ರಾಜಕೀಯ

ಅಪ್ಪ ಬಿಜೆಪಿ, ಮಗ ಕೆಜೆಪಿ!

ಕೊಪ್ಪಳದಾಗ ನಮ್ ಪಾರ್ಲಿಮೆಂಟ್ ಮೆಂಬರ್ ಆದಾರಲ್ರಿ, ಅದಾರಿ ನಮ್ ಶಿವರಾಮಗೌಡ್ರು. ಅವ್ರು ಮನಿ ಮುಂದ್ಲಾಗಡೆ ನಿಂತ್ 'ಕಮಲ ಪಾರ್ಟಿ ಹಿಂಗ್ ಬರ್ರಿ, ಕಾಯಿ ಪಾರ್ಟಿ ಹಂಗ್ ಬರ್ರಿ' ಅಂತ ಕರ್ಯಾಕತ್ತಿದ್ರು.
'ಎದಕ್ರೀ ಗೌಡ್ರೆ, ಹಿಂಗ್ ಕರ್ಯಾಕತ್ತೀರಿ, ನಿವೇನರ ಬಿಎಂಟಿಸಿ ಬಸ್ಸಿನಾಗ ಕಂಡಕ್ಟರ್ ಆಗಲಿಕ್ಕ ವೊಂಟೀರೇನು?' ಅಂತ ಜನ ಕೇಳಕತ್ತಿದ್ರು.
'ಅದು ಹಂಗಲ್ರೀ, ನಮ್ ಮನಿವೊಳ್ಗ ಟೂ ಪಾರ್ಟಿ ಸಿಸ್ಟಂ ಐತಿ ನೋಡ್ರಪ. ನಾ ಕಮಲ ಪಕ್ಷದಾಗ ಅದೀನಿ. ನನ್ನಾವ, ಅದ ನನ್ಮಗ ಶಿವರಾಜ ಬ್ಯಾಡ ಬ್ಯಾಡ ಅಂದ್ರೂ ಯಡೂರಪ್ನೋರು ಪಾರ್ಟಿ, ಅದಾ ತೆಂಗಿನಕಾಯಿ ಪಕ್ಷದಾಗ ಆದಾನ. ಅಂವಾ ನನ್ನೂ ಕರದ. ನಾ ಒಲ್ಲೆ ಅಂದ್ನಪ್ಪ. ನೀ ವೋಬ್ಯಾಡ, ಮನಿ ಒಡೀಬ್ಯಾಡ ಮಗನಾ' ಅಂದ್ರೂ ಕೇಳವಲ್ಲ ಅವ'.
'ಅವ ಹೋಗಿದ್ದಕ್ಕ ನನಗ ಬ್ಯಾಸ್ರ ಇಲ್ಲ ನೋಡ್ರಲ, ಅದ್ರ ಒಂದು ಪ್ರಾಬ್ಲಮ್ ಆಗೈತಿ. ನನ್ನ ನೋಡಕ್ಕ ಬರೋ ಮಂದೀನ ಅವ ಕರ್ಕಂಡು ವೋಗ್ತನ. ಆದಕ್ಕಾ ನಾನು ಬಾಗ್ಲಾಗ ನಿಂತನಿ. ಕಮಲ ಪಕ್ಷದೋರು ಹಿಂಗ್ ಬರ್ಲಿ, ಕಾಯಿ ಪಕ್ಷದೋರು ಹಂಗ್ ಬರ್ರಿ ಅಂತ ಹೇಳಕತ್ತೀನಿ. ಇದಾ ನೋಡ್ರಪ್ಪ ಹಕೀಕತ್ತ' ಅಂದ್ರು ಶಿವರಾಮೇಗೌಡ್ರು.
'ಛಲೋ ಅತು ಬಿಡ್ರಲಾ. ಇಲ್ಲಂದ್ರ, ನಿಮ್ ಮಂದೀನ ನಿಮ್ ಮಗ ಕರ್ಕಂಡ್ವಾದ ಅಂದ್ರ ನಿಮ್ ಹಿಂದ್ ಬರಾಕ  ಮಂದಿ ಇರಂಗಿಲ್ಲ ಹೌದಲ್ರೀ' ಅಂದ್ರು ಜನ. 'ಅದ್ರೂ ನಮ್ ತಲ್ಯಾಗ ಒಂದು ಹುಳ ಹೊಕ್ಕೈತಿ ಸಾವ್ಕಾರ್ರ. ನೀವ್ಯಾಕ ಯಡಿಯರಪ್ನೋರೂ ಜೋಡಿ ಹೋಗಿಲ್ಲ. ಹೋದ್ರ ನಿಮ್ ಎಂಪಿ ಸೀಟ ಕಿತ್ಕಂಡು ಹೋಕ್ಕತಿ ಅಂತ ಅಲ್ಲೇನ್ರೀ ಧಣೇರ' ಅಂದ್ರು ಜನ.
'ಇದ್ಯಾವ್ ಸುಡಗಾಡು ಸೀಟೋ ನನ್ನಪ್ಪ. ನಾ ಹಂಗೆಲ್ಲಾ ಉಂಡು ಮನೀಗಿ ದ್ರೋಹ ಬಗೆಯಾವ ಅಲ್ರೀ' ಅಂದ್ರು ಶಿವರಾಮೇಗೌಡ್ರು. 'ಗೊತ್ತೈತ್ರಿ, ನಮಗ ಎಲ್ಲ ಗೊತ್ತೈತಿ. ನಿಮ್ ಮಗ ಕಮಲ ಪಕ್ಷದ ಗ್ವಾಡಿ ಹಾರಂಗ ನೀವ ಮಾಡೀರಿ. ಎಲೆಕ್ಷನ್ ವೊಳ್ಗ ಕಾಯಿ ಪಾರ್ಟಿ ಪವರ್ ಹಿಡೀತು ಅಂದ್ರ ಮಗನಿಗೆ ಛಲೋ ಆಗ್ತೈತಿ, ಬಿಜೆಪಿ ಬಂದ್ರ ನಿಮಗ ಛಲೋ ಆಗ್ತೈತಿ ಅಂತ ಐಡಿಯಾ ಅಲ್ಲೇನ್ರೀ? ಹೆಂಗಾರ ಅಗ್ಲಿ ಬಿಡಿ ಸಾಹೇಬ್ರ ಅಪ್ಪ ಬಿಜೆಪಿ, ಮಗ ಕೆಜೆಪಿ ಹೌದಿಲ್ಲೋ?' ಅಂದ್ರು ಅದೇ ಜನ. ಪಾಪ, ಶಿವರಾಮಗೌಡ್ರು ಸುಸ್ತೋ ಸುಸ್ತು!

- ಮಿರ್ಚಿವಾಲಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!