ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿ ಪಡೆದು, ಭಾರತ ಆ.15 ರಂದು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಭಾರತ ಸರ್ಕಾರ ಆಯೋಜಿಸಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲಾಗಿತ್ತು. ಈ ಅಭಿಯಾನದ ಭಾಗವಾಗಿ ವಿಜಯವಾಡದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ರ್ಯಾಲಿಯಲ್ಲಿ
ಕೇರಳದ ಕೊಚ್ಚಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಇಸ್ರೇಲ್ ನ ಪ್ರವಾಸಿಗರ ತಂಡವೊಂದು ಸಂತಸದಿಂದ ಭಾರತದ ತಿರಂಗಾದೊಂದಿಗೆ ಫೋಟೋ ತೆಗೆಸಿಕೊಂಡಿದ್ದು ಹೀಗೆ...ಒಡಿಶಾದ ಭುವನೇಶ್ವರದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ವಂದೇ ಮಾತರಂ ಎಂಬ ಸಾಮಾಜಿಕ ಕಾರ್ಯಕರ್ತರ ತಂಡ ದೇಶಭಕ್ತಿಯ ರೋಡ್ ಶೋ ಆಯೋಜಿಸಿತ್ತು.ತಿರುಪತಿಯಲ್ಲಿ ಇಬ್ಬರು ವ್ಯಕ್ತಿಗಳು ಮಹಾತ್ಮ ಗಾಂಧಿ ಪುತ್ಥಳಿ ಬಳಿ ತಿರಂಗಾ ಸ್ಥಾಪಿಸುತ್ತಿರುವುದು....ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಆರ್ ಕೆ ಬೀಚ್ ನಲ್ಲಿ ತಿರಂಗಾದೊಂದಿಗೆ ಸೆಲ್ಫಿ ತೆಗೆದುಕೊಂಡ ಮಹಿಳೆತಮಿಳುನಾಡಿನ ಚೆನ್ನೈ ನ ಮಿಂಟ್ ಸ್ಟ್ರೀಟ್ ನಲ್ಲಿ ತಿರಂಗಾ ರ್ಯಾಲಿಯನ್ನು ನಡೆಸಲಾಯಿತು.ತಿರಂಗಾ ಬಣ್ಣದ ದೀಪಗಳಿಂದ ಅಲಂಕೃತಗೊಂಡಿರುವ ಒಡಿಶಾದ ಪುರಿಯಲ್ಲಿರುವ ಕೊನಾರ್ಕ್ ಸೂರ್ಯ ದೇವಾಲಯಕೇರಳದ ಕೋಯಿಕ್ಕೋಡ್ ನಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಮಕ್ಕಳು ಮನೆಯ ಹೊರಬಂದು ಧ್ವಜ ಹಿಡಿದು ಬೆಂಬಲಿಸಿರುವುದುತಮಿಳುನಾಡಿನ ಕೊಯಂಬತ್ತೂರಿನಲ್ಲಿ ರೆಡ್ ಕ್ರಾಸ್ ಜಂಕ್ಷನ್ ನ್ನು ತಿರಂಗಾ ದೀಪಗಳಿಂದ ಅಲಂಕರಿಸಲಾಗಿತ್ತು.ಸಿಕಂದರಾಬಾದ್ ನಲಿ ಸೇನಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಉದ್ಘಾಟನೆಯ ಅಂಗವಾಗಿ ಕಳರಿಪಯಟ್ಟು ಪ್ರದರ್ಶನಆಂಧ್ರಪ್ರದೇಶದ ವಿಜಯವಾಡದಲ್ಲಿ ಮಕ್ಕಳನ್ನು ಸ್ವಾತಂತ್ರ್ಯ ಯೋಧರಾದ ಅಲ್ಲೂರಿ ಸೀತಾರಾಮ ರಾಜು, ಅಬ್ದುಲ್ ಕಲಾಮ್ ಆಜಾದ್, ಭಾರತ ಮಾತೆಯಂತೆ ಅಲಂಕರಿಸಿ ರ್ಯಾಲಿ ನಡೆಸಲಾಯಿತು.75 ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಚೆನ್ನೈ ವಿಮಾನ ನಿಲ್ದಾಣಕ್ಕೆ ತಿರಂಗಾ ದೀಪದ ಅಲಂಕಾರತಿರಂಗಾ ದೀಪಗಳ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಭವಾನಿ ಸಾಗರ್ ಜಲಾಶಯFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos