ಬಿಬಿಎಂಪಿ 
ರಾಜಕೀಯ

ಸದ್ಯಕ್ಕೆ ಕದನ ವಿರಾಮ

ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಬಿಬಿಎಂಪಿ ವಿಭಜನೆಯ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕಕ್ಕೆ ಗುರುವಾರವೂ ಮುಕ್ತಿ ಸಿಗಲಿಲ್ಲ...

ವಿಧಾನಪರಿಷತ್ತು: ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಬಿಬಿಎಂಪಿ ವಿಭಜನೆಯ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕಕ್ಕೆ ಗುರುವಾರವೂ ಮುಕ್ತಿ ಸಿಗಲಿಲ್ಲ. ಪ್ರತಿಪಕ್ಷಗಳು ಗುರುವಾರ ಪ್ರಯೋಗಿಸಿದ ಸದನ ಪರಿಶೀಲನಾ ಸಮಿತಿ ಅಸ್ತ್ರ ನಿಗದಿತ ಗುರಿ ತಲುಪಿದ್ದು, ವಿಧೇಯಕ ಸೋಮವಾರದವರೆಗೂ ಪರಿಷತ್‍ನ `ಕೋಲ್ಡ್ ಸ್ಟೋರೇಜ್'ಗೆ ಸೇರಿದೆ. ಇದರೊಂದಿಗೆ ಒಂದೇ ದಿನದ ಅ„ವೇಶನ ಕರೆದು ಎಲ್ಲವನ್ನೂ ಮುಗಿಸುವ ತರಾತುರಿಯಲ್ಲಿದ್ದ ಸರಕಾರಕ್ಕೆ ಮತ್ತೆ ಹಿನ್ನಡೆಯಾದಂತಾಗಿದ್ದು, ಅಧಿವೇಶನ ಸೋಮವಾರ ಮೂರನೇ ದಿನಕ್ಕೆ ಕಾಲಿರಿಸಲಿದೆ.
ವಿಧಾನಸಭೆಯಲ್ಲಿ ಅಂಗೀಕೃತ ವಿಧೇಯಕಕ್ಕೆ ಮೇಲ್ಮನೆ ಇಷ್ಟೊತ್ತಿಗಾಗಲೇ ಒಪ್ಪಿಗೆ ಸೂಚಿಸಬೇಕಿತ್ತು. ಇಲ್ಲವೇ ಧ್ವನಿ ಮತದ ಮೂಲಕ ಸೋಲಿಸಿ ವಾಪಸ್ ಕಳುಹಿಸಬೇಕಿತ್ತು. ಕನಿಷ್ಠ ಗುರುವಾರವಾದರೂ ಎರಡರೊಳಗೊಂದು ಫಲಿತಾಂಶ ಸಿಗುತ್ತದೆ ಎಂದು ಸರಕಾರ ನಿರೀಕ್ಷಿಸಿತ್ತು. ಆದರೆ, ಪ್ರತಿಪಕ್ಷಗಳು ವಿಧೇಯಕದ ಮೇಲೆ ಚರ್ಚೆ ನಡೆಸುವ ಮುನ್ನವೇ `ಆಯ್ಕೆ  ಸಮಿತಿ' ರಚನೆಗೆ ವಿನಂತಿಸುವ ಮೂಲಕ ಹೊಸ ಅಸ್ತ್ರ  ಪ್ರಯೋ ಗಿಸಿದವು. ಆದರೆ ಇದನ್ನು ಸಮರ್ಥವಾಗಿ ಎದುರಿಸಲು ಸರ್ಕಾರದ ಬಳಿ ಸೂಕ್ತ ಪ್ರತ್ಯಸ್ತ್ರವಿಲ್ಲದೆ ಪರದಾಡುವಂತಾಯಿತು. ಪರಿಷತ್ತಿನಲ್ಲಿ ಸದನ ಆರಂಭವಾಗುವ ಮುನ್ನವೇ ಪ್ರತಿಪಕ್ಷಗಳು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಮುಂದೆ ಪರಿಶೀಲನಾ ಸಮಿತಿಗಾಗಿ ವಿನಂತಿ ಮಂಡಿಸಿದ್ದವು. ಈ ಸಂಬಂಧ ಪ್ರತಿಪಕ್ಷ ನಾಯಕ ರೊಂದಿಗೆ ಮುಖ್ಯಮಂತ್ರಿ ನೇತೃತ್ವದ ನಿಯೋಗ ನಡೆಸಿದ ಸಂಧಾನವೂ ಫಲನೀಡಲಿಲ್ಲ. ಹೀಗಾಗಿ ಪರಿಷತ್ತಿನಲ್ಲಿ ವಿಧೇಯ ಕದ ಮೇಲೆ ದಿನವೀಡೀ ಚರ್ಚೆ ನಡೆದರೂ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