ಬಿಎಸ್ವೈಗೆ ಮತ್ತೊಂದು ಸಂಕಷ್ಟ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶನಿವಾರ ಲೋಕಾಯುಕ್ತ ನ್ಯಾಯಾಲಯದಲ್ಲಿ 2010ರಲ್ಲಿ ನಡೆದ ಡಿನೋಟಿಫಿಕೇಶನ್ ಸಂಬಂಧ ವ್ಯಕ್ತಿಯೊಬ್ಬರು ಖಾಸಗಿ ದೂರು ದಾಖಲಿಸಿದ್ದಾರೆ. ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿಯಲ್ಲಿ ಐದು ಎಕರೆ ಜಮೀನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಹುಣಸೂರು ಕೆ.ಚಂದ್ರಶೇಖರ್ ಎಂಬುವವರು ಖಾಸಗಿ ದೂರು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ತುಮಕೂರು ಸಂಸದ ಬಸವರಾಜ್, ನಿಪ್ಪಾಣಿ ಶಾಸಕ ಕಾಕಾ ಸಾಹೇಬ್ ಪಾಂಡುರಂಗ ಪಾಟೀಲ್ ಸೇರಿ ಐವರು ಆರೋಪಿಗಳು. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಫೆ.19ಕ್ಕೆ ಮುಂದೂಡಿದ್ದಾರೆ.