ಹೆಲಿಪ್ಯಾಡಲ್ಲಿ ಸಿಎಂ ಸ್ವಾಗತಕ್ಕೂ ಕಾರ್ಯಕರ್ತರ ಬರ
ಸಿಎಂ ಶೆಟ್ಟರ್ ಬೆಳಗ್ಗೆ 9.40ಕ್ಕೆ ಹೆಲಿಕಾಪ್ಟರ್ನಲ್ಲಿ ಹೆಲಿಪ್ಯಾಡ್ಗೆ ಬಂದಿಳಿದಾಗ ಕಾರ್ಯಕರ್ತರು ಕೈಬೆರಳೆಣಿಕೆಯಲ್ಲಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಆದಿಯಾಗಿ ಅನೇಕರು ಹೆಲಿಕಾಪ್ಟರ್ ಬಂದಾದ ನಂತರ ಒಬ್ಬೊಬ್ಬರಾಗಿ ಬಂದರು.
ಜಿಲ್ಲಾಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್, ಎಂಎಲ್ಸಿ ನಮೋಶಿ ಮೊದಲಾದ ಹಿರಿಯರು ಸ್ವಾಗತಕ್ಕಿರಲಿಲ್ಲ. ಈ ಸಂಗತಿ ಸೇರಿದ್ದ ಎಲ್ಲರ ಗಮನಕ್ಕೂ ಬಂತು. ಪ್ರತಿ ಬಾರಿ ಸಿಎಂ ಬರುವಾಗ ಹೆಲಿಪ್ಯಾಡಿನಲ್ಲಿ ಶಾಮಿಯಾನ ವ್ಯವಸ್ಥೆ, ನಾಲ್ಕಾರು ಕುರ್ಚಿಗಳು ಇರುತ್ತಿದ್ದವು. ಈ ಬಾರಿಯ ಶೆಟ್ಟರ್ ಭೇಟಿಯಲ್ಲಿ ಇದಾವುದೂ ಕಾಣಸಿಗಲಿಲ್ಲ. ಸ್ಥಳೀಯವಾಗಿಯೇ ಲಭ್ಯವಿದ್ದಂತಹ ಬಿಜೆಪಿ ನಾಯಕರಲ್ಲಿ ಅನೇಕರು ಹೆಲಿಪ್ಯಾಡಲ್ಲಿ ಇರಲಿಲ್ಲ. ಹೀಗಾಗಿ ಶೆಟ್ಟರ್ ಗುಲ್ಬರ್ಗ ಭೇಟಿ, ಪ್ರಚಾರ ಸ್ಥಳೀಯ ಸಂಸ್ಥೆಗಳ ಅಭ್ಯರ್ಥಿಗಳ ಚುನಾವಣಾ ಫಲಿತಾಂಶದ ಮೇಲೆ ಅದ್ಯಾವ ರೀತಿಯ ಪ್ರಭಾವ ಬೀರುವುದೋ... ಕಾಲವೇ ಉತ್ತರಿಸಬೇಕಷ್ಟೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.