ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಜೆಡಿಎಸ್‌ನತ್ತ ಡೀವಿ: ಧನಂಜಯ ಕುಮಾರ್

Parashurama
Updated On : 17 Feb 2013, 9:42 am

ಮಂಗಳೂರು/ಉಡುಪಿ: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಜೆಡಿಎಸ್‌ಗೆ ಹೋಗಲು ಸಿದ್ಧತೆ ನಡೆಸುತ್ತಿರುವುದು ಸಾಬೀತಾಗಿದೆ ಎಂದು ಕೆಜೆಪಿ ಮುಖಂಡ ಧನಂಜಯ ಕುಮಾರ್ ಹೇಳಿದರು.  ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬಿಜೆಪಿ ಚುನಾವಣಾ ಸಿದ್ಧತಾ ಸಭೆಗೆ ಅವರು ಗೈರಾಗಿರುವುದನ್ನು ಭಾನುವಾರ ಉಭಯ ನಗರಗಳಲ್ಲಿ ನಡೆಸಿದ ಸುದ್ದಿಗೋಷ್ಠಿಗಳಲ್ಲಿ ಉಲ್ಲೇಖಿಸಿ, ಬಿಜೆಪಿಯಲ್ಲಿ ಸದಾನಂದಗೌಡರು ಮೂಲೆಗುಂಪಾಗಿದ್ದಾರೆ ಎಂಬುದನ್ನು ಪುನರುಚ್ಛರಿಸಿದರು.
ಎಂದೋ ಹೇಳಿದ ಈ ವಿಚಾರ ಇಂದು ಸಾಬೀತಾಗಿದೆ. ಸದಾನಂದಗೌಡ ಬಿಜೆಪಿಯಲ್ಲಿ ಮೂಲೆಗುಂಪಾಗಲು ಕೇಂದ್ರ ನಾಯಕ ಅನಂತಕುಮಾರ್ ಅವರೇ ಕಾರಣ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಯಾರ್ಯಾರಿದ್ದಾರೋ ಅವರನ್ನೆಲ್ಲ ಅನಂತಕುಮಾರ್ ಮೂಲೆ ಗುಂಪು ಮಾಡುತ್ತಿದ್ದಾರೆ. ಮುಂದಿನ ಸರದಿ ಸಿಎಂ ಜಗದೀಶ್ ಶೆಟ್ಟರದ್ದು ಎಂದರು. ಸದಾನಂದಗೌಡರು ಈಗಾಗಲೇ ಸುಳ್ಯದಲ್ಲಿರುವ ತಮ್ಮ ಬೆಂಬಲಿಗರನ್ನು ಜೆಡಿಎಸ್‌ಗೆ ಕಳುಹಿಸಿದ್ದು, ಅವರೊಬ್ಬರು ಹೋಗುವುದು ಬಾಕಿ ಇದೆ. ಒಂದು ವೇಳೆ ಜೆಡಿಎಸ್‌ನಲ್ಲಿ ಅವರಿಗೆ ಕುರ್ಚಿ ಸಿಗದಿದ್ದರೆ ಬಿಜೆಪಿಯಿಂದಲೇ ಒಂದು ಕುರ್ಚಿಯನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ, ಇದರ ಲಾಭೆ ಕೆಜೆಪಿಗೆ ಆಗಲಿದೆ ಎಂದರು.
ಹಾಲಾಡಿ ಅವರೇ ಬಾಯಿಬಿಡಿ: ಶಾಸಕ ಸ್ಥಾನ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟರು ಮುಂದಿನ ರಾಜಕೀಯ ನಡೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ರಾಜಕೀಯವಾಗಿ ಒಳ್ಳೆಯದಲ್ಲ. ಅವರು ಮೌನವಾಗಿರುವುದನ್ನು ನೋಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಸಂಶಯ ಉಂಟಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement