್ದು ಹೀಗೆ.
SCROLL FOR NEXT