2013ರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ವಿಕೆಟ್ ಕೀಪರ್ ಓರ್ವ ಟೆಸ್ಟ್ ಪಂದ್ಯದಲ್ಲಿ ಡಬಲ್ ಸೆಂಚೂರಿ(224) ಸಿಡಿಸಿದ ಖ್ಯಾತಿಗೆ ಧೋನಿ ಭಾಜನರಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಎಲ್ಲಾ ಮಾದರಿಯಲ್ಲಿ(331) ಅತೀ ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿದ್ದ ಖ್ಯಾತಿ ಧೋನಿಗಿದೆ.
ಪಾದಾರ್ಪಣೆ ಮಾಡಿದ ಐದನೇ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ 148 ರನ್ ಸಿಡಿಸಿದ ಧೋನಿ.
Advertisement
Advertisement
ಎಂಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2011ರ ವಿಶ್ವಕಪ್ ಗೆದ್ದಿದ್ದು 28 ವರ್ಷಗಳ ಬಳಿಕ ಭಾರತ ಈ ಸಾಧನೆ ಮಾಡಿದೆ.
2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತ ಗೆದ್ದು ಬೀಗಿತ್ತು.
ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಧೋನಿ ನಾಯಕತ್ವದ ಕೊನೆಯ ಸರಣಿಯಾಗಿದ್ದು ಭಾರತ 3-2ರ ರಿಂದ ಸರಣಿ ಕೈವಶ ಮಾಡಿಕೊಂಡಿತ್ತು.
ಧೋನಿ ನಾಯಕತ್ವದಲ್ಲಿ ಐಪಿಎಲ್ ಫ್ರಾಂಚೈಸಿಯಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2010, 2011ರ ಚಾಂಪಿಯನ್ ಆಗಿತ್ತು. ಅಲ್ಲದೆ 2010 ಮತ್ತು 2014ರಲ್ಲಿ ಚಾಂಪಿಯನ್ ಲೀಗ್ ನಲ್ಲಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಟೆಸ್ಟ್ ಸರಣಿಯೊಂದರಲ್ಲಿ ವೈಟ್ ವಾಶ್ ಮಾಡಿತ್ತು. ಇದು 40 ವರ್ಷಗಳಲ್ಲೇ ಭಾರತದ ಮುಂದೆ ಆಸ್ಟ್ರೇಲಿಯಾ ವೈಟ್ ವಾಶ್ ಮುಖಭಂಗ ಎದುರಿಸಿತ್ತು.