'ಹಣದಾಸೆ ಇದ್ದವರು ಕೆಜೆಪಿ ಸೇರ್ತಾರೆ'
ಧಾರವಾಡ: ರಾಜ್ಯದಲ್ಲಿ ಕೆಜೆಪಿಗೆ ಭವಿಷ್ಯವಿಲ್ಲ. ಆದರೂ ಹಣದ ಆಸೆ ಇರುವ ರಾಜಕೀಯ ಮುಖಂಡರು ಕೆಜೆಪಿ ಬೆನ್ನು ಹತ್ತುತ್ತಿದ್ದಾರೆಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ತಾಲೂಕಿನ ನರೇಂದ್ರ ಗ್ರಾಮದಲ್ಲಿ ಭಾನುವಾರ ನಡೆದ ಜೆಡಿಎಸ್ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭೆ ಮಾತ್ರವಲ್ಲದೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದರು.