ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಭಾರತ 16 ರನ್ ಗಳ ವಿರೋಚಿತ ಜಯ ದಾಖಲಿಸಿದ್ದು, ಇದೇ ಒಂದು ಒಂದು ಪಂದ್ಯ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ.
ಭಾರತ ನೀಡಿದ 238ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ಡೇವಿಡ್ ಮಿಲ್ಲರ್ (ಅಜೇಯ 106ರನ್) ಮತ್ತು ಕ್ವಿಂಟನ್ ಡಿಕಾಕ್ (ಅಜೇಯ 69) ಮುರಿಯದ ನಾಲ್ಕನೇ ವಿಶ್ವ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತದ ವಿರೋಚಿತ ಪ್ರದರ್ಶನ ನೀಡಿತು.ಈ ಪಂದ್ಯದ ಸೋಲಿನ ಮೂಲಕ ದಕ್ಷಿಣ ಆಫ್ರಿಕಾ ತಂಡ ಸರಣಿ ಕೈ ಚೆಲ್ಲಿದ್ದು ಆ ಮೂಲಕ ತನ್ನದೇ ದಾಖಲೆಯ ಸರಪಳಿಯನ್ನು ಕಳಚಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡ ಕಳೆದ 7 ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಲ್ಲಿ ಸೋಲು ಕಂಡಿರಲಿಲ್ಲ. ಆದರೆ ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಸೋಲು ಕಾಣುವ ಮೂಲಕ ಈ ಗೆಲುವಿನ ನಾಗಾಲೋಟದ ಅಜೇಯ ಸರಪಳಡೇವಿಡ್ ಮಿಲ್ಲರ್-ಡಿಕಾಕ್ ಜೋಡಿ ಕೂಡ ವಿಶ್ವ ದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಈ ಜೋಡಿ ಅಜೇಯ 154ರನ್ ಗಳ ಬೃಹತ್ ಜೊತೆಯಾಟವಾಡಿದ್ದು, ಇದು ಭಾರತದ ವಿರುದ್ಧ ದಾಖಲಾದ ಗರಿಷ್ಛ ರನ್ ಗಳ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಗಿದೆ. ಅಂತೆಯೇ ಇದು ಟಿ20 ಕ್ರಿಕೆಟ್ ನಲ್ಲಿ 4 ಅಥವಾ ಅದಕ್ಕಿಂತ ಕೆಳ ಕ್ರಮಾಂಕದದಲ್ಲಿ ದಾಖಆಫ್ರಿಕಾ ಪರ 5ನೇ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ ಡೇವಿಡ್ ಮಿಲ್ಲರ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ ಮತ್ತು ಗರಿಷ್ಟ ವೈಯುಕ್ತಿಕ ಗರಿಷ್ಛ ರನ್ ದಾಖಲಿಸಿದ ಜಗತ್ತಿನ ಮೊದಲ ಬ್ಯಾಟರ್ ಎಂಬ ಕೀರ್ತಿಗೂ ಮಿಲ್ಲರ್ ಭಾಜನಈ ಪಂದ್ಯದಲ್ಲಿ ಆಫ್ರಿಕಾ ಪರ ಅಜೇಯ 106ರನ್ ಗಳಿಸಿದ ಮಿಲ್ಲರ್ ದಾಖಲೆ ನಿರ್ಮಿಸಿದ್ದು, ಬೃಹತ್ ಮೊತ್ತದ ಚೇಸಿಂಗ್ ವೇಳೆ ಅಜೇಯ ಶತಕ ಸಿಡಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೆಎಲ್ ರಾಹುಲ್ ಅಜೇಯ 110 ರನ್ ಗಳಿಸಿದ್ದರು.