ಮುಂಬಯಿ ವಾಂಖೆಡೆ ಸ್ಟೇಡಿಯಂನಲ್ಲೇ ವಿರಾಟ್ ಕೊಹ್ಲಿ(virat kohli) 50ನೇ ಶತಕ ಬಾರಿಸಿ ಸಚಿನ್ ಅವರ ದಾಖಲೆ ಮುರಿದಿದ್ದಾರೆ. ಬುಧವಾರ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.
ಅವರ ಈ ಸಾಹಸಕ್ಕೆ ಸ್ವತಃ ಸಚಿನ್ ಸೇರಿ ಇಡೀ ದೇಶವೇ ಕೊಂಡಾಡುತ್ತಿದೆ. ಅವರ ಪತ್ನಿ ಅನುಷ್ಕಾ ಶರ್ಮ(Anushka Sharma) ಇನ್ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿ ಎಲ್ಲರ ಮೆಚ್ಚುಗೆ ಪಡೆದಿದೆ.ಅನುಷ್ಕಾ ಶರ್ಮ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತಿಯ ಸಾಧನೆಯ ಬಗ್ಗೆ ಬರೆದುಕೊಂಡು, ನೀನು ನಿಜಕ್ಕೂ ದೇವರ ಮಗು ಎಂದು ಹೇಳಿದ್ದಾರೆ.ದೇವರು ಅತ್ಯುತ್ತಮ ಸ್ಕ್ರಿಪ್ಟ್ ರೈಟರ್! ನನಗೆ ನಿಮ್ಮ ಪ್ರೀತಿಯ ಆಶೀರ್ವಾದ ಸಿಕ್ಕಿರುವ ಜತೆಗೆ ಕೊಹ್ಲಿಯ ಪ್ರೀತಿ ಕೂಡ ಸಿಗುವಂತೆ ಮಾಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲಿ ಕೊಹ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆದು ಯಶಸ್ಸು ಸಾಧಿಸಲಿ, ಬೆಳವಣಿಗೆ ಹೊಂದಲಿ. ನಿಜವಾಗಿಯೂ ನೀವು ದೇವರ ಮಗು ಎಂದು ಅ50ನೇ ಶತಕ ಬಾರಿಸಿದ ನಂತರ ಬ್ಯಾಟ್ ನೆಲದ ಮೇಲಿಟ್ಟು ಹೆಲ್ಮೆಟ್ ತೆಗೆದು ಕೈಗಳನ್ನು ನೆಲದತ್ತ ಚಾಚಿ ತಲೆಬಾಗಿದ ವಿರಾಟ್ ಕೊಹ್ಲಿಭಾರತ ಪರ ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ 7 ವಿಕೆಟ್ ಕಿತ್ತು ಮಿಂಚಿದರೆ, ಬ್ಯಾಟಿಂಗ್ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಶತಕ ಸಿಡಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ 50ನೇ ಏಕದಿನ ಶತಕಗಳನ್ನು ಬಾರಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಕೊಹ್ಲಿಯ ಸಾಧನೆಗೆ ಇಡೀ ಕ್ರಿಕೆಟ್ ಜಗತ್ತೇ ತಲೆಬಾಗಿದವಿರಾಟ್ ಕೊಹ್ಲಿ ತಮ್ಮ 50 ನೇ ಶತಕವನ್ನು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಆಚರಿಸಿದರು, ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ODI ಶತಕಗಳ ದಾಖಲೆಯನ್ನು ಮುರಿದರು.