ಹೂವಿನಹಡಗಲಿಯಲ್ಲಿ ಗೆದ್ದ ಅಭ್ಯರ್ಥಿ ಪಕ್ಷ ಅಧಿಕಾರ ಹಿಡಿಯೋದು ಖಚಿತ! ಇದು ನಂಬಿದರೆ ನಂಬಿ ಬಿಟ್ಟರೆ ಬಿಡಿ ಎಂಬ ವಿಷಯವಲ್ಲ. ಇದಕ್ಕೆ 1952ರಿಂದ 2008ರವರೆಗಿನ ದಾಖಲೆಗಳಿವೆ. 1952ರಲ್ಲಿ ಇಜಾರಿ ಶಿರಸಪ್ಪ (ಕಾಂಗ್ರೆಸ್), 1957ರಲ್ಲಿ ಮ.ಮ. ಪಾಟೀಲ್ (ಕಾಂಗ್ರೆಸ್), 1962ರಲ್ಲಿ ಅಂಗಡಿ ಚನ್ನಬಸಪ್ಪ (ಕಾಂಗ್ರೆಸ್), 1967 ಎನ್.ಎಂ.ಕೆ. ಸೋಗಿ (ಕಾಂಗ್ರೆಸ್), 1972ರಲ್ಲಿ ಸಿ.ಅದಾನಂದಪ್ಪ (ಕಾಂಗ್ರೆಸ್), 1978ರಲ್ಲಿ ಕೋಗಳಿ ಕರಿಬಸವನಗೌಡ (ಕಾಂಗ್ರೆಸ್), 1983ರಲ್ಲಿ ಎಂ.ಪಿ. ಪ್ರಕಾಶ್ (ಜನತಾ ಪಕ್ಷ), 1985ರಲ್ಲಿ ಎಂ.ಪಿ. ಪ್ರಕಾಶ್ (ಜನತಾ ಪಕ್ಷ), 1989ರಲ್ಲಿ ಈ.ಟಿ.ಶಂಭುನಾಥ (ಕಾಂಗ್ರೆಸ್), 1994ರಲ್ಲಿ ಎಂ.ಪಿ.ಪ್ರಕಾಶ್ (ಜನತಾದಳ), 1999ರಲ್ಲಿ ನಂದಿಹಳ್ಳಿ ಹಾಲಪ್ಪ (ಕಾಂಗ್ರೆಸ್), 2004ರಲ್ಲಿ ಎಂ.ಪಿ.ಪ್ರಕಾಶ (ಜೆಡಿಎಸ್- ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ), 2008ರಲ್ಲಿ ಬಿ. ಚಂದ್ರನಾಯ್ಕ (ಬಿಜೆಪಿ) ಗೆಲವು ಸಾಧಿಸಿದ್ದರು. ಆಗ ಗೆದ್ದ ಅಭ್ಯರ್ಥಿಗಳ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಬಾರಿ ಯಾರು ಗೆಲ್ಲುತ್ತಾರೆ ಎಂಬುದೇ ಕುತೂಹಲ!