'ರಾಜ್ಯದಲ್ಲಿ ಅಸ್ಥಿರತೆ ರಾಜಕೀಯ'
ಕೊಪ್ಪಳ: ರಾಜ್ಯ ರಾಜಕೀಯ ಅಸ್ಥಿರತೆಯಿಂದ ಕೂಡಿದ್ದು, ಈ ಸರ್ಕಾರ ಪತನವಾದ ಬಳಿಕ ಮುಂದಿನ ಸರ್ಕಾರ ರಚನೆಯ ವೇಳೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳುತ್ತೇನೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ತಿಳಿಸಿದರು. ಕೊಪ್ಪಳ ನಗರದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂಥ ಘಟನೆಗಳು ನಡೆಯುತ್ತಿವೆ. ಇದರಿಂದ ಪ್ರಕೃತಿ ವಿಕೋಪವಾಗಲಿದೆ. ಅಲ್ಲದೇ, ಮುಂದಿನ ದಿನಗಳು ಭಾರಿ ಆತಂಕದಿಂದ ಕೂಡಿವೆ ಎಂದರು.