ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಏಳೇ ತಿಂಗಳಲ್ಲಿ ಕಾವೇರಿ, ಹಾವೇರಿ ಕದನ ಕಂಡೆ: ಜಗದೀಶ ಶೆಟ್ಟರ್

Parashurama
Updated On : 3 Mar 2013, 11:08 am

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ.3
ಒಬ್ಬ ಮುಖ್ಯಮಂತ್ರಿ ಐದು ವರ್ಷ ನಡೆಸಿದ ಆಡಳಿತದ ಅನುಭವವನ್ನು ನಾನು ಬರೀ ಏಳೇ ತಿಂಗಳಲ್ಲಿ ಕಂಡೆ. ಹಲವು ವಿವಾದಗಳ ಮಧ್ಯೆ ಕಾವೇರಿ-ಹಾವೇರಿ ವಿವಾದಗಳನ್ನೂ ಸಮರ್ಥವಾಗಿ ಎದುರಿಸಿ ನನಗೆ ಒಲಿದ ಒಂಭತ್ತು ತಿಂಗಳ ಮುಖ್ಯಮಂತ್ರಿಯ ಅವಧಿ ಪೂರ್ಣಗೊಳಿಸುತ್ತೇನೆ ಎಂದು ಸಿಎಂ  ಶೆಟ್ಟರ್ ಹೇಳಿದರು.
ಇಲ್ಲಿನ ಕಡಪಾ ಮೈದಾನದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಸಿಎಂ ಪಟ್ಟದಿಂದ ಇಳಿಸಲು ಹಲವಾರು ಪ್ರಯತ್ನ ನಡೆದವು. ಅನೇಕ ಬಿಜೆಪಿ ಶಾಸಕರಿಂದಲೂ ರಾಜಿನಾಮೆ ಸಲ್ಲಿಸುವಂತೆ ಮಾಡಿದರು. ಬಿಜೆಪಿ ವಿರುದ್ಧ ಹಾವೇರಿಯಲ್ಲಿ ಹೊಸ ಪಕ್ಷ ಹುಟ್ಟಿಕೊಂಡರೂ ಸಹ ಕಳೆದೆರಡು ದಿನ ಹಾವೇರಿ ಪ್ರವಾಸದಲ್ಲಿ ನನಗೆ ಸಿಕ್ಕ ಜನ ಬೆಂಬಲ ಅಚ್ಚರಿ ಮೂಡಿಸಿದೆ. ಆತ್ಮವಿಶ್ವಾಸ ಹಾಗೂ ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದು ಅರಿವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಆಡಳಿತಕ್ಕೆ ಅಡ್ಡಿ ಮಾಡಿದವರಿಗೆ ಈ ಬಾರಿಯ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು. ಉತ್ತಮ ಆಡಳಿತ ನೀಡಿ ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಗುಜರಾತಿನ ನರೇಂದ್ರ ಮೋದಿಯೇ ಮುಂದಿನ ಪ್ರಧಾನ ಮಂತ್ರಿ ಎಂದು ಬೆಜೆಪಿ ಮುಖಂಡರು ಸದ್ಯದಲ್ಲಿಯೇ ಘೋಷಿಸಲಿದ್ದಾರೆ ಎಂದರು.

ಗೂಟದ ಕಥೆ ಹೇಳಿದ ಸಂಸದ ಜೋಶಿ
ಒಂದೂರಲ್ಲಿ ಒಬ್ಬ ಇದ್ದ. ಆತನ ಜೀವಿತಾವಧಿಯಲ್ಲಿ ಊರಿಗೆ ಬರೀ ಕೆಟ್ಟ ಕೆಲಸಗಳನ್ನೇ ಮಾಡಿದ್ದ ಹೊರತೂ ಒಂದೂ ಉತ್ತಮ ಕೆಲಸ ಮಾಡಿರಲಿಲ್ಲ. ಸಾಯುವ ಕಾಲಕ್ಕೆ ಊರಿನ ಜನತೆಯನ್ನು ಕರೆಯಿಸಿ ಇಷ್ಟು ದಿನ ಬಹಳ ಪಾಪ ಮಾಡಿದ್ದೇನೆ. ನನ್ನ ಬಾಯಿಗೆ ಗೂಟ ಹೊಡೆಯಿರಿ, ನಾನು ಸಾಯುತ್ತೇನೆಂದು ಅಂಗಲಾಚಿ ಬೇಡಿಕೊಂಡು ಬಾಯಿಗೆ ಗೂಟ ಹೊಡಿಸಿಕೊಂಡು ಸತ್ತ. ದುರಂತದ ಸಂಗತಿ ಏನೆಂದರೆ, ಆತ ಸಾಯುವ ಮುಂಚೆಯೇ ಊರಿನ ಜನರು ನನ್ನ ಬಾಯಿಗೆ ಗೂಟ ಹೊಡೆದು ಕೊಂದಿದ್ದಾರೆಂದು ಪೊಲೀಸರಿಗೆ ದೂರು ನೀಡಿ ಬಂದಿದ್ದ. ಇದೇ ರೀತಿ ಬಿಜೆಪಿಯಲ್ಲಿ ಒಬ್ಬರಿದ್ದರು. ಅವರೀಗ ಪಕ್ಷದಿಂದ ಹೊರ ಹೋಗಿದ್ದಾರೆ. ಪಕ್ಷದಿಂದ ಹೊರ ಹೋದರೂ ತಮ್ಮ ಕೆಟ್ಟ ಕೆಲಸ ಬಿಡುತ್ತಿಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಂಸದ ಪ್ರಹ್ಲಾದ ಜೋಶಿ ಕಿಡಿಕಾರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments