ಮಳೆ ಹುಡುಗಿ ಹೊರಟಳು ಬಿಎಸ್ಸಾರ್‌ನತ್ತ
ಜೆಡಿಎಸ್‌ನ ಹೊರೆ ಹೊತ್ತು, ಕೆಜೆಪಿಯಲ್ಲಿ ತೆಂಗಿನಕಾಯಿ ಒಡೆದು ಇದೀಗ ಬಿಎಸ್ಸಾರ್ ಫ್ಯಾನ್ ಕೆಳಗೆ ಕೂರಲು ಸಜ್ಜಾಗಿದ್ದಾರೆ ಮಳೆ ಹುಡುಗಿ...
ಬಳ್ಳಾರಿ: ಜೆಡಿಎಸ್‌ನ ಹೊರೆ ಹೊತ್ತು, ಕೆಜೆಪಿಯಲ್ಲಿ ತೆಂಗಿನಕಾಯಿ ಒಡೆದು ಇದೀಗ ಬಿಎಸ್ಸಾರ್ ಫ್ಯಾನ್ ಕೆಳಗೆ ಕೂರಲು ಸಜ್ಜಾಗಿದ್ದಾರೆ ಮಳೆ ಹುಡುಗಿ ಪೂಜಾ ಗಾಂಧಿ! ಬಿಎಸ್ಸಾರ್ ಪಕ್ಷ ಸೇರ್ಪಡೆ ಕುರಿತಾಗಿ ಪೂಜಾ ಗಾಂಧಿ ಬಿಎಸ್ಸಾರ್ ಸಂಸ್ಥಾಪಕ ಬಿ. ಶ್ರೀರಾಮುಲು ಜತೆ ಬಳ್ಳಾರಿಯಲ್ಲಿ ಮಂಗಳವಾರ ಮಾತುಕತೆ ನಡೆಸಿದ್ದು, ಶ್ರಮಿಕರ ಪಕ್ಷಕ್ಕೆ ಮಳೆ ಹುಡುಗಿ ಎಂಟ್ರಿ ಕುರಿತು ಇನ್ನೆರಡು ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ. ಕೇವಲ ರಾಜಕಾರಣಿಗಳಿಗೆ ಮಾತ್ರ ಸೀಮಿತವಾಗಿದ್ದ ಪಕ್ಷಾಂತರ ಈಗ ಸಿನಿಮಾ ನಟಿಯರಿಗೂ ಅಂಟಿಕೊಂಡಿದೆ. ಜೆಡಿಎಸ್ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪೂಜಾ, ಅಲ್ಲಿ ಬೇಸರವಾಯ್ತು ಎಂದು ಕೆಜೆಪಿಗೆ ಹೋಗಿದ್ದರು. ಇದೀಗ ಬಿಎಸ್ಸಾರ್‌ಗೆ ಸೇರ್ತಾರೆ ಎಂಬ ಸುದ್ದಿ ಹರಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಂಗಳವಾರ ಬಳ್ಳಾರಿಯ ಹೊರವಲಯದ 'ರುಕ್ಮಿಣಿ ಅವೆನ್ಯೂ'ನಲ್ಲಿ ಬಿ. ಶ್ರೀರಾಮುಲು ಅವರೊಂದಿಗೆ ಪೂಜಾ ಮಾತುಕತೆ ನಡೆಸಿದ್ದಾರೆ. ಬಳ್ಳಾರಿಗೆ ಮಂಗಳವಾರ ಆಗಮಿಸಿದ ಪೂಜಾ ಗಾಂಧಿಯನ್ನು ಮಾಧ್ಯಮದವರು ಮಾತನಾಡಿಸಿದಾಗ, ಹಂಪಿ ನೋಡಲು ಬಂದಿದ್ದೆ. ಶ್ರೀರಾಮುಲು ಊಟಕ್ಕೆ ಕರೆದಿದ್ದರಿಂದ ಇಲ್ಲಿ ಬಂದು ಬಿರಿಯಾನಿ ಊಟ ಮುಗಿಸಿಕೊಂಡು ಹೋಗುತ್ತಿದ್ದೇನೆ. ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಲಾಗಿದೆ. ಅವರು ಬಿಎಸ್ಸಾರ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಆದರೆ ತಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಇನ್ನೆರಡು ದಿನಗಳಲ್ಲಿ ತಮ್ಮ ನಿರ್ಧಾರ ಗೊತ್ತಾಗುತ್ತದೆ ಎಂದು ಹೇಳಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.