ನೋಟಿಸ್ ನಂತರ ಅನರ್ಹತೆ ಕ್ರಮ: ಡಿಎಚ್ಚೆಸ್
ಬೆಂಗಳೂರು: ವಿಧಾನ ಪರಿಷತ್ನ ಐವರು ಸದಸ್ಯರ ಅನರ್ಹತೆ ಕುರಿತ ದೂರಿನ ಬಗ್ಗೆ ನಿಯಮಾವಳಿಯಡಿ ನೋಟಿಸ್ ಜಾರಿ ಮಾಡಿಯೇ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದ್ದಾರೆ. ಐವರು ಶಾಸಕರ ಅನರ್ಹತೆ ಕುರಿತ ದೂರು ಬಂದ ಸಂದರ್ಭದಲ್ಲಿ ನಾನು ಪ್ರವಾಸದಲ್ಲಿದ್ದೆ. ಶನಿವಾರ ಬೆಳಗ್ಗೆ ದೂರನ್ನು ನೋಡಿದ್ದು, ಇನ್ನೂ ಅಧ್ಯಯನ ಮಾಡಿಲ್ಲ. ಆದ್ದರಿಂದ ಅದನ್ನು ಅಧ್ಯಯನ ಮಾಡಿದ ಬಳಿಕವೇ ಮುಂದಿನ ನಡೆ ನಿರ್ಧರಿಸುವುದಾಗಿ ತಿಳಿಸಿದರು.
ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನ ಕುರಿತಂತೆ ವಿವರಿಸಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಭಾಪತಿಗಳಿಗೆ ಅವರದ್ದೇ ಆದ ಮಿತಿಗಳಿವೆ. ಮೇಲಾಗಿ ಕಾನೂನು, ನಿಯಮ ಮತ್ತು ಸಂವಿಧಾನದ ವ್ಯಾಪ್ತಿಯಲ್ಲಿ ಅವರು ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಶಾಸಕರಾದ ಅಶ್ವತ್ಥನಾರಾಯಣ ಮತ್ತು ಸೋಮಣ್ಣ ಬೇವಿನಮರದ ಅವರು ಬಿ.ಜೆ. ಪುಟ್ಟಸ್ವಾಮಿ, ಡಾ. ಮುಮ್ತಾಜ್ ಅಲಿಖಾನ್, ಭಾರತಿ ಶೆಟ್ಟಿ, ಶಿವರಾಜ್ ಸಜ್ಜನ್ ಮತ್ತು ಮೋಹನ್ ಲಿಂಬಿಕಾಯಿ ಅವರನ್ನು ಅನರ್ಹಗೊಳಿಸುವಂತೆ ದೂರು ನೀಡಿದ್ದಾರೆ. ಈ ದೂರು ಪರಿಶೀಲಿಸಿದ ಬಳಿಕ ನೋಟಿಸ್ ಜಾರಿ ಮಾಡಿ ಸಂಬಂಧಪಟ್ಟ ಶಾಸಕರ ಅಭಿಪ್ರಾಯ ಕೇಳಲಾಗುವುದು ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.