ಸಹಾಯ ಮಾಡಿದೆ ಎಂದರೆ ಏನರ್ಥ?: ಎಚ್ಡಿಕೆ
ಮಂಗಳೂರು: 'ಗಣಿಗಾರಿಕೆ ತಾನು ಮಾಡಿಲ್ಲ, ಆದರೆ, ಸ್ನೇಹಿತರಿಗೆ ಸಹಕರಿಸಿದ್ದೆ ಎಂದರೆ ಏನರ್ಥ? ಪರೋಕ್ಷವಾಗಿ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಂತೆಯೇ' -ಹೀಗೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರ 'ಗಣಿಗಾರಿಕೆ ನಾನು ಮಾಡಿಲ್ಲ' ಎಂಬ ಹೇಳಿಕೆಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿ, ಈ ಹಿಂದೆ ಡಿ.ಕೆ. ಶಿವಕುಮಾರ್, ರಮೇಶ್, ರೆಡ್ಡಿಗಳ ಜತೆ ಸೇರಿ ತನ್ನ ವಿರುದ್ಧ 150 ಕೋಟಿ ಅಕ್ರಮ ಗಣಿಗಾರಿಕೆ ಸಂಪಾದಿಸಿದ ಆರೋಪ ಮಾಡಿದ್ದರು. ಅದನ್ನು ಸಿಡಿ ಮಾಡಿ ಬಿಡುಗಡೆಗೆ ಯತ್ನಿಸಿದ್ದರು. ಈಗ ಅಂಥವರ ವಿರುದ್ಧವೇ ಸುಪ್ರೀಂ ಸಿಇಸಿ ತನಿಖೆಗೆ ಆದೇಶಿಸಿದೆ ಎಂದರು. ತಾನು ಹಿರೇಮಠ ಜತೆ ಸೇರಿ ಕ್ಷುಲ್ಲಕ ಚಿತಾವಣೆ ಮಾಡಿದ್ದೇನೆ ಎನ್ನುವುದು ಡಿ.ಕೆ.ಶಿವಕುಮಾರ್ ಆರೋಪ. ತಾನು ಹಿರೇಮಠರನ್ನು ನೋಡಿಲ್ಲ, ಡಿಕೆಶಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.