ಕ್ರೀಡೆ

ಒಲಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದ ನೀರಜ್ ಜೋಪ್ರಾ!

Vishwanath S
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದಿದ್ದಾರೆ.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದಿದ್ದಾರೆ.
ನೀರಜ್ ತನ್ನ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದರು. ಎರಡನೇ ಪ್ರಯತ್ನದಲ್ಲಿ, ನೀರಜ್ 87.58 ಮೀಟರ್ ಎಸೆದರು.
ನೀರಜ್ ಮೂರನೇ ಪ್ರಯತ್ನದಲ್ಲಿ 76.79 ಮೀಟರ್ ಎಸೆಯಲು ಮಾತ್ರ ಸಾಧ್ಯವಾಯಿತು.
ನಾಲ್ಕನೇ ಮತ್ತು ಐದನೇ ಪ್ರಯತ್ನದಲ್ಲಿ ನೀರಜ್ ಫೌಲ್ ಆದರು. ಕೊನೆಯ ಪ್ರಯತ್ನದಲ್ಲಿ 84 ಮೀಟರ್ ಎಸೆದರು.
ಇನ್ನು ನೀರಜ್ ಅರ್ಹತೆಯ ಮೊದಲ ಪ್ರಯತ್ನದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದರು.
ಮೊದಲ ಪ್ರಯತ್ನದಲ್ಲಿ 86.65 ಮೀಟರ್ ದೂರ ಎಸೆದು ಫೈನಲ್ ತಲುಪಿದರು. ಈ ವೇಳೆ 12 ಆಟಗಾರರು ಫೈನಲ್ ಲಗ್ಗೆ ಹಿಟ್ಟಿದ್ದರು.
ನೀರಜ್ ನಂಬರ್ ಒನ್ ಆಗಿದ್ದರು ಮತ್ತು ಶನಿವಾರ ಅವರು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸುವಲ್ಲಿ ಯಶಸ್ವಿಯಾದರು.
ನೀರಜ್ ಚೋಪ್ರಾ
SCROLL FOR NEXT