ಇನ್ನು ಈ ಪಂದ್ಯದ ಉಭಯ ಇನ್ನಿಂಗ್ಸ್ ನ ಡೆತ್ ಓವರ್ ನಲ್ಲಿ ದಾಖಲೆಯ ರನ್ ಗಳು ದಾಖಲಾಗಿದ್ದು, ಅಂದರೆ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ತನ್ನ ಪಾಲಿನ ಡೆತ್ ಓವರ್ ನಲ್ಲಿ ಅಂದರೆ 16 ರಿಂದ 20ನೇ ಓವರ್ ವರೆಗೂ 82 ರನ್ ಪೇರಿಸಿದರೆ, ದಕ್ಷಿಣ ಆಫ್ರಿಕಾ ತಂಡ ಇದೇ ಅವಧಿಯಲ್ಲಿ 78 ರನ್ ಕಲೆ ಹಾಕಿತು. ಆ ಮೂಲಕ ಉಭಯಇನ್ನು ಈ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಜೋಡಿ ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಜೋಡಿ ಭರ್ಜರಿ ಶತಕದ ಜೊತೆಯಾಟವಾಡಿತು. ಸೂರ್ಯ ಕುಮಾರ್ ಯಾದವ್ (61 ರನ್) ಮತ್ತು ವಿರಾಟ್ ಕೊಹ್ಲಿ (ಅಜೇಯ 49) ಜೋಡಿ 102 ರನ್ ಗಳ ಅಮೋಘ ಶತಕದ ಜೊತೆಯಾಟ ನೀಡಿತು. ಈ ಪಂದ್ಯದಲ್ಲಿ ಈ ಜೋಡಿ 14.57 ರನ್ ರೇಟ್ ನಲ್ಲಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದು ಭಾರತದ ಪರ ಅತೀ ಕಡಿಮೆ ಎಸೆತಗಳಲ್ಲಿ ದಾಖಲಾದ ಮೂರನೇ ಅರ್ಧಶತಕ ಎಂಬ ಕೀರ್ತಿಗೆ ಭಾಜನವಾಗಿದೆ. ಅಂತೆಯೇ ಇದೇ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ತಮ್ಮ ರನ್ ಗಳಿಕೆಯನ್ನು 1 ಸಾವಿರಕ್ಕೇರಿಸಿಕೊಂಡರು. ಆ ಮೂಲಕ ವೇಗವಾಗಿ ಸಾವಿರತವರಿನಲ್ಲಿ ಭಾರತಕ್ಕೆ ಮೊದಲ ಟಿ20 ಸರಣಿ ಜಯ ಭಾರತ ನೆಲದಲ್ಲಿ ಈ ವರೆಗೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಜಯ ಕಂಡಿರಲಿಲ್ಲ. ಇಂದಿನ ಗೆಲುವಿನ ಮೂಲಕ ಭಾರತ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ 3 ಟಈ ಅಮೋಘ ಬ್ಯಾಟಿಂದ್ ಪ್ರದರ್ಶನದ ಮೂಲಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತದ ದಾಖಲೆ ನಿರ್ಮಾಣ ಮಾಡಿದ್ದು ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಟಿ20 ಪಂದ್ಯದಲ್ಲಿ ಗರಿಷ್ಛ ಮೊತ್ತ ಪೇರಿಸಿದ ತಂಡ ಎಂಬ ಕೀರ್ತಿಗೂ ಭಾಜನವಾಯಿತು.ಕೆಎಲ್ ರಾಹುಲ್-ರೋಹಿತ್ ಶರ್ಮಾ ಜೋಡಿ ಅಮೋಘ 96 ರನ್ ಗಳ ಜೊತೆಯಾಟ ನೀಡಿತು. ಆ ಮೂಲಕ ತಮ್ಮ ಜೊತೆಯಾಟದ 15ನೇ 50ಕ್ಕೂ ಅಧಿಕ ರನ್ ಗಳ ಜೊತೆಯಾಟವಾಡಿತು. ಇದು ಅಂತಾಷ್ಟ್ರೀಯ ಟಿ20 ಮಾದರಿಯಲ್ಲಿ ಜೋಡಿಯೊಂದರಿಂದ ದಾಖಲಾದ ಅತೀ ಹೆಚ್ಚಿನ 50ಕ್ಕೂ ಅಧಿಕ ರನ್ ಗಳ ಜೊತೆಯಾಟವಾಗಿದೆ.ಇದೇ ಪಂದ್ಯದಲ್ಲಿ ಭಾರತೀಯ ಬ್ಯಾಟರ್ ಗಳಿಂದ ಅಕ್ಷರಶಃ ದಂಡನೆಗೆ ಗುರಿಯಾದ ಆಫ್ರಿಕಾ ಬೌಲರ್ ಗಳು ಹೀನಾಯ ದಾಖಲೆಯನ್ನು ಬರೆದಿದ್ದು, ಈ ಪಂದ್ಯದ ಹೀನಾಯ ಪ್ರದರ್ಶನದ ಮೂಲಕ ಆಫ್ರಿಕಾ ವೇಗಿಗಳು 2ನೇ ಕಳಪೆ ಪ್ರದರ್ಶನ ಎಂಬ ಕುಖ್ಯಾತಿಗೆ ಭಾಜನರಾಗಿದ್ದಾರೆ. ಈ ಪಂದ್ಯದಲ್ಲಿ 13.40 ರನ್ ಸರಾಸರಿಯಲ್ಲಿ ರನ್ ಬಿಟ್ಟುಕೊಡುವ ಮೂFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos