ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಬಹುಮತ ಸಾಬೀತಿಗೆ ಸಿದ್ಧ: ಶೆಟ್ಟರ್

Parashurama
Updated On : 30 Jan 2013, 11:43 am

ಬೆಂಗಳೂರು: ಸರ್ಕಾರ ಸುಭದ್ರವಾಗಿದೆ, ರಾಜ್ಯಪಾಲರು ಸೂಚಿಸಿದರೆ ಬಹುಮತ ಸಾಬೀತುಪಡಿಸಲೂ ಸಿದ್ಧ...
ಕೆಜೆಪಿ ಬೆಂಬಲಿತ 12 ಶಾಸಕರ ರಾಜಿನಾಮೆ ಅಂಗೀಕಾರವಾದ ಮೇಲೂ ಜಗದೀಶ್ ಶೆಟ್ಟರ್, ಸರ್ಕಾರದ ಅಭದ್ರತೆಯನ್ನು ಅಲ್ಲಗಳೆದಿದ್ದಾರೆ. ಅಲ್ಲದೆ, ಫೆಬ್ರವರಿ 4ರಿಂದ ವಿಧಾನಮಂಡಲ ಅಧಿವೇಶ ಆರಂಭವಾಗುತ್ತದೆ. ಫೆಬ್ರವರಿ 8ರಂದು ಬಜೆಟ್ ಮಂಡನೆಯಲ್ಲಿ ಯಾವುದೇ ಅನುಮಾನವಿಲ್ಲ. ಮುಂಗಡಪತ್ರವನ್ನು ನಾನೇ ಮಂಡಿಸುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಈಗಲೂ ಬಹುಮತ ಇದೆ. ರಾಜ್ಯಪಾಲರು ಸೂಚಿಸಿದರೆ ಬಹುಮತ ಸಾಬೀತಿಗೆ ಸಿದ್ಧ. ಎಲ್ಲ ಪರಿಸ್ಥಿತಿಯನ್ನೂ ನಿಭಾಯಿಸಲೂ ಸಜ್ಜಾಗಿದ್ದೇನೆ. ಇನ್ನಷ್ಟು ಶಾಸಕರು ರಾಜಿನಾಮೆ ನೀಡುವುದಿಲ್ಲ. ಪ್ರತಿಯೊಬ್ಬ ಶಾಸಕರೂ ನನ್ನ ಸಂಪರ್ಕದಲ್ಲಿದ್ದು, ತೊಂದರೆ ನೀಡುವುದಿಲ್ಲ ಎಂದು ಅವರೆಲ್ಲ ಹೇಳಿದ್ದಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಸರ್ಕಾರ ಉತ್ತಮವಾಗಿ ನಡೆಯುತ್ತಿರುವ ಸಂದರ್ಭದಲ್ಲಿ 12 ಶಾಸಕರು ಯಾರದ್ದೋ ಒತ್ತಡಕ್ಕೆ ಮಣಿದು ರಾಜಿನಾಮೆ ನೀಡಿ ಸರ್ಕಾರಕ್ಕೆ ತೊಂದರೆ ನೀಡಿದ್ದಾರೆ. ಇದು ಸರಿಯಲ್ಲ. ಈ ಶಾಸಕರಿಗೆ ಜನರೇ ಉತ್ತರ ನೀಡುತ್ತಾರೆ. ಅವರ ಕ್ಷೇತ್ರದ ಜನತೆಯನ್ನು ಅವರು ಎದುರಿಸಲು ಸಾಧ್ಯವಾಗುವುದಿಲ್ಲ ಎಂದು ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆ ವಿಸರ್ಜನೆ ಬಗ್ಗೆ ಪಕ್ಷದ ವರಿಷ್ಠರಿಂದ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ. ಆದರೆ ಪರಿಸ್ಥಿತಿಯ ಆಧಾರದ ಮೇರೆಗೆ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಿ ಎಂದು ವರಿಷ್ಠರು ಸೂಚಿಸಿದ್ದಾರೆ ಎಂದಷ್ಟೇ ಹೇಳುವ ಮೂಲಕ ವಿಧಾನಸಭೆ ವಿಸರ್ಜನೆ ಕುರಿತ ಪ್ರಶ್ನೆಗೆ ಅಸ್ಪಷ್ಟ ಉತ್ತರವನ್ನಷ್ಟೇ ನೀಡಿದರು.
ದುರುಪಯೋಗ ಇಲ್ಲ: ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿಲ್ಲ. ಶಾಸಕರ ರಾಜಿನಾಮೆಯನ್ನು ತಿಂಗಳುಗಟ್ಟಲೆ ಹಾಗೆಯೇ ಉಳಿಸಿಕೊಂಡ ಸಾಕಷ್ಟು ಉದಾಹರಣೆಗಳು ಬೇರೆ ರಾಜ್ಯಗಳಲ್ಲಿವೆ. ಆದರೆ, ನಮ್ಮ ಸ್ಪೀಕರ್ ಹಾಗೆ ಮಾಡದೆ ಜಂಟಲ್‌ಮನ್ ರೀತಿ ವರ್ತಿಸಿ ಎಲ್ಲರ ರಾಜಿನಾಮೆ ಅಂಗೀಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆಂಧ್ರಪ್ರದೇಶದ ಜಗನ್‌ಮೋಹನ್ ರೆಡ್ಡಿ ಸಂಸದ ಸ್ಥಾನಕ್ಕೆ ನೀಡಿರುವ ರಾಜಿನಾಮೆಯನ್ನು ಲೋಕಸಭಾ ಸ್ಪೀಕರ್ ಇನ್ನೂ ಅಂಗೀಕರಿಸಿಲ್ಲ. ಆದರೆ ನಮ್ಮ ಸ್ಪೀಕರ್ ಅವರು ವಿಧಾನಸಭಾಧ್ಯಕ್ಷರ ಹುದ್ದೆಗೆ ಧಕ್ಕೆಯಾಗದಂತೆ ನಡೆದುಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments