ಕೊರೋನಾ ಸಾಂಕ್ರಾಮಿಕದ ನಡುವೆಯೂ ಆತಂಕದಲ್ಲೇ ಆರಂಭವಾಗಿದ್ದ ಐಪಿಎಲ್ ಟೂರ್ನಿ ಇದೀಗ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 
ಕ್ರೀಡೆ

ಐಪಿಎಲ್ 2020: ಅಪ್ರತಿಮ ಆಟಕ್ಕೆ ವಿವಿಧ ಪ್ರಶಸ್ತಿ ಪಡೆದ ಆಟಗಾರರು ಇವರು!

ಕೊರೋನಾ ಸಾಂಕ್ರಾಮಿಕದ ನಡುವೆಯೂ ಆತಂಕದಲ್ಲೇ ಆರಂಭವಾಗಿದ್ದ ಐಪಿಎಲ್ ಟೂರ್ನಿ ಇದೀಗ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಮ್ಯಾನ್ ಆಫ್ ದಿ ಫೈನಲ್: ಟ್ರೆಂಟ್ ಬೋಲ್ಟ್ ದೆಹಲಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ಟ್ರೆಂಟ್ ಬೋಲ್ಟ್ ಅವರಿಗೆ ಮ್ಯಾನ್ ಆಫ್ ದಿ ಫೈನಲ್ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಬೋಲ್ಟ್, 'ನಾನು ಪವರ್‌ಪ್ಲೇ ಅನ್ನು ಇಷ್ಟಪಡುತ್ತೇನೆ. ಕಳೆದ ಸಾಕಷ್ಟು ತಿಂಗಳಿನ
ಪವರ್ ಪ್ಲೇಯರ್-ಟ್ರೆಂಟ್ ಬೋಲ್ಟ್ ಜಸ್ಪ್ರಿತ್ ಬೂಮ್ರಾ ಜೊತೆಗೆ ಮುಂಬೈ ತಂಡದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಮೊನಚು ನೀಡಿದ್ದು ಟ್ರೆಂಟ್ ಬೋಲ್ಟ್. ಪವರ್‌ಪ್ಲೇನಲ್ಲಿ ಅತಿ ಹೆಚ್ಚಿ ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಮುಂಬೈಗೆ ಆರಂಭದಲ್ಲೇ ಯಶಸ್ಸು ದೊರಕಲು ಕಾರಣರಾಗಿದ್ದಾರೆ. ಇದಕ್ಕಾಗಿ ಪವರ್‌ಪ್ಲೇಯರ್
ಫೇರ್‌ ಪ್ಲೇ ಅವಾರ್ಡ್: ಮುಂಬೈ ಇಂಡಿಯನ್ಸ್ ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್ ತಂಡ ಅರ್ಹವಾಗಿಯೇ ಫೇರ್‌ ಪ್ಲೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮೈದಾನದೊಳಗಡೆ ನ್ಯಾಯೋಚಿತ ನಡವಳಿಕೆಗಾಗಿ ಈ ಪ್ರಶಸ್ತಿಯನ್ನು ನಿಡಲಾಗುತ್ತದೆ. ಮುಂಬೈ ಚಾಂಪಿಯನ್
ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್: ಇಶಾನ್ ಕಿಶನ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪ್ರಶಸ್ತಿಗೆ ಮುಂಬೈ ಇಂಡಿಯನ್ಸ್ ತಂಡದ ಇಶಾನ್ ಕಿಶನ್ ಪಾತ್ರರಾಗಿದ್ದಾರೆ. ಟೂರ್ನಿಯುದ್ದಕ್ಕೂ ತಮ್ಮ ಸ್ಫೋಟಕ ಆಟದ ಮೂಲಕವೇ ಗಮನ ಸೆಳೆದಿದ್ದ ಇಶಾನ್ ಕಿಶನ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾ
ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್: ಜೋಫ್ರಾ ಆರ್ಚರ್ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್ ತಮ್ಮ ಮೊನಚಿನ ದಾಳಿ ಮೂಲಕ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇಡೀ ಟೂರ್ನಿಯಲ್ಲಿ 20 ವಿಕೆಟ್ ಕಿತ್ತು ಮಿಂಚಿರುವ ಆರ್ಚರ್, ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ
ಆರೆಂಜ್ ಕ್ಯಾಪ್: ಕೆಎಲ್ ರಾಹುಲ್ ಟೂರ್ನಿಯಲ್ಲಿ ಆರಂಭದಿಂದಲೂ ರನ್ ಗಳಿಕೆಯಲ್ಲಿ ಮುಂದಿದ್ದ ಕೆಎಲ್ ರಾಹುಲ್ ಗೆ ಆರಂಜ್ ಕ್ಯಾಪ್ ಪ್ರಶಸ್ತಿ ದಕ್ಕಿದೆ. ಪ್ಲೇ ಆಫ್‌ನಿಂದಲೇ ತಂಡ ಹೊರಬಿದ್ದರೂ ರಾಹುಲ್ ರನ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಾಗಿಲ್ಲ. ಕೇವಲ 14 ಪಂದ್ಯಗಳಲ್ಲಿ ರಾಹುಲ್ 670 ರನ್ ಗಳಿಸಿದ್ದಾರೆ. ಈ ಮೂಲಕ
ಉದಯೋನ್ಮುಖ ಆಟಗಾರ: ದೇವದತ್ ಪಡಿಕ್ಕಲ್ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದು ಆರ್‌ಸಿಬಿ ಪರವಾಗಿ ಅದ್ಭುತ ಪ್ರದರ್ಶನ ನೀಡಿದ ದೇವದತ್ ಪಡಿಕ್ಕಲ್ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 15 ಪಂದ್ಯಗಳಲ್ಲಿ ಪಡಿಕ್ಕಲ್ 473 ರನ್ ಗಳಿಸಿದ್ದಾರೆ. ಪಡಿಕ್ಕಲ್ ಅವರ ಈ ಪ್ರದರ್ಶನ ಆರ್‌ಸಿಬಿ ತಂಡ ಹಲ
ಸೂಪರ್ ಸ್ಟ್ರೈಕರ್: ಕಿರಾನ್ ಪೊಲಾರ್ಡ್ ಮುಂಬೈ ತಂಡದ ಸ್ಫೋಟಕ ಬ್ಯಾಟ್ಸಮನ್ ಕೀರನ್ ಪೊಲಾರ್ಡ್ ಸೂಪರ್ ಸ್ಟ್ರೈಕರ್ ಪ್ರಶಸ್ತಿಗೆ ಭಾಜನರಾಗಿದ್ದು, 16 ಪಂದ್ಯಗಳಲ್ಲಿ ಆಡಿ 268 ರನ್ ಗಳಿಸಿದ್ದಾರೆ. ಟೂರ್ನಿಯ ಇತರೆ ಆಟಗಾರರಿಗೆ ಹೋಲಿಕೆ ಮಾಡಿದರೆ ರನ್ ಗಳಿಕೆಯಲ್ಲಿ ಪೊಲಾರ್ಡ್ ಹಿಂದೆ ಬಿದಿದ್ದರಾದರೂ, ಕ್ರೀಸ್ ನಲ್ಲಿದ್
ಪರ್ಪಲ್ ಕ್ಯಾಪ್: ಕಗಿಸೋ ರಬಡಾ ಈ ಬಾರಿಯ ಪರ್ಪಲ್ ಕ್ಯಾಪ್ ಯಾರ ಮುಡಿಗೇರಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಪಟ್ಟಿಯಲ್ಲಿ ಕಗಿಸೋ ರಬಡಾ ಹಾಗೂ ಜಸ್ಪ್ರೀತ್ ಬೂಮ್ರಾ ಜಿದ್ದಾಜಿದ್ದಿನ ಹೋರಾಟವನ್ನು ನಡೆಸಿದ್ದರು. ಅಂತಿಮ ಪಂದ್ಯದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿದ ರಬಡಾ ಟೂರ್ನಿಯಲ್ಲಿ ಅತಿ ಹೆಚ್ಚು ವ
ಗೇಮ್‌ ಚೇಂಜರ್ ಆಫ್ ಐಪಿಎಲ್: ಕೆಎಲ್ ರಾಹುಲ್ ಟೂರ್ನಿಯ ಆರಂಭದಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಗೇಮ್‌ ಚೇಂಜರ್ ಆಫ್ ಐಪಿಎಲ್ ಪ್ರಶಸ್ತಿಗೆ ಭಾಜನರಾದರು. ರಾಹುಲ್ 14 ಪಂದ್ಯಗಳಿಂದ 670 ರನ್ ಗಳಿಸಿದ್ದು, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಾಹುಲ್ ಭರ್ಜ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT