ತಮಿಳನಾಡಿನ ಜನತೆಯ ಪಾಲಿಗೆ 'ಜಲ್ಲಿಕಟ್ಟು' ಬರಿ ಕ್ರೀಡೆಯಷ್ಟೇ ಅಲ್ಲ, ಪೊಂಗಲ್ ಹಬ್ಬದ ಸಾಂಸ್ಕೃತಿಕ ಆಚರಣೆ ಕೂಡಾ ಆಗಿದೆ. ತಮಿಳುನಾಡಿನಾದ್ಯಂತ ಕಳೆದ ಭಾನುವಾರ ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ 
ದೇಶ

ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮಾಚರಣೆ: ಮೈ ಜುಮ್ಮೆನ್ನುವ 'ಜಲ್ಲಿಕಟ್ಟು' ರೋಚಕ ಫೋಟೋಗಳು!

ತಮಿಳನಾಡಿನ ಜನತೆಯ ಪಾಲಿಗೆ 'ಜಲ್ಲಿಕಟ್ಟು' ಬರಿ ಕ್ರೀಡೆಯಷ್ಟೇ ಅಲ್ಲ, ಪೊಂಗಲ್ ಹಬ್ಬದ ಸಾಂಸ್ಕೃತಿಕ ಆಚರಣೆ ಕೂಡಾ ಆಗಿದೆ. ಜಲ್ಲಿಕಟ್ಟು ಕ್ರೀಡೆಯಲ್ಲಿ ಜನರ ಗುಂಪಿಗೆ ಗೂಳಿಯನ್ನು ಹಗ್ಗವಿಲ್ಲದೆ ಬಿಡಲಾಗುತ್ತದೆ. ಈ ವೇಳೆ ಜನರ ಹರ್ಷೋದ್ಗಾರ, ಕೇಕೆ ಮುಗಿಲು ಮುಟ್ಟುತ್ತದೆ.

ಈ ಬಾರಿ ದುರಾದೃಷ್ಟವಶಾತ್ ಪ್ರತ್ಯೇತ ಜಲ್ಲಿಕಟ್ಟು ಘಟನೆಗಳಲ್ಲಿ ಗೂಳಿ ಪಳಗಿಸುವವ ಸೇರಿದಂತೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ಮಧುರೈ ಬಳಿಯ ಪಾಲಮೇಡು ಎಂಬಲ್ಲಿ ಜಲ್ಲಿಕಟ್ಟು ಸಂದರ್ಭದಲ್ಲಿ ಗೂಳಿಯನ್ನು ಪಳಗಿಸಲು ಪ್ರಯತ್ನ ನಡೆಸುತ್ತಿರುವುದು.
ಪಾಲಮೇಡು ಜಲ್ಲಿಕಟ್ಟು ವೇಳೆ ಗೂಳಿಯನ್ನು ಪಳಗಿಸಲು 26 ವರ್ಷದ ಹರೆಯದ ವ್ಯಕ್ತಿ ಅಖಾಡಕ್ಕಳಿದರು. ಗೂಳಿ ಪಳಗಿಸುವವರಲ್ಲಿ ಅರವಿಂದರಾಜ್ ಮುಂಚೂಣಿಯಲ್ಲಿದ್ದರು. 4ನೇ ಸುತ್ತಿನ ಅಂತ್ಯಕ್ಕೆ ಒಂಬತ್ತು ಹೋರಿಗಳನ್ನು ಪಳಗಿಸುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡರು.
5ನೇ ಸುತ್ತಿನ ವೇಳೆ ಅಖಾಡದಲ್ಲಿದ್ದ ಯುವಕನನ್ನು ಚಿಕಿತ್ಸೆಗಾಗಿ ಮಧುರೈ ಜಿಆರ್‌ಎಚ್‌ಗೆ ಸಾಗಿಸಲಾಯಿತು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.
ಮಧುರೈ ಜಿಲ್ಲೆಯ ಅವನಿಯಪುರಂ, ಪಾಲಮೇಡು ಮತ್ತು ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟುಗಳಲ್ಲಿ ಭಾಗವಹಿಸಲು ಒಟ್ಟು 9,699 ಹೋರಿಗಳು ಮತ್ತು 5,399 ಪಳಗಿಸುವವರು ಆನ್‌ಲೈನ್‌ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು.
ತಿರುಚ್ಚಿ ಸಮೀಪದ ಸೂರಿಯೂರಿನಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಗೂಳಿ ಪಳಗಿಸುವವರು ಗೂಳಿಗಳನ್ನು ಪಳಗಿಸಿರುವುದು.
ಮೈಸೂರು ಸಮೀಪದ ಸಿದ್ದಲಿಂಗಪುರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗೂಳಿ ಮತ್ತು ಅದನ್ನು ಹಿಡಿದಿದ್ದ ವ್ಯಕ್ತಿ ಬೆಂಕಿಯ ಮೇಲೆ ಹಾರಿದ ಘಟನೆ ನಡೆಯಿತು.
ಚೆನ್ನೈನ ಮರೀನಾ ಬೀಚ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಹಸುವಿಗೆ ಸ್ನಾನ ಮಾಡಿಸುತ್ತಿರುವುದು.
ಚೆನ್ನೈನ ಟಿನಗರದಲ್ಲಿರುವ ಗೋಶಾಲೆಯಲ್ಲಿ ಹುಡುಗನೊಬ್ಬ ಹಬ್ಬದ ದಿನದಂದು ಗೂಳಿಗೆ ಮೇವು ನೀಡುತ್ತಿರುವುದು.
ಸಂಕ್ರಾಂತಿ ಹಬ್ಬದ ಅಂಗವಾಗಿ ಶನಿವಾರ ವಿಜಯವಾಡದ ಹೊರವಲಯದಲ್ಲಿ ಹುಂಜಗಳ ಕಾಳಗ ಆಯೋಜಿಸಲಾಯಿತು.
ಹುಂಜಗಳ ಕಾಳಗವನ್ನು ನಿಷೇಧಿಸಿ ಹೈಕೋರ್ಟ್ ಆದೇಶ ನೀಡಿದ್ದರೂ, ಎನ್‌ಟಿಆರ್, ಕೃಷ್ಣಾ, ಏಲೂರು, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ, ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮಾ, ಕಾಕಿನಾಡ, ರಾಜಮಹೇಂದ್ರವರಂ, ಗುಂಟೂರು, ಪ್ರಕಾಶಂ, ನೆಲ್ಲೂರು ಮತ್ತಿತರ ಜಿಲ್ಲೆಗಳಲ್ಲಿ ಹುಂಜಗಳ ಕಾಳಗ ನಡೆಸಲಾಯಿತು. ಇದಕ್ಕೆ ರಾಜಕೀಯ ನಾಯಕರ ಬೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT