ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದಕ್ಕಾಗಿ ಅಂದಿನ ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್.ಧೋನಿಯವರಿಗೆ ಹಸ್ತಲಾಘವ ಮೂಡುವ ಮೂಲಕ ಅಭಿನಂದಿಸಿದ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ. 
ಕ್ರೀಡೆ

ವಿಶ್ವಕಪ್ ವಿಜೇತ, ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯವರ ಕೆಲ ಅಪರೂಪದ ಫೋಟೋಗಳು...

ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ಒಂದು ರೀತಿಯ ಹಬ್ಬವಾದರೆ, ಧೋನಿ ಅವರ ಆರಾಧ್ಯ ದೈವವಾಗಿದ್ದಾರೆ. ಜಾಗತಿಕ ಕ್ರಿಕೆಟ್ ನಲ್ಲಿ ಎಲ್ಲಾ ಟೂರ್ನಿಗಳನ್ನೂ ಗೆದ್ದ ವಿಶ್ವದ ಏಕಮಾತ್ರ ನಾಯಕ ಎಂ.ಎಸ್.ಧೋನಿಯವರು ಮಂಗಳವಾರ ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಧೋನಿಯವರ ಕೆಲ ಅಪರೂಪದ ಫೋಟೋಗಳು ಇಲ್ಲಿವೆ...

2007 ರಲ್ಲಿ ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೂರನೇ ಮತ್ತು ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದ ವೇಳೆ ವಿಶ್ರಾಂತಿ ಪಡೆಯುತ್ತಿರುವ ಎಂಎಸ್ ಧೋನಿ.
ತವರು ನೆರ ರಾಂಚಿಯಲ್ಲಿ ಬೈಕ್ ರೈಡ್ ಮಾಡುತ್ತಿರುವ ಎಂ.ಎಸ್.ಧೋನಿ.
2008 ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿರುವ ಕ್ವಾಯ್ಡ್-ಎ-ಅಜಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಂ.ಎಸ್ ಧೋನಿಯನ್ನು ಪಾಕಿಸ್ತಾನ ಭದ್ರತಾಧಿಕಾರಿಗಳು ಕರೆದೊಯ್ಯುತ್ತಿರುವುದು.
2009ರಲ್ಲಿ ಮುಂಬೈನಲ್ಲಿ ನಡೆದ ಆಯ್ಕೆ ಸಮಿತಿ ಸಭೆಗಾಗಿ ಬಿಸಿಸಿಐ ಕಚೇರಿಗೆ ಆಗಮಿಸಿದ ಎಂ.ಎಸ್.ಧೋನಿ.
2010ರಲ್ಲಿ ಅಹಮದಾಬಾದ್‌ನ ಹೋಟೆಲ್‌ವೊಂದರಲ್ಲಿ ಪತ್ನಿ ಸಾಕ್ಷಿ ರಾವತ್ ಅವರೊಂದಿಗೆ ಸಾಂಪ್ರದಾಯಿಕ ಗುಜರಾತ್ ಆಹಾರವನ್ನು ಸೇವಿಸುತ್ತಿರುವ ಎಂ.ಎಸ್.ಧೋನಿ.
ರಾಂಚಿಯಿಂದ ಪೂರ್ವಕ್ಕೆ 55 ಕಿ.ಮೀ ದೂರದಲ್ಲಿರುವ ತಮರ್ನಲ್ಲಿರುವ ಪ್ರಾಚೀನ ಡಿಯೋರಿ ದೇವಸ್ಥಾನಕ್ಕೆ ಭೇಟಿ ನೀಡಿದ ಎಂ.ಎಸ್.ಧೋನಿ.
ತಮಿಳುನಾಡಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಅಂದಿನ ಮುಖ್ಯಮಂತ್ರಿ ಕರುಣಾನಿಧಿಯವರು ಎಂ.ಎಸ್.ಧೋನಿಯವರೊಂದಿಗೆ ಕೈಕುಲುಕುತ್ತಿರುವುದು.
ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಅವರೊಂದಿಗೆ ಕ್ರಿಕೆಟಿಗ ಎಂ ಎಸ್ ಧೋನಿ.
ಕೋಲ್ಕತ್ತಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಬಳಿಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜೊತೆಗೆ ಫೋಟೋ ತೆಗೆಸಿಕೊಂಡ ಎಂ.ಎಸ್.ಧೋನಿ.
ಶ್ರೀನಗರದ 92 ಬೇಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯನ್ನು ಭೇಟಿ ಮಾಡಿದ ಲೆಫ್ಟಿನೆಂಟ್ ಕರ್ನಲ್ ಎಂ.ಎಸ್. ಧೋನಿ.
ಚೆನ್ನೈನ ಮದ್ರಾಸ್ ಹೈಕೋರ್ಟ್‌ನ 150 ನೇ ವರ್ಷಾಚರಣೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ ವೈ ಇಕ್ಬಾಲ್ ಅವರ ಚೇಂಬರ್'ಗೆ ಭೇಟಿ ನೀಡಿದ ಬಳಿಕ ಅಭಿಮಾನಿಗಳಿಗೆ ಕೈಬೀಸುತ್ತಿರುವ ಎಂ.ಎಸ್.ಧೋನಿ.
ಚೆನ್ನೈನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಕಾಣಿಸಿಕೊಂಡ ಎಂ.ಎಸ್.ಧೋನಿ, ಪತ್ನಿ ಸಾಕ್ಷಿ ಸಿಂಗ್ ರಾವತ್ ಮತ್ತು ಬಿಸಿಸಿಐ ಕಾರ್ಯದರ್ಶಿ ಎನ್ ಶ್ರೀನಿವಾಸನ್.
ಜವಾಹರಲಾಲ್ ನೆಹರು ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಏಕದಿನ ಪಂದ್ಯಕ್ಕಾಗಿ ಶನಿವಾರ ನೆಡುಂಬಸ್ಸೆರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಂ.ಎಸ್. ಧೋನಿ.
ಜೆ.ಎಲ್.ಎನ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಚಾರಿಟಿ ಫೌಂಡೇಶನ್ ಆಲ್ ಹಾರ್ಟ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಸೆಲೆಬ್ರಿಟಿ ಫುಟ್ಬಾಲ್ ಪಂದ್ಯದ ವೇಳೆ ಎಂ.ಎಸ್.ಧೋನಿ
ಇಂಡಿಯನ್ ಸೂಪರ್ ಲೀಗ್ ವೇಳೆ ಚೆನ್ನೈ ಎಫ್‌ಸಿ ಮತ್ತು ಮುಂಬೈ ಎಫ್‌ಸಿ ನಡುವೆ ನಡೆದ ಪಂದ್ಯದ ವೇಳೆ ಎಂ.ಎಸ್.ಧೋನಿ.
ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಧೋನಿ ಪತ್ನಿ ಸಾಕ್ಷಿ.
ನವದೆಹಲಿಯಲ್ಲಿ ನಡೆದ ಸುರೇಶ್ ರೈನಾ ಅವರ ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡ ಎಂ.ಎಸ್.ಧೋನಿ ಮತ್ತು ಕುಸ್ತಿಪಟು ಸುಶೀಲ್ ಕುಮಾರ್.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುತ್ರಿಯೊಂದಿಗೆ ಕಾಣಿಸಿಕೊಂಡ ಧೋನಿ.
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ವೇಳೆ ಸೆಲ್ಫಿಗೆ ಪೋಸ್ ನೀಡಿದ ಎಂ.ಎಸ್.ಧೋನಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT