ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಟ್ರೋಫಿಯೊಂದಿಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಫೋಟೋ ಶೂಟ್.
ಅಕ್ಟೋಬರ್ 5 ರಂದು ಆರಂಭವಾಗಿದ್ದ ಐಸಿಸಿ ವಿಶ್ವಕಪ್ ಟೂರ್ನಿಗೆ ಇಂದು ತೆರೆಬೀಳುತ್ತಿದೆ. ಐಸಿಸಿ ಪ್ರೋಟೋಕಾಲ್ ಪ್ರಕಾರ ಫೈನಲ್ ಪಂದ್ಯದ ಉಭಯ ತಂಡಗಳ ನಾಯಕರು ಪಂದ್ಯ ಆರಂಭಕ್ಕೂ ಮುನ್ನ ಫೋಟೋಶೂಟ್ ಮಾಡಬೇಕು. ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಫೋಟೋ ಶೂಟ್ ಮಾಡಿಸಿಕಗುಜರಾತ್ ನ ಗಾಂಧಿನಗರದಲ್ಲಿರುವ ಅದಲಾಜ್ ಐತಿಹಾಸಿಕ ಸ್ಥಳದ ಮೆಟ್ಟಿಲುಗಳಲ್ಲಿ ಫೋಟೋಶೂಟ್ ಮಾಡಲಾಗಿದೆ. ಟ್ರೋಫಿ ಜೊತೆ ನಾಯಕರ ಫೋಟೋ ಶೂಟ್ಫೋಟೋಶೂಟ್ ಸುಮಾರು 30 ನಿಮಿಷಗಳ ಕಾಲ ನಡೆಯಿತು. ಗಾಂಧಿನಗರ ಪೊಲೀಸರು ಬೆಳಗ್ಗೆ 10 ಗಂಟೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.ಅದಲಾಜ್ ಸ್ಟೆಪ್ ವೆಲ್ ಅಥವಾ ರುಡಾಬಾಯಿ ಸ್ಟೆಪ್ ವೆಲ್ ಎಂಬುದು ಗುಜರಾತ್ ನ ಗಾಂಧಿನಗರಕ್ಕೆ ಸಮೀಪ ಇರುವ ಸಣ್ಣ ಪಟ್ಟಣ. ಇದು ಮೆಟ್ಟಿಲುಗಳ ಬಾವಿಯಾಗಿದೆ. 1498ರಲ್ಲಿ ರಾಣಾ ವೀರ್ ಸಿಂಗ್ ನೆನಪಿಗಾಗಿ ಅವರ ಪತ್ನಿ ರಾಣಾ ರುದಾದೇವಿ ನಿರ್ಮಿಸಿದರು ಎಂದು ಇತಿಹಾಸದಿಂದ ತಿಳಿಯುತ್ತದೆ.