ರಾಜಕೀಯ

ನರೇಂದ್ರ ಮೋದಿ ಪರಿವರ್ತನೆಗೆ ನಾಂದಿ ಎಂಬುದು ಕೇವಲ ಭ್ರಮೆ

ಮೈಸೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿರುವುದು ದೊಡ್ಡ ಪರಿವರ್ತನೆಗೆ ನಾಂದಿಯಾಗಲಿದೆ ಎಂಬುದು ಕೇವಲ ಭ್ರಮೆ. ಈಗಾಗಲೇ ಮೋದಿ ಅವರು ಪ್ರಧಾನಿ ಆಗೋದ್ರು ಎಂದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ದೇಶದ ಜನರಲ್ಲಿ ಭ್ರಮೆ ಹುಟ್ಟಿಸುತ್ತಿವೆ ಎಂದು ವಿಶ್ವನಾಥ್ ಕಿಡಿ ಕಾರಿದರು.
ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ವಿಶ್ವನಾಥ್, 'ಕಾಂಗ್ರೆಸ್ ಕಾರ್ಯಕ್ರಮ ಆಧಾರಿತ ಪಕ್ಷ. ಆದರೆ, ಬಿಜೆಪಿ ಯಾವ ಕಾರ್ಯಕ್ರಮ ಕೊಡುತ್ತದೆ? ನರೇಂದ್ರ ಮೋದಿ ಅವರಿಂದ ಬಡವರಿಗೆ ಮನೆ, ನಿವೇಶನ, ಶಾಲೆ, ಚಿಕಿತ್ಸೆ, ಸುಭದ್ರ ಹಾಗೂ ಶಾಂತಿ, ಸಮಾಧಾನಕರ ಆಡಳಿತ ನೀಡಲು ಸಾಧ್ಯವೇ' ಎಂದು ಅವರು ಪ್ರಶ್ನಿಸಿದರು. ಬಿಜೆಪಿಗೆ ಯಾರ ಬಗ್ಗೆಯೂ ಗೌರವ ಇಲ್ಲ. ಮುತ್ಸದ್ಧಿ ನಾಯಕ ಎಲ್.ಕೆ. ಆಡ್ವಾಣಿ ಅವರಿಗೆ ಬೆಲೆ ನೀಡುತ್ತಿಲ್ಲ. ಮೂಲೆಗುಂಪು ಮಾಡಿದ್ದಾರೆ.
ಅಲ್ಲಿ ಕೋಮು ಸೌಹಾರ್ದಕ್ಕೂ ಬೆಲೆ ಇಲ್ಲ. ಈ ಹಿನ್ನೆಲೆಯಲ್ಲಿ 2014ರ ಲೋಕಸಭಾ ಚುನಾವಣೆ ಐಕ್ಯತೆ, ಜಾತ್ಯತೀತತೆ, ಬಡವರು, ರೈತರ ಸಮಸ್ಯೆಗಳ ಸ್ಪಂದಿಸುವವರ ಆಧಾರದ ಮೇಲೆ ನಡೆಯುತ್ತದೆ. ಭಾರತ ಅಚಲವಾಗಿರಬೇಕು. ಅಖಂಡವಾಗಿರಬೇಕು ಎಂದು ಜನತೆ ಬಯಸುತ್ತಾರೆ ಎಂದು ವಿಶ್ವನಾಥ್ ಹೇಳಿದರು. ಬಿಜೆಪಿಯತ್ತ ಮುಖ ಮಾಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿಲುವಿನ ಬಗ್ಗೆಯೂ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಬದಲಿಗೆ ಬಿಜೆಪಿ ಸೇರಿ ಮಜಾ ಮಾಡ್ಲಿ ಬಿಡಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!